Savita pujar   (ಸವಿತಾ ನರೇಶ್ ಕಾಮತ್(ಅಹನಿ))
786 Followers · 256 Following

read more
Joined 24 August 2018


read more
Joined 24 August 2018
23 JUN 2019 AT 20:36

ಅವನು ಪ್ರೇಮ ಕಾವ್ಯ ಪಂಡಿತ,
ಅವನ ಮಾತುಗಳೆಲ್ಲ ಶೃಂಗಾರ ರಸದಿಂದಲೇ ಅಲಂಕೃತ, ಮುದ್ದು ಮಾಡೆನ್ನ ಮುನಿಸನ್ನು
ತಣಿಸುವದವನಿಗೆ ತುಂಬಾನೇ ಕರಗತ
ಅವನೆನ್ನ ಅಣುಅಣುವನಿಲ್ಲೂ ಅನವರತ
ಹರಿಸುತ್ತಿರುವ ಅನುರಾಗದಮೃತ

-


10 AUG 2021 AT 20:59

ಕಹಿನೆನಪುಗಳ ಕಾಲನ ಮಡಿಲಿಗೆ ಹಾಕಿದ್ದಾಗಿದೆ
ಕಾಲಕ್ರಮೇಣ ಕಾಲವಾಗಲೆಂದು .

-


10 AUG 2021 AT 20:53

ಹೃದಯದ ಕಣ್ಣು ಮಂಜಾಗಿ
ನೆನೆಪುಗಳು ಮಸುಕಾಗುತ್ತಿವೆ

ಅಪೂರ್ಣ-ಅಸ್ಪಷ್ಟ ಜಂಟಿಖಾತೆಯಲ್ಲಿ
ಇದ್ದೂ ಇಲ್ಲದಂತೆ ದಿನ ನೂಕುತ್ತಿವೆ.

ಪರಿಚಿತವಾಗುಳಿದಿವೆ,ಮತ್ತೆ ಎದುರಾದಾಗ
ಒಂದು ನಗೆ ಬೀರಬಹುದಷ್ಟೇ.

-


9 AUG 2021 AT 23:07

ನಿದಿರೆಯ ನೆಪವರಸಿ,ಕಣ್ಣೆದುರಿಲ್ಲದ ಮನದರಸನನ್ನು
ಕನಸಿನ ಸೇತುವೆಯಲಿ ಸಂಧಿಸಿ ಸಂಭ್ರಮಿಸಲು.

-


9 AUG 2021 AT 22:58

ಭಕ್ತಿಯ ಬಲದೆದುರು ಭಗವಂತನೂ ಸೋಲುವನು
ಧರ್ಮದ ನಿಷ್ಠೆಯೆದುರು ತಪಸ್ವಿಗಳು ತಲೆಬಾಗುವರು
ಪ್ರೀತಿಯ ಪರಿಪಕ್ವತೆಗೆ ಸೃಷ್ಟಿಯೂ ಸಂಭ್ರಮಿಸುವುದು
ಭಕ್ತಿ ,ಪ್ರೀತಿ,ಧರ್ಮದ ಪ್ರಸಾದಕ್ಕಾಗಿ ಪರಶಿವನ
ಪಾದಗಳಲಿ ಮನಸುಮವನರ್ಪಿಸೋಣ
ಪವಿತ್ರ ಶ್ರಾವಣ ಮಾಸದಿ ಶಿವಸ್ಮರಣೆಯಲ್ಲಿ
ಹೃದಯದ ಕತ್ತಲೆಗೆ ಕಿರುದೀಪವಾದರೂ ಉರಿಸೋಣ.

-


21 JUN 2021 AT 23:40

ಒಲವ ಧಾರೆಯೆನೆರೆವ ಗೆಳಯ ಸಿಗುವದದೆಷ್ಟು ಪುಣ್ಯವೋ,
ಮಮತೆಯ ಮಹಾಪೂರವನೇ‌ ಹರಿಸುವ
ಮನೆ ಸಿಗುವುದು ಅದಕ್ಕಿಂತಲೂ ಪುಣ್ಯ.

-


20 JUN 2021 AT 15:12

ನನ್ನ ಅಪ್ಪನೆಂದರೆ ಅವ್ವನಷ್ಟು ಸಲಿಗೆಯಲ್ಲ,
ಆದರೆ ಅಪ್ಪನೊಂದಿಗಿನ ಭಾಂದವ್ಯದ ಬೆಸುಗೆಯಿದೆಯಲ್ಲ ಅದು,
ಒಂದು ದಿನದ love you appa
ಸ್ಟೇಟಸ್ ಸಂಭ್ರಮಕ್ಕಷ್ಟೇ ಸೀಮಿತವಲ್ಲ,
ನಾಲ್ಕು ಸಾಲುಗಳಲ್ಲಿ ಕವಿತೆಯಲ್ಲಿ
ಕಟ್ಟಿಕೊಡುವಷ್ಟು ಸುಲಭವೂ ಅಲ್ಲ
ಅಪ್ಪನೆಂದರೆ ಹದವರಿತು ಹಿತವೀವ ಅಕ್ಷಯಪಾತ್ರೆಯ ಪರಮಾನ್ನದಡುಗೆ.

-


19 JUN 2021 AT 9:40

ಪ್ರೀತಿಯ ಅಪ್ಪಾಜಿ,

ಸಣ್ಣೋಳಿದ್ದಾಗ ನೀನು ಸ್ವಲ್ಪ ಗದರಿದ್ರೂ ಕಣ್ಣೀರು ಕಪಾಳಕ್ಕ ಬರೋದು, ಅಂಜಿಕಿ & ಪ್ರೀತಿ ಒಳಗ ಅಂಜಿಕಿ ತೂಕನ ಹೆಚ್ಚಿತ್ತು.ತಿಳಿವಳಿಕಿ ಬಂದಾಗ ನಿಮ್ಮ ಕೋಪದ ಹಿಂದಿರೋ ಕಾಳಜಿ ಬರೋಬ್ಬರಿ ತಿಳಿದ ಮ್ಯಾಲ ಪ್ರೀತಿ ತೂಕ ನಮ್ಮಪ್ಪ ಅನ್ನೋ ಗರ್ವದಾಗ ಏರಿತ್ತು‌. ಸರ್ಕಾರಿ ಶಾಲಿ ಮಾಸ್ತರಾಗಿ ಸಾವಿರಾರು ಮಕ್ಕಳ ಭವಿಷ್ಯ ಬರಿತಾ, ಬಂದ ದಾರ್ಯಾಗ ಹಂಗಾ ಹರಿದು ಹೋಗೊ ಪಗಾರೊಳಗ ಬಂದ ಎಲ್ಲಾ ಕಷ್ಟಕ್ಕೂ ಎದೆ ಸೆಟೆಸಿ ನಿಂತು ಗೆದ್ದ ನಿಮ್ಮ ಛಲಾನೇ ನಿಮ್ಮ ದೊಡ್ಡ ಆಸ್ತಿ.

-


14 JUN 2021 AT 22:26

ಮೊದಲ ಹೆಜ್ಜೆ
(Please refer caption)

-


14 JUN 2021 AT 17:20

ಸಣ್ಣಕಥೆ:
ಅವನೊಲವಿನ‌ ನೆರಳನಾಶ್ರಯಿಸಿ ಬಂದವಳಿಗೆ ಅವನ‌‌ ಕೋಪದ ದಳ್ಳುರಿಯ ಪರಿಚಯವಾಗುವಷ್ಟರಲ್ಲಿ ಕಾಲ‌ಮಿಂಚಿ‌ ಹೋಗಿತ್ತು

-


Fetching Savita pujar Quotes