Prathap Gowda  
232 Followers · 27 Following

Insta ID - prathap1836
Joined 4 April 2018


Insta ID - prathap1836
Joined 4 April 2018
10 FEB 2022 AT 22:29

My inside is full of wounds and scratches I don't want to heal from. I want the pain to persist, spread, light the fire and burn every emotion I have got within me that made me suffer. I love nothing but the pain because it keeps me going, it keeps me growing.

-


10 NOV 2021 AT 6:30

ಶತಮಾನಗಳ ಗತದಿಂದ ನನ್ನೊಳಗೆ  ಅವಿತುಕೊಂಡು  ಕುಳಿತಿದ್ದ ನಗುವೊಂದು ಹೊರಬಂದು ಕೇಳಿತು 
"ಹೂವಿನಂತಹ ಮೃದು ಮನಸಿನ ನಿನಗ್ಯಾಕೆ ನನ್ನಂತ ನಗುವೊಂದ ಚೆಲ್ಲಲು ಅಷ್ಟು ಕಷ್ಟವಾಗಿತ್ತು?".
ನಾ ನಗುವ ಸೂಸುತ್ತಾ ನಗುವಿಗೆ ನುಡಿದೆ 
"ನನ್ನ ಮನಸ ಮೃದುಮಾಡಿದ ಜೀವನದ ಕಾಠಿಣ್ಯ ನನ್ನೊಳಗೆ ನೀನಿರುವ ವಿಷಯವನ್ನೇ ಮರೆಸಿ ಅಳುವಿನಲ್ಲೇ ಸಮಾಧಾನ ಪಟ್ಟಿಕೊಳ್ಳಲು ಕಲಿಸಿಬಿಟ್ಟಿತ್ತು" ಬೇಕಾದರೆ ಅಳುವನ್ನೇ ಕೇಳು.
ಅಳುವಿನ ಕಡೆಗೆ ನಾನು ಮತ್ತು ನಗು ಒಟ್ಟಿಗೆ ತಿರುಗಿದೆವು.
ಅಳು ಅದೇನೋ ಹೇಳಹೋಗಿ ಹೇಳಲಾಗದೆ ಗಂಟಲು ಒಣಗಿದಂತೆ ಕೀರಲು ದನಿಯಲ್ಲಿ ಯಾತಿಸುತ್ತಿತ್ತು.
ಆಗ ನಗುವು ಅಳುವಿನ ತಲೆಯನ್ನು ಮೃದುವಾಗಿ ಸವರುತ್ತಾ 
"ಇವನ ಜೀವನದಲ್ಲಿ ನಿನ್ನ ಪಾತ್ರ ಮುಗಿಯಿತು ಗೆಳತಿ, ನೀ ಇನ್ನು ವಿಶ್ರಮಿಸು ನಾನು ಶ್ರಮಿಸುವೆ ಎಂದಿತು"
ಆ ಅತ್ಯಮೂಲ್ಯ ದೃಶ್ಯವನ್ನು ನಾ ನೋಡುತ್ತಾ ಕಣ್ಣು ತುಂಬಿಕೊಳ್ಳುತ್ತಿದ್ದ ಹಾಗೆ ಹನಿಯೊಂದು ಕಂಗಳಿಂದ ಜಾರಿ ಕೆನ್ನೆ ಮೇಲೆ ಹರಿಯಿತು. ತೇವವಾದ ಕೆನ್ನೆಯ ಮೇಲೆ ನಿಷ್ಕಲ್ಮಶ ನಗುವೊಂದು ವಿಜೃಂಭಿಸುತ್ತಿತ್ತು .

- ಪ್ರತಾಪ್ ಗೌಡ




                                                   

-


30 JUN 2021 AT 20:00

ಮಾಯೆ ಮೋಹ ಮಾಯೆ

( ವಿವರಣೆ ಓದಿ 👇)

-


5 JUN 2021 AT 17:15

Psychedelic maaaaaaaye

(Please read the caption)

-


30 AUG 2020 AT 22:51

ಶೃಂಗಾರ ಮತ್ತು ವಿರಹ
( Please read the caption)

-


14 AUG 2020 AT 19:57

ಅವನ ತೋಳುಗಳ ಮಧ್ಯೆ ಅವಳು ಕರಗಿ ನೀರಾಗಬೇಕು
ಆ ನೀರು ಹನಿ ಹನಿಯಾಗಿ ಹರಿಯಬೇಕು,
ಆ ಹನಿಗಳಲ್ಲಿ ಅವನು ನೆನೆಯಬೇಕು.
ಆ ಹನಿಗಳ ಬಿಸುಪು ಅವನ ಮೈಗೆ ತಾಕಿ ಹಬೆಯಾಗಿ, ಕೆಂಡವಾಗಿ, ಬೆಂಕಿಯಾಗಿ ಹೊತ್ತಿ ಉರಿಯಬೇಕು.
ಉರಿಯುವ ಬೆಂಕಿಗೆ ಗಾಳಿಯ ಊದಲು ಹೊರಟ ಅವಳ ಅಧರಗಳು ಮೈಮರೆತು ತುಪ್ಪವ ಸುರಿಯಬೇಕು,
ತುಪ್ಪದ ಆಕ್ರಮಣದಿಂದ ಉದ್ವಿಗ್ನಗೊಂಡು ಬೆಂಕಿಯು ಕಿಡಿಕಾರುತಿರಲು, ಕುಲುಮೆಗೆ ಸಿಲುಕಿದ ಕಬ್ಬಿಣದಂತೆ ಕರಗುವ ದೇಹಗಳ ಮರೆಯಲ್ಲಿ ಅವಿತಿದ್ದ ಎರಡೂ ಆತ್ಮಗಳು ಸಮ್ಮಿಲನಗೊಂಡು ಒಂದಾಗಿಬಿಡಬೇಕು.

-


21 JUN 2020 AT 17:46

ಅಪ್ಪ....

ನುಗ್ಗಿ ಬಡಿಯುವೆನೆನ್ನುವವನ ಗಂಡೆದೆಯೊಳಗಿನ ಗುಂಡಿಗೆ, 
ಭೂಮಂಡಲವನ್ನೇ ಹೆಗಲ ಮೇಲೆ ಹೊತ್ತುನಿಲ್ಲುವೆನೆಂಬುವವನ ತೋಳ್ಬಲ, ಸಪ್ತ ಸಮುದ್ರಗಳನ್ನೂ ಹೀರಿಬಿಡಬಲ್ಲೆನೆಂಬುವವನ ದಾಹ, ಮುಚ್ಚಿಡುವೆನೆಂದುಕೊಂಡೆ ಹಂಚಿಕೊಂಡುಬಿಡುವವಳ ಸ್ನೇಹ.
ಪ್ರಪಂಚವನ್ನೇ ಸುತ್ತಿಬರುವೆನೆಂದು ಹೊರಟುನಿಂತವನ ಹಂಬಲ,
ಹಿಮಪರ್ವತವನ್ನು ಹತ್ತಿತೀರುವೆನೆಂದು ನಡೆದಿರುವವಳ ಬೆನ್ನ ಹಿಂದಿನ ಬೆಂಬಲ.
ಎಳೆಬಿಸಿಲ ಮಂದಹಾಸ, ಮುಗ್ಧ ಮಗುವಿನ ಉತ್ಸಾಹ, ಮುಂಗಾರುಮಳೆಯ ಹಿತ, ಕೆಚ್ಚಲಿಗೆ ಬಾಯ್ಕೊಡಲು ಕಾದುನಿಂತ ಕರುವಿನ ತುಡಿತ.
ಅಂಧಕಾರವನು ಕರಗಿಸಿಬಿಡಬಲ್ಲ ಕಿರಣಗಳ ಕಾಠಿಣ್ಯ, ಕೆಲವು ನತದೃಷ್ಟರಿಗೆ ಮಾತ್ರ ಆಕಾಶದಾಚೆಗೆ ಹಾರಿ ಕೈಚಾಚಿದರೂ ಎಟುಕದ ಶೂನ್ಯ.

-


17 JUN 2020 AT 7:31

ಮಧ್ಯಾಹ್ನದ ಬಿಸಿಲಿಗೆ ಫಳಫಳನೆ ಹೊಳೆಯುತ್ತಿದ್ದ ಬಂಗಾರು ಬಣ್ಣದ ಮೈಯ್ಯ ಮಾಯಾಂಗನೆಯ ನೀಳ ನಡುವ ತಿರುವುಗಳ ಕಂಡು, ಅದೇ ಬೀದಿಯಲ್ಲಿ ಓಡಾಡುತ್ತಿದ್ದ ಪ್ರತಿಯೊಬ್ಬ ಪಡ್ಡೆಹುಡುಗನಿಂದ ಹಿಡಿದು ಹಣ್ಣಣ್ಣು ಮುದುಕರವರೆಗು ಎಲ್ಲರ ಎದೆಯೊಳಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ, ಕೆಂಪಗಿನ ಹೃದಯ ಕಪ್ಪಾಗಿ, ಹಲವಾರು ಭಾವನೆಗಳ ಮಳೆ ಸುರಿಸಿರುವ ಕಾರಣ ಅವರಿಗೆ ಕೆಮ್ಮು, ನೆಗಡಿ, ಶೀತ ಶುರುವಾಗಿ ಮೋಹದ ಚಳಿಯನ್ನು ತಡೆಯಲಾಗದೆ ಮೈನಡುಕವುಂಟಾಗಿದೆ.
ಹಾಗಾಗಿ ಅಳಿದುಳಿದ ಆರೋಗ್ಯವಂತ ಗಂಡುಮಕ್ಕಳು ಮನೆಯಿಂದ ಹೊರಬರುವ ಮುನ್ನ ತಪ್ಪದೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಎಕ್ಸ್ಪೈರ್ ಆಗಿರುವ ವಿಕ್ಸ್ ಆ್ಯಕ್ಷನ್ ೫೦೦ ಮಾತ್ರೆಯ ಜೊತೆಗೆ ಖಾಲಿಯಾಗಿರುವ ಜ಼ಂಡುಬಾಮ್ ಡಬ್ಬವನ್ನು ಜೇಬಲ್ಲಿ ಇಟ್ಟುಕೊಂಡು, ತಮ್ಮ ಪ್ರೇಯಸಿ, ಗೆಳತಿ ಅಥವಾ ಹೆಂಡತಿಯರ ಕೈಯ್ಯನ್ನು ಬಿಡದಂತೆ ಗಟ್ಟಿಯಾಗಿ ಹಿಡಿದುಕೊಂಡೇ ಬರಬೇಕೆಂದು ತಮ್ಮ ಕೆಂಪಗಿನ ಹೃದಯಗಳ ವಿನಂತಿ.

-


14 JUN 2020 AT 16:38

After a hardworking Saturday night shift i woke up to the news of SSR's suicide this afternoon. I have let out all the frustration I had. I mean, why do you even try to inspire someone if you can't inspire your own self?.
This was just a bit more frustration coming. Lemme stop here.
( Please read the caption)👇

-


9 JUN 2020 AT 8:49

ಯಾಕೆ ಹೀಗೆ?...ಯಾಕೆ ಹೀಗೆ?...

( Please read full piece in the Caption)

-


Fetching Prathap Gowda Quotes