ಚಿತ್ರಾ. ವಿ 💙   (ಚಿತ್ರಾ✍️)
64 Followers · 14 Following

राधे श्याम 💙
Joined 22 August 2019


राधे श्याम 💙
Joined 22 August 2019
21 NOV 2021 AT 21:36

ये हालात हैं जनाब
बदलते रहते हैं ,
अपने आप से लड़कर
संभलते रहते हैं....

-



ಯಶಸ್ಸು

ಯಾವಾಗ ಸಿಗುತ್ತೆ ಯಶಸ್ಸು ? ಕಠಿಣ ಪರಿಶ್ರಮದಿಂದ.
ಯಶಸ್ಸು ಎಂದರೆ ಅದು ಸತತ ಪ್ರಯತ್ನದ ಪ್ರತಿಫಲ !

ಯಾಕೆ ನಾನು ಈ ಯಶಸ್ಸಿನ ಬಗ್ಗೆ ಮಾತನಾಡುತ್ತಾ ಇದ್ದೇನೆ ಅಂದರೆ ನಾನು ಕೆಲವು ದಿನಗಳ ಹಿಂದೆ ಈ ರೀತಿ ದಿನಕ್ಕೊಂದು ವಿಷಯದ ಬಗ್ಗೆ ಬರೆಯುತ್ತೇನೆ ಅಂತ ನಿರ್ಧಾರ ಮಾಡಿದೆ, ಅದಕ್ಕೆ ಪ್ರೇರಣೆ ನಮ್ಮ ಕನ್ನಡ ಅಧ್ಯಾಪಕರಾದ ಧೀರಜ್ ಸರ್. ಕಾರಣ ಅವರು ದಿನಕ್ಕೊಂದು ಸ್ಟೇಟಸ್ ಕತೆಗಳನ್ನು ಬರೀತಾ ಇದ್ದರು. ನಾನೋ ಒಂದು ವಾರದವರೆಗೆ ಬಹಳ ಶ್ರದ್ಧೆ ಹಾಗೂ ಕುತೂಹಲದಿಂದ ಬರೆದೆ. ನಂತರ ಕೆಲವು ಸಣ್ಣ ಅಡೆತಡೆಗಳಿಂದ ಅದನ್ನು ಬಿಟ್ಟು ಈಗ ಮನಸ್ಸು ಬಂದಾಗ ಮಾತ್ರ ಬರೆಯುತ್ತಾ ಇದೀನಿ . ನಮ್ಮ ಸರ್ ಅವರ ಮೊದಲ ನೂರು ಕತೆಗಳ ಪುಸ್ತಕ ಇಂದು ಬಿಡುಗಡೆಯಾಯಿತು.
ಅವರಿಗೂ ಅದೆಷ್ಟೋ ಅಡೆತಡೆಗಳು ಬಂದಿರಬಹುದು ಅವುಗಳನ್ನು ಹಿಮ್ಮೆಟ್ಟಿ ನಿಂತ ಅವರಿಗೆ ಇಂದು ಯಶಸ್ಸಿನ ಯಾತ್ರೆ ಆರಂಭವಾಗಿದೆ . ಇಷ್ಟರೊಳಗೆ ಅವರದು ೪೫೧ ಕತೆಗಳು ಮುಗಿದಿವೆ. ಹಾಗೇ ಇದು ಪಯಣದ ಆರಂಭ ಅಷ್ಟೇ , ಈ ಪಯಣ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ. ಹಾಗೇ ಈ ಬರಹದ ಮೂಲಕ ನಿಮಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಗುರುಗಳೇ.

-



Farewell

The word itself brings "tears in eyes , memories in mind , and emotions in heart. "
Farewell is not an end , it's just an end of a page , in a book called life. It is a beginning of a new page of that book.
In farewell many of us will cry for those things which we used to laugh earlier, and will laugh for those things which we used to cry.
Farewell is a moment where everyone will feel like " being missed something." Even if we think that this is the worst journy of my life .
After that life will go on that's a different thing. But that moment will going to be the precious one.
So finally we can say that farewell is a mixture of tears , laughters , memories, feelings and emotions which will last forever.

-


23 SEP 2021 AT 23:34

World Peace Day

Peace is something that we all want , that too 24*7 .
In our college we had a session on this topic . Some of us felt it like very cool session and some might not !
Resource person of the conveyed the thing in very simple manner , that everyone out there can relate it to their life , at some or the other point of time.
She said that Peace is something which is there in our mind itself , But we are searching for it in some so called peaceful places , like Hills , beaches etc .
So finally the thing is “satisfaction is Peace and Peace is Happiness “ so this is how she concluded the session .
And I think All of us totally agree with it .
So Try to Satisfy your soul first and then the rest ,
Try to Change yourself first , then the rest will change automatically .

-


23 SEP 2021 AT 23:28

ತುಂಬಿದ ಕೊಡ ತುಳುಕುವುದಿಲ್ಲ

ಈ ಗಾದೆ ಮಾತನ್ನು ನಾವೆಲ್ಲ ಕೇಳಿರುತ್ತೇವೆ , ಈ ವಿಷಯದ ಬಗ್ಗೆ ನಾನು ತುಂಬಾ ಸಲ ಯೋಚನೆ ಮಾಡಿದ್ದೆ, ಆದರೆ ಬರೆಯುವ ಅವಕಾಶ ಇಂದು ಒದಗಿ ಬಂದಿದೆ .
ನಮ್ಮ ಸರ್ ಒಬ್ಬರು ಮಹಾನ್ ವ್ಯಕ್ತಿಯ ಬಗ್ಗೆ ಹೇಳಿದ್ದರು , ಆಗ ನನಗೆ ಈ ಗಾದೆ ಮಾತು ನೆನಪಿಗೆ ಬಂತು . ಸರ್ ಹೇಳಿದರು ಆ ವ್ಯಕ್ತಿ ತುಂಬಾನೇ ಸಾಧನೆ ಮಾಡಿದ್ದಾರೆ ಆದರೆ ಅವರದು ತುಂಬಾ ಸರಳ ವ್ಯಕ್ತಿತ್ವ , ಅಷ್ಟೇ ಅಲ್ಲದೆ ಕಿಂಚಿತ್ತು ಅಹಂಕಾರವಿಲ್ಲ ಎಂದು.
ಆಗ ಅನ್ನಿಸಿತ್ತು ಹೌದಲ್ವಾ ನಾವು ನಮಗೆ ಅರ್ಧಂಬರ್ಧ ಗೊತ್ತಿರುವ ವಿಷಯದ ಬಗ್ಗೆ ಎಲ್ಲ ತಿಳಿದವರಂತೆ ವಾದ-ವಿವಾದಕ್ಕೆ ಇಳಿಯುತ್ತೇವೆ. ಆದರೆ ಆ ವಿಷಯದ ಬಗ್ಗೆ ಎಲ್ಲಾ ತಿಳಿದಿರುವಂತಹ ವ್ಯಕ್ತಿಗಳು ವಾದ ವಿವಾದಕ್ಕೆ ಇಳಿಯದೆ , ವಾದ ಮಾಡುವವರನ್ನೂ ತಡೆಯದೆ ,ವಾದ-ವಿವಾದ ಮುಗಿದ ಬಳಿಕ ನಮಗೆ ಅರ್ಥಾತ್ ವಾದ
ಮಾಡಿದವರಿಗೆ ಅವರ ತಪ್ಪನ್ನು ತಿಳಿ ಹೇಳುತ್ತಾರೆ ಹೌದಲ್ವಾ ?
ಕೊನೆಯದಾಗಿ ಹೇಳೋದಾದ್ರೆ ಈ ವಾದ ವಿವಾದಕ್ಕೆ ಇಳಿಯುವ ಮೊದಲು (ಬದಲು) ಆ ವಿಷಯದ ಕುರಿತು ಅಧ್ಯಯನ ಮಾಡುವುದು ಉತ್ತಮ.

-


18 SEP 2021 AT 12:07

ಇದ್ದು ಇಲ್ಲದ ಹಾಗೇ

ಧನವಿದ್ದರೇನು ಒಳ್ಳೆಯ ಮನವಿಲ್ಲದೆ
ನಗವಿದ್ದರೇನು ಮೊಗದಲ್ಲಿ ನಗುವಿಲ್ಲದೆ
ಆತ್ಮೀಯರಿದ್ದರೇನು ಮನಸಿಗೆ ಹಿತವಿಲ್ಲದೆ
ಹೆಣ್ಣು ಹೊನ್ನು ಇದ್ದರೇನು ಆರಡಿ ಮಣ್ಣು ಇಲ್ಲದೆ
ಏನಿದ್ದರೇನು ಆತ್ಮ ತೃಪ್ತಿಯಿಲ್ಲದೆ
ಯಾರಿದ್ದರೇನು ಭಗವಂತನ ಕೃಪೆಯಿಲ್ಲದೆ...

-



Ganesha

We have a belief that if we pray lord Ganesha before starting any work , we will succeed. In hindi we have a proverb " Shree Ganesh karna " which just mean let's start something.
I am sure that everyone of us know him , most of children treat him as their best friend .
And Ganesha Chaturthi is a festival where everyone will take place irrespective of their caste , religion etc . But the saddest part of this festival is we will through him into a river after few days of his Pratishthapan it might a day , 3 days or a week it left to them . I don't know why we are following this tradition ? Whatever it may be but this festival units the family and brings lots of happiness.
I have chosen this topic because as I have mentioned earlier this is a new Start or a new path in literature (writing in English).
So finally we all love him , and will pray for prosperity
Ganapati Bappa Morya....

-


30 AUG 2021 AT 18:41

ಕೃಷ್ಣ ಜನ್ಮಾಷ್ಟಮಿ

ಜನುಮದಿನವಿಂದು ನಿನ್ನದು
ನಾನೇನ ನೀಡಲಿ ಜಗದೊಡೆಯ
ನಿನಗೆ ಈ ಜಗತ್ತೇ ನಿನ್ನದು....
ಜನುಮ ದಿನದ ಶುಭಾಶಯಗಳು
ಜಗದ್ಗುರು ನಿನ್ನ ಚರಣಗಳಿಗೆ
ನಮ್ಮ ವಂದನೆಗಳು.....
ನಮ್ಮ ಮೇಲಿರಲಿ ನಿನ್ನ
ಆಶೀರ್ವಾದ
ಎಲ್ಲೆಡೆ ಸಂತೋಷ
ತುಂಬಿರಲಿ ಸದಾ....

-


26 AUG 2021 AT 22:49

ಧಾರಾವಾಹಿ

ನಮ್ಮಲ್ಲಿ ಕೆಲವರ ದಿನವಂತೂ ಈ ಧಾರಾವಾಹಿಗಳನ್ನು ನೋಡದೆ ಮುಗಿಯುವುದೇ ಇಲ್ಲ . ಇನ್ನು ಕೆಲವರಿಗೆ ಧಾರಾವಾಹಿ ಎಂದರೆ ಆಗುವುದಿಲ್ಲ . ಇನ್ನೂ ಕೆಲವರಿದ್ದಾರೆ ಅವರ ವಿಶೇಷತೆ ಏನೆಂದರೆ ಅವರು ಮೊದಮೊದಲು ನಾನು ಈ ಧಾರಾವಾಹಿಗಳನ್ನು ನೋಡುವುದೇ ಇಲ್ಲ ಅಂತಾರೆ ಆಮೇಲೆ ಒಂದು ಎರಡು ದಿನದ ನಂತರ ಅವರೇ ಆ ಧಾರಾವಾಹಿಗಳ ಕಥೆ ಹೇಳುತ್ತಾರೆ ಅಥವಾ ಕೇಳುತ್ತಾರೆ !
ಅಂದ ಹಾಗೆ ನೀವು ಯಾವ ಗುಂಪಿನಲ್ಲಿ ಬರುತ್ತೀರಾ ?
ಇನ್ನು ಈ ಧಾರಾವಾಹಿಗಳ ಬಗ್ಗೆ ಏನು ಹೇಳೋಣ ಹೇಳಿ ಎಲ್ಲರದೂ ಒಂದೇ ರೀತಿಯ ಕಥೆ , ತೋರಿಸುವ ರೀತಿ ಮಾತ್ರ ಬೇರೆ , ಪಾತ್ರಧಾರಿಗಳು ಬೇರೆ ಹಾಗೂ ಧಾರಾವಾಹಿಯ ಹೆಸರುಗಳು ಬೇರೆ ಅಷ್ಟೇ ! ಆ ಧಾರಾವಾಹಿಯ ಪ್ರೋಮೋ ನೋಡಿಯೇ ೧೦೦೦ ಸಂಚಿಕೆಯಲ್ಲಿ ತೋರಿಸುವ ಕಥೆಯ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ , ಆದರೂ ಅದೇನೋ ಹುಚ್ಚು ನೋಡಬೇಕು ಅನ್ನಿಸುತ್ತದೆ ; ಹೇಗೆ ಕೆಲವು ಜಂಕ್ ಫುಡ್ ಗಳು ಜೀವಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ತಿನ್ನುತ್ತೇವೆಯೋ ಹಾಗೆಯೇ :
ನನಗೆ ಒಮೊಮ್ಮೆ ಈ ಧಾರಾವಾಹಿಗಳಲ್ಲಿ ನಟಿಸುವವರನ್ನು ನೋಡಿದಾಗ ಅನ್ನಿಸುತ್ತದೆ ಕೇವಲ ನಾವು ಕೆಲವೇ ಜನ ಈ ಕ್ಷೇತ್ರದಿಂದ ದೂರ ಉಳಿದಿದೀವೆ ಏನೋ ಬಾಕಿ ಎಲ್ಲರೂ ಧಾರಾವಾಹಿಗಳಲ್ಲಿ ಅಭಿನಯಿಸುತ್ತಾರೆ ಏನೋ ಎಂದು ? ಹಾಗೆಯೇ ಈ ದಿನಕ್ಕೆ ಒಂದು ಹೊಸ ಹೊಸ ಧಾರಾವಾಹಿಗಳನ್ನು ನೋಡಿದಾಗ ಇಷ್ಟೊಂದು ವಿಧದ ಕಥೆಗಳನ್ನು ಹೇಗೆ ಸೃಷ್ಟಿಸುತ್ತಾರೆ ಎಂದು ?ಏನೇ ಇರಲಿ ಈ ಧಾರಾವಾಹಿಗಳು ಅದೆಷ್ಟೋ ಜನರ ಬಾಳಗೆ ಆಧಾರವಾಗಿವೆ , ಅದು ನಟರಿಗೆ ಇರಬಹುದು ಹಾಗೆಯೇ ವೀಕ್ಷಕರಿಗೆ ಸಹ !
ಕೊನೆಯದಾಗಿ "ಅವರವರ ಭಾವಕ್ಕೆ ಅವರವರ ಭಕುತಿ" ಎಂಬಂತೆ ಇಷ್ಟ ಇರುವವರು ನೋಡಲಿ , ಇಷ್ಟ ಇಲ್ಲದೆ ಇರುವವರು ಅವರ ಅಭಿರುಚಿಗೆ ತಕ್ಕಂತೆ ಇರಲಿ .

-


25 AUG 2021 AT 22:52

ಮನಸ್ತಾಪ

ಈ ಮನಸ್ತಾಪ ಅನ್ನೋದು ಎಷ್ಟು ವಿಚಿತ್ರ ಅಲ್ವಾ ? ಒಂದೇ ನಿಮಿಷದಲ್ಲಿ ಒಬ್ಬ ಆತ್ಮೀಯ ವ್ಯಕ್ತಿ ಅಪರಿಚಿತನಾಗಿ ಬಿಡ್ತಾನೆ ! ಹಾಗಂತ ಅದೂ ಸಹ ಕೇವಲ ಕೆಲವು ಹೊತ್ತಿನವರೆಗೆ ಮಾತ್ರ .(ಕೇವಲ ಕೆಲವು ಸಂದರ್ಭಗಳಲ್ಲಿ)
ಈ ಮನಸ್ತಾಪದಲ್ಲಿ ವಿಧಗಳಿಲ್ಲ ಆದರೆ ಅದು ಬೀರುವ ಪರಿಣಾಮಗಳಲ್ಲಿ ವಿಧಗಳಿವೆ ; ಕೆಲವು ಮನಸ್ತಾಪಗಳು ಕೇವಲ ಕೆಲವು ಸಮಯದವರೆಗೆ ಮಾತ್ರ ಇರಬಹದು , ಇನ್ನೂ ಕೆಲವು ಜೀವನದುದ್ದಕ್ಕೂ ಸಾಗಬಹುದು !
ಇನ್ನು ಕೆಲವು ಅಂತೂ ಕೇಳುವುದೇ ಬೇಡ ಯಾವ ಹಂತಕ್ಕೆ ಹೋಗುತ್ತದೆ ಎಂದರೆ ಯಾವ ವಿಷಯಕ್ಕೆ ಮನಸ್ತಾಪ ಆಗಿದೆ ಎಂಬುದೇ ಮರೆತು ಹೋಗಿರುತ್ತದೆ , ಆದರೆ ಮನಸ್ತಾಪದ ನಟನೆ ಮಾತ್ರ ಮುಂದುವರೆದಿರುತ್ತದೆ .
ನನಗೆ ಒಂದು ಪುಸ್ತಕದ ನೆನಪಾಗ್ತಾ ಇದೆ " ಕೊಂಡಿ ಕಳಚುವ ಮುನ್ನ ಸ್ವಲ್ಪ ಮಾತಾಡಿ ಪ್ಲೀಸ್ " ಈ ಪುಸ್ತಕದ ಬರಹಗಾರರ ನೆನಪಾಗ್ತಾ ಇಲ್ಲಾ ! ನಿಮಗೆ ತಿಳಿದಿದ್ದರೆ ನನಗೂ ಸಹ ತಿಳಿಸಿ : ಈ ಪುಸ್ತಕ ಎಲ್ಲಿಯಾದರೂ ನಿಮಗೆ ಸಿಕ್ಕಿದರೆ ಖಂಡಿತಾ ಓದಿ ; ಮನಸ್ತಾಪ ಮತ್ತು ಅದರ ಪರಿಣಾಮದ ಬಗ್ಗೆ ವಿವರವಾಗಿ ಹಾಗೂ ಅರ್ಥ ಪೂರ್ಣವಾಗಿ ಬರೆದಿದ್ದಾರೆ ಹಾಗೇ ಸರಳವಾಗಿಯೂ , ಆಡುಭಾಷೆಯಲ್ಲಿ ಇದೆ . ಇನ್ನೂ ಕೊನೆಯದಾಗಿ ಹೇಳೋದಾದ್ರೆ ಯಾರ ಮನಸ್ಸನ್ನೂ ನೋಯಿಸದೆ , ಯಾರ ಮಾತಿನಿಂದನಲೂ ನಿಮ್ಮ ಮನಸ್ಸನ್ನು ನೋಯಿಸಿಕೊಳ್ಳದೆ " ಮನಸ್ತಾಪ " ಈ ಶಬ್ದದಿಂದ ದೂರವೇ ಉಳಿದರೆ ನಮಗೂ , ನಿಮಗೂ , ಎಲ್ಲರಿಗೂ ಉತ್ತಮ ಎಂಬುದು ನನ್ನ ಅಭಿಪ್ರಾಯ .
ಮತ್ತೆ ನಿಮ್ಮದು ?

-


Fetching ಚಿತ್ರಾ. ವಿ 💙 Quotes