11 SEP 2019 AT 6:02

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಮ್ಮ

ಅಮ್ಮ ಎಂದರೆ ಎಂತ ಆನಂದ ಮನಸಿಗೆ
ಏನೋ ಖುಷಿ ಅಡಗಿದೆ ಈ ಹೆಸರಲ್ಲಿ

ನನ್ನ ನಗುವಿನ ಸಿರಿ ನೀನು
ನಿನ್ನಿಂದ ಕಲಿತದ್ದು ಎಂದೂ ಮರೆಯಲಾಗದು

ಎಲ್ಲರನ್ನೂ ಕಾಯುವ ಆ ಶಿವನು
ನಿನ್ನ ಮಮತೆಯನ್ನು ಕಂಡು ಶರಣಾದನು

ಭೂಮಿಯ ಮೇಲೆ ತ್ಯಾಗ ಪ್ರತೀಕ ನೀನು
ನಿನಗೆ ಸಮಾನರು ಇನ್ಯಾರು?

ಕರುಣೆಯೇ ಅಳಿಸಿದ ಮಾನವ ಲೋಕದಲ್ಲಿ
ಅದನ್ನು ಉಳಿಸಿದ ಕರುಣಾಮಯಿ ನೀನು

ನನ್ನ ಕಣ್ಣೀರಿಗೆ ಕಣ್ಣೀರಾಗುವವಳು
ನಗುವಿನಲ್ಲಿ ನಗುವಾಗುವವಳು
ಸ್ನೇಹಿತೆ ಯಂತೆ ಜೊತೆಗೆ ಇರುವವಳು

ನಾ ಕಂಡಿಲ್ಲ ನಿಜವಾದ ದೇವರನ್ನು
ಇರಬಹುದು ಇವಳಂತೆ ಅವನು
ಪ್ರೀತಿಗೆ ಇನ್ನೊಂದು ಹೆಸರು ನೀನು
ನಿನ್ನ ಪಡೆದ ನಾನು ಪುಣ್ಯವಂತನು
I love u Amma😘

- ಭಾವನೆಗಳ_ಅಂಚೆ_ಪೆಟ್ಟಿಗೆ