Shruthi Shaiva   (✍️ಶೃತಿ ಶೈವ)
1.3k Followers · 80 Following

read more
Joined 24 December 2018


read more
Joined 24 December 2018
12 APR AT 9:59

ಪ್ರಕೃತಿಯೆ ನಮ್ಮ ಉಸಿರು
ಹಸಿರೆ ನಮ್ಮುಸಿರಿಗೆ ಹೆಸರು
ಬದುಕಿನುದ್ದಕ್ಕೂ ಕಂಡುಕೊಳ್ಳಬೇಕು
ನೆಮ್ಮದಿಯ ನೆಲೆ
ಜೀವಿಸಬೇಕು ಸದಾ
ಪ್ರಕೃತಿಯೊಂದಿಗೆ ಪ್ರೀತಿಯ ಸೆಲೆ
ನಮಿಸಬೇಕು ಎಲ್ಲರೂ
ಕರಮುಗಿದು ವನದೇವತೆಗೆ
ಪೂಜಿಸಬೇಕು ಮನಸ್ಸಿನಿಂದ
ಸೃಷ್ಟಿಯ ವಿಸ್ಮಯತೆಗೆ.
_✍️ಶೃತಿ ಶೈವ





-


12 APR AT 9:44

ಋತುವಿಗೆ ಅನುಸಾರವಾಗಿ ಚಿಗುರೊಡೆಯುವ ಪಚ್ಚಲೆಯ ಸೊಬಗು,
ನಿಸರ್ಗದಲ್ಲಿ ಬದಲಾಗುವ ಹೊಸ ಅನುಭವದ ರಮಣೀಯ ಮೆರಗು.

-


9 APR AT 6:21

ಹಳೇ ಬೇರು ಹೊಸ ಚಿಗುರು
ಸಹಬಾಳ್ವೆಯೇ ನಮ್ಮ ಉಸಿರು
ಬೇವು-ಬೆಲ್ಲ ಸವಿಯೋಣ ಎಲ್ಲರು
ಸಮನ್ವಯದಿ ಬಾಳೋಣ ಒಲವ ಹಸಿರು
ಶ್ರೀ ಕ್ರೋಧಿ ನಾಮ ಸಂವತ್ಸರವು
ಸರ್ವರಿಗೂ ಶುಭವನ್ನು ತರಲಿ
ಯುಗಾದಿ ಹಬ್ಬದ ಶುಭಾಶಯಗಳು.

-


12 MAR AT 7:03

ಶ್ರದ್ಧೆಯಿಂದ ಶ್ರಮಪಟ್ಟು ದುಡಿದಾಗ ಉತ್ತುಂಗಕ್ಕೇರುವ ಉನ್ನತಿ,
ಊಹಿಸದೆ ಬೆಳವಣಿಗೆಯಾಗುವ ಉತ್ತಮ ಸ್ಥಾನಮಾನದ ಪ್ರಗತಿ.

-


11 MAR AT 7:31

ನೆನ್ನೆಗಳ ನೆನೆದು ಚಿಂತಿಸದಿರು
ನಂಬಿಕೆಯಿಂದ ನಾಳೆಯೊಂದಿಗೆ
ಜೀವಿಸು.

-


9 MAR AT 7:04

ಉಪವಾಸ ಶಿವಸ್ತೋತ್ರ ಭಜನೆ ಭಕ್ತರ ಭಕ್ತಿಯ ಆಚರಣೆ,
ಅಜ್ಞಾನ ಅಳಿಸಿ ಸುಜ್ಞಾನದ ಬೆಳಕಿನತ್ತ ವಿಶೇಷ ಜಾಗರಣೆ.

-


8 MAR AT 7:51

ಬದುಕಿನ ಬೆನ್ನಿನ‌ ಮೇಲೆ ಹೊರೆ ಹೊರಲಾಗದ ಜೀವನ,
ಸ್ವೇಚ್ಛೆಯಿಂದ ನಡೆದು ಗುರಿಯಿಲ್ಲದೆ ಸಾಗುವ ಪಯಣ.

-


8 MAR AT 7:29

ಜಗದ ಲಯಕಾರಕ ಕೈಲಾಸವಾಸಿ ನಿರಲಂಕಾರ ಪ್ರಿಯ
ಆಡಂಬರ ಮುಕ್ತ ನಿರಾಭರಣ ಅಭಿಷೇಕ ಪ್ರಿಯ
ಸರ್ವರ ಅಂತರಂಗದಲ್ಲಿ ನೆಲಸಿರುವನು ಶಿವನು
ಅರಿವಿನಾಚೆಗೆ ಅರಿವು ಮೂಡಿಸುವನು ಹರನು

ಎಲ್ಲರಿಗೂ ಮಹಾಶಿವರಾತ್ರಿ
ಹಬ್ಬದ ಹಾರ್ದಿಕ ಶುಭಾಶಯಗಳು.
🌺🙏🌺

-


26 JAN AT 8:18

ಎಲ್ಲರಿಗೂ 75ನೇ ಗಣರಾಜ್ಯೋತ್ಸವ
ದಿನದ ಹಾರ್ದಿಕ ಶುಭಾಶಯಗಳು.
🇮🇳🇮🇳💐💐🇮🇳🇮🇳

-


26 JAN AT 7:58

ಭಾವನೆಗಳ ಬಿತ್ತರಿಸುವ
ಭಾಂದವ್ಯ ಪರಸ್ಪರ
ಭದ್ರವಾಗುತ್ತದೆ.

-


Fetching Shruthi Shaiva Quotes