Disha H Rai   (ದಿಶಾ ರೈ😍)
126 Followers · 25 Following

ಕನ್ನಡವೆಂದರೆ ಬರಿ ನುಡಿಯಲ್ಲ,ಹಿರಿದಿದೆ ಅದರರ್ಥ....
ಕನ್ನಡ ಬರಿ ಕರ್ನಾಟಕವಲ್ಲ ಅಸೀಮ, ಅದು ಅದಿಗಂತ ;;;
Joined 22 August 2019


ಕನ್ನಡವೆಂದರೆ ಬರಿ ನುಡಿಯಲ್ಲ,ಹಿರಿದಿದೆ ಅದರರ್ಥ....
ಕನ್ನಡ ಬರಿ ಕರ್ನಾಟಕವಲ್ಲ ಅಸೀಮ, ಅದು ಅದಿಗಂತ ;;;
Joined 22 August 2019
24 SEP 2022 AT 22:07

ಸಂಸಾರ ಸಾಗರದಿ ಸಾಗುವ ನೌಕೆಗೆ
ಮೆರುಗು ನೀಡುವ ಬಣ್ಣದ ಆಡಂಬರ ಬೇಕೇ?
ಸಂಬಂಧಗಳ ಒಡಲಲಿ ಆದೊಂದು ಬಿರುಕಿಗೆ
ಬಾಳ ನಾವೆಯೇ ಮುಳುಗದೇ?

ಸಂಸಾರವೆಂಬುದು ಬಂಧನವೇ ಆದರೆ
ಮನೆಯೊಂದು ಪಂಜರವಲ್ಲವೇ?
ಬಂಧಿತ ಹಕ್ಕಿಗೆ ಭಕ್ಷ ಭೋಜನ ನೀಡಲು
ಪ್ರೀತಿ ವಾತ್ಸಲ್ಯದ ಕೊರತೆ ನೀಗುವುದೇ?

ಖುಷಿ ಎಂಬುದು ಮರೀಚಿಕೆಯಾಗಿರುವಾಗ...
ಮೇಲ್ನೋಟದ ಹೊಳಪಲಿ ಬೆರೆತು ಸಂಭ್ರಮಿಸುವುದೇ?
ವಾಸ್ತವವ ಅರಿತು ಕೊರಗುವುದೇ?
ಅಥವಾ ಏನೂ ಅರಿಯದಂತೆ
ಕಾಣದ ತೀರಕೆ ಸಾಗುತಲಿರುವುದೇ?

-


7 MAY 2022 AT 20:27

ಮಳೆಯಲಿ ತೊಯ್ಯುತ ಬಾನೆಡೆ ಮುಖಮಾಡಿರಲು.....
ನನ್ನವರ ಮೊಗಗಳೊಮ್ಮೆ ಕಣ್ಣಿದುರು ಸರಿದಿರಲು.....
ಮನದಿ ಹೀಗೊಂದು ಬಯಕೆಯು ಸುಳಿದಿತ್ತು!!!

ಮಳೆಹನಿಗಳ ನಡುವೆ
ಕಂಬನಿಗಳೂ ಕರಗಬಾರದೆ!

ವರುಣನ ಆರ್ಭಟದ ಸದ್ದೊಡನೆ
ಮನದ ಗದ್ದಲವೂ ಶಾಂತವಾಗಬಾರದೆ!

ಮಣ್ಣ ಕಂಪನು ತರುವ ಗಾಳಿಯೂ
ಬಾಳಿಗೆ ಸಂತಸವ ಹೊತ್ತು ತರಬಾರದೆ!

ಕವಿದ ಕಗ್ಗತ್ತಲೊಡನೆ ಹೀಗೆಯೇ ಒಮ್ಮೆ
ಬಾಳ ಕತ್ತಲೂ ದೂರಸರಿಯಬಾರದೆ!

-


5 JAN 2022 AT 22:21

Why is life either colorful or black and white?
Why will we be either happy or sad?
Why do people either love or hate?
Why there is either up or down?

Why does life have to be extreme always?

-


19 SEP 2021 AT 22:17

When you can't forget any worse part of your life,
just forgive the ones who made it worse!

Not because...
the memories aren't bad enough!
Not because...
the fault of the ones who gave you those aren't big enough!
Not because...
the ones at fault are worth forgiving!

But..
Just forgive..

So that..
you can have a peaceful mind!
So that..
you can bury that part deep down
and
build your own sweet moments there!
So that,..
you can learn to let go!

-


29 APR 2021 AT 20:59

"No matter how much you don't have, there's always so much more of life to be had.
No matter how much sadness there is in life, there are equal amounts of 'maybe-things'll-get-better-someday-soon'."

*ECHO*

-PAM MUÑOZ RYAN

⭐⭐⭐⭐⭐⭐⭐⭐

-


25 APR 2021 AT 1:23

ಬಾಳ ಹಾದಿಯಲಿ ನಮ್ಮ ಪಯಣ ಈ ಕವಿತೆಯಂತೆ
ಜೊತೆಯಾಗಿ ಅರಿವಾಗ ಮನಮುಟ್ಟುವ ಭಾವದಂತೆ
ದೂರಾಗಿ ನಡೆವಾಗ ಬಿಡಿಸಲಾಗದ ಒಗಟಿನಂತೆ
ಏನೇ ಇದ್ದರೂ ಸುಂದರ ಸುಮಧುರ ರಾಗವಂತೆ

ತಪ್ಪು ಒಪ್ಪುಗಳನೆಲ್ಲಾ ಬೇವು-ಬೆಲ್ಲದಂತೆ ಸವಿದು
ಕಷ್ಟ ಸುಖಗಳ ಕಾಲಚಕ್ರದೊಡನೇ ಕಳೆದು
ಸಂಗಾತಿಗಿಂತ ಪ್ರಿಯವಾಗಿರಬೇಕಾದ ಸ್ನೇಹವ
ಬಯಕೆಗಳ ತಕ್ಕಡಿಯಲಿ ತೂಗುತ
ಮನಸ್ತಾಪಗಳ ಬೇಲಿಯ ಹಾಕುತ
ಬಾಂಧವ್ಯದ ಬೆಸುಗೆಯ ಮುರಿದಂತಿದೆ

ತಿದ್ದಿ ತೀಡುವ ಗುಣಕಿಂತ ಸರಿತಪ್ಪುಗಳ ಗಣಿತ ಮೇಲಾಗಿ ಕಂಡು
ಮನಬಿಚ್ಚಿ ಆಡುವ ಮಾತಿಗಿಂತ ಮೌನ ಮೇಲಾಗಿ ಕಂಡು
ಬಂಧನವ ಗಟ್ಟಿಗೊಳಿಸುವ ಶ್ರಮಕ್ಕಿಂತ ದೂರವಿರುವುದೇ ಮೇಲೆನಿಸಿದಾಗ
ಸಂಬಂಧ ಉಳಿಯುವುದೆಂತು... ಪಯಣ ಸಾಗುವುದೆಂತು...

ನೀ ಎನ್ನ ಸ್ನೇಹಿತೆ ಎಂಬುದಕ್ಕಿಂತ,
ನೀ ಎನ್ನ ಸಹೋದರಿ ಎಂಬುದೇ ಎಂದಿಗೂ ಹೆಚ್ಚು!!
ಆ ಬಾಂಧವ್ಯ ಮಾತಿನಲ್ಲಿ ಮುಗಿದರೂ
ಮನದಿ ಎಂದೆಂದೂ ಮುಗಿಯದ ಮುರಿಯದ ಮರೆಯದ 'ಅನು'ಬಂಧವೇ!!

-


19 FEB 2021 AT 12:11

Turned a few pages of life..
A bit backward..

To find something that had been colourful..
Something that had been worth cherishing..
Something that had been my world..

Something that I had left..
Something that had left me..
Something that I had lost...
Something that I had been lost at..

But I am scared,
Scared that when I find...
Every moment, every joy, every success
might turn out to be a mirage!!

A perfect step might turn out to be a mistake..
A boon might turn out to be a bane..
A dream tonight might turn out be a
nightmare tomorrow..

With time everything fades,
So does moments, so does memories..
So does love, so does hatred..
So does success, so does failure..
So does we and so does them..

Never look back, never look beyond
Watch out the step right now and right away!!

-


27 JAN 2021 AT 20:48

ಹಿಂದೊಮ್ಮೆ...
ನೆರಳೇ ಕಾಣದ ಕತ್ತಲ ಮೌನದಿ ನನ್ನನೇ ನಾ ಕಾಣ ಹೊರಟೆ!!


ಈಗೊಮ್ಮೆ...
ಬದುಕ ಕತ್ತಲನೇ ಮೀರುವ ಬೆಳಕ ಚೆಲ್ಲುತ ಬಣ್ಣದ ಲೋಕದೆಡೆಗೆ ಹೆಜ್ಜೆ ಇಟ್ಟೆ!!



ಕತ್ತಲಿನಿಂದ ಬೆಳಕಿನೆಡೆಗೆ ನನ್ನ ಪುಟ್ಟ ಪಯಣ...
ಹೀಗೆ ಮತ್ತಷ್ಟು ದೂರ!!

-


25 JAN 2021 AT 23:16

ಒಂದೊಮ್ಮೆ ನಗುವಾಸೆ ಇನ್ನೊಮ್ಮೆ ಬಿಕ್ಕಿ ಅಳುವಾಸೆ
ಹೀಗೆ ಮತ್ತೊಮ್ಮೆ ದೂರ ಸಾಗುತಾ
ಮಗದೊಮ್ಮೆ ನನ್ನನೇ ನಾ ಕಾಣುವಾಸೆ
ಜಗವನೇ ಒಮ್ಮೆ ಮರೆಯುವಾಸೆ!

ಮನದ ಕೋಣೆಯಲಿ ಆಡದ ಪದಗಳ ಅಡಗಿಸಿದೆ
ಕಂಬನಿಯ ಮಳೆಯಲಿ ಕನಸುಗಳ ತೋಯಿಸಿದೆ
ಹೀಗೊಮ್ಮೆ ಎಲ್ಲವ ಬದಿಗಿಟ್ಟು ಮನಬಿಚ್ಚಿ ಹಾಡುತಾ
ನನ್ನದೇ ಕನಸುಗಳ ನನಸಾಗಿಸುವಾಸೆ!

ನನ್ನವರ ನಲಿವಿನಲಿ ನನ್ನದೇ ನಗುವ ಬಿಂಬಿಸಿದೆ
ಅವರದೇ ದುಃಖದಲಿ ನನ್ನದೇ ಪಾತ್ರವ ರೂಪಿಸಿದೆ
ಹೀಗೊಮ್ಮೆ ಪ್ರತಿರೂಪದ ಕನ್ನಡಿಯ ಒಡೆದು ಸರಿಸುತಾ
ನನ್ನದೇ ಭಾವಗಳ ಬಣ್ಣಿಸುವಾಸೆ!

ಬಾಳ ಪ್ರತಿ ಹೆಜ್ಜೆಯಲಿ ಕೈಹಿಡಿವ ಜೀವಕೆ ಹಂಬಲಿಸಿದೆ
ನನ್ನದೇ ಪಯಣದಲಿ ದಾರಿತೋರುವ ಬೆಳಕನೊಂದ ಅರಸಿದೆ
ಹೀಗೊಮ್ಮೆ ಬಯಕೆಗಳ ಬೆಂಕಿಗೆ ಜಲಧಾರೆಯನೇ ಸುರಿಸುತಾ
ನನ್ನದೇ ಹಾದಿಗೆ ಮಿಂಚುಹುಳುವಾಗುವಾಸೆ!

-


23 JAN 2021 AT 23:28

You are the light at my dark times
And the shadow at my bright times
You are the smile at my happy times
And the tears at my sad times!!!

You are the joy everyone seek
You are the prayer everyone make
Wherever you go, however you be
You make things better as it had to be!!!

Brother is just a name
I can give to our bond
But ours is the bond that travels
towards infinity and beyond!!!

Wanna travel each peak of the world
Gazing at the stars
Singing out lullabies
To brighten up the world!!

Because I wanna be your star
While you are the Moon!!!

-


Fetching Disha H Rai Quotes