ಸಾಲುಗಳ ಬೇಟೆಗಾರ..   (ನೀಚತನದ ನಿರೂಪಕ.. ❣️)
164 Followers · 134 Following

read more
Joined 29 April 2019


read more
Joined 29 April 2019

ದೇವರೂ ಆಟವಾಡುತ್ತಾನೆ!
ಎದುರಾಳಿಯಾಗಿ ಯಾರೂ ಸಿಗದೇ ಇದ್ದಾಗ
ಯಾರದ್ದಾದರೂ ಜೀವನ ಆಯ್ಕೆ ಮಾಡಿಕೊಳ್ಳುತ್ತಾನೆ..

-



ದೂರವೇ ಕುಳಿತುಬಿಡೋಣ,
ಮೌನವಾದರೂ ಪ್ರವಹಿಸಲಿ.
ಮಾತುಗಳಾಡಿ ಉಂಟಾದ ವೈಮನಸ್ಸಿಗೆ
ನಿನ್ನದೇ ತಪ್ಪು, ನನ್ನದು ಸರಿಯೆಂಬ
ಸಬೂಬಿನ ವಾದ ಬೇಡ!

-



ಎದುರಿಗೆಷ್ಟೇ ಬೈದರೂ
ಮನಸಲ್ಲೊಂಚೂರು ಪ್ರೀತಿ ಇಟ್ಟುಕೊಂಡು
ಅಮ್ಮನ ಕೈಲಿ ಇನ್ಯಾರದ್ದೋ ಎದುರಿಗೆ
ಹೊಗಳಿಸಿಕೊಳ್ಳುವ ತನ್ನ ಸೊಸೆಗೆ
ಹೆಂಡತಿಯೆಂದು ಹೆಸರು..

-



ಅವನು ಹಗಲುಗಳಲ್ಲಿ ಕುಡಿಯುತ್ತಿರಲಿಲ್ಲ ಆಮೇಲೆ
ಕುಡಿಯದಿದ್ದರೆ ಹಗಲಾಗುತ್ತಿರಲಿಲ್ಲ ಸಾಕಿ..
ಅವನು ಶರಾಬು ಇಲ್ಲದ ದಿನ ಸತ್ತು ಹೋಗುತ್ತಿದ್ದ
ಸಾಯಲು ಇಷ್ಟವಿರಲಿಲ್ಲ ಸಾಕಿ..

-



ಬೆಳೆಸಿಕೊಂಡೆ ಬೆಳೆದ ಹಲವರು
ಇತಿಹಾಸದ ಚರಿತ್ರೆಯಲುಳಿದರು
ಬೆಳೆಪಕ್ಕದ ಬೇಡವಾದ ಕಳೆಯಂತೆ
ನಿನ್ನೊಳಗೆ ಕೊಳೆಯಿಳಿದಿದೆ..

-



ಎಲ್ಲವೂ ಇದ್ದೂ, ಎಣಿಕೆಗೆ ಬಾರದಿರೆ
ಜೀವ, ಗದ್ದಲವಿಲ್ಲದ ಬೀದಿಗೆ ಮಹಾದ್ವಾರದಂತೆ..

-



ನಿನ್ನ ಮೌನ ಮೆರವಣಿಗೆ
ಅದೆಷ್ಟೋ ಜಲಪಾತಗಳಿಗೆ
ದಾರಿ ತೋರಿತು;
ನಿನ್ನ ಕೊರಳಿನ ನೆರಳಿನಲ್ಲಿ.

-



ಅವನು ಜಗತ್ತಿನ ಮಹಾನ್ ಮಾನವತಾವಾದಿ,
ಬೆಂಕಿ ಬರಹದ ಕ್ರಾಂತಿಕಾರಿ.
ಆದರೆ, ಈಗ ಅವನು ಜಾತಿಯೊಂದರ
ಜಾಹೀರಾತು ಮತ್ತು ಹೆಚ್ಚು
ಮಾರಾಟವಾಗುತ್ತಿರುವ ದೇವರ ಫೊಟೋ!.

-



ಕಿಟಕಿಯಲಿ ಕದ್ದು ಬರುವ ಬೆಕ್ಕಿಗೂ
ಜೋಳಿಗೆಯಲಿ ಅಳುವ
ಕಂದನಿಗೆ ಸಮಪಾಲು ಹೇಳಿದ
ಮಹಾಕಾವ್ಯ ನನ್ನವ್ವ..

-



ಅವಳ ಬೆನ್ನಿಗೆ ನಿಂತಿದ್ದ
ಆ ಒಂಟಿ ಮರದ ನೆರಳು
ಅಷ್ಟೊಂದು ಹಿತವಾಗಿತ್ತು
ಹಗಲು ಏರಿದಂತೆ ಏಕೋ
ಬಿಸಿ ಕಾವು ಕಾರುವುದು..

-


Fetching ಸಾಲುಗಳ ಬೇಟೆಗಾರ.. Quotes