Dr vishal S h   (Doc_vishal)
51 Followers · 48 Following

Surgeon by profession...!!
Amature writer by heart....!!!
Joined 4 March 2018


Surgeon by profession...!!
Amature writer by heart....!!!
Joined 4 March 2018
8 SEP 2021 AT 16:15

ಸತ್ತ ನೆನಪುಗಳನ್ನು,
ಗೋರಿ ಕಟ್ಟಿದ ಕಂಡ ಕನಸುಗಳನ್ನು,
ಅವಳ ಮುಂಗುರುಳನ್ನು ಮತ್ತೆ ಕೆಣಕಲು,
ಮಳೆಯಂತೆ ಸುರಿಯುತ್ತಿತ್ತು ಕಣ್ಣೀರು,
ಮತ್ತೆ ಪ್ರೀತಿ ಮೊಳಕೆ ಬರಿಸಲು...!!

-


7 SEP 2021 AT 19:02

Bitter a cough syrup,
Silence of a nightingale,
Boredom of sad sea,
Clustered world of random thoughts...!!

-


7 SEP 2021 AT 1:09

ಕಿತ್ತುತಿನ್ನುವ ಒಂಟಿತನ,
ನಿದ್ದೆ ಬರದ ರಾತ್ರಿಗಳು,
ತಿಳಿನೀರಿನಂತೆ ಭಾವನೆಗಳು,
ಅರ್ಧ ಮೂಡಿಬಂದ ಚಂದಿರ,
ಬೆಳದಿಂಗಳ ಬಾನಲ್ಲಿ ಕಪ್ಪು ನಕ್ಷತ್ರಗಳು...!!

-


3 SEP 2021 AT 11:08

ಮನವಿದು ಹೆಜ್ಜೇನು ಸವಿದಂತೆ,
ಶೃಂಗಾರ ಲೋಕದ ಮಧುಪಾನ ಸವಿದಂತೆ,
ಅವಳ ಕಂಗಳಲ್ಲಿ ನಾನು ಕಂಡಂತೆ,
ಸೌಂದರ್ಯ ಲೋಕವೇ ಇವಳಿಗೆ ದೃಷ್ಟಿ ಬೊಟ್ಟು...!!

-


31 AUG 2021 AT 10:20

ಸುಮ್ಮನೆ ಮೊಡನೋಡುವಾಸೆ,
ಮಳೆಹನಿಯಾಗಿ ಭುವಿಗೆ ಮುತ್ತಿಡುವಾಸೆ,
ಜೇನಿಗಾಗಿ ನಿನ್ನ ಮಕರಂದವ ಹೀರುವಾಸೆ..!!

ಒಮ್ಮೆ ಕಪ್ಪು ಕಾಡಿಗೆಯಾಗಿ
ನಿನ್ನ ಕಂಗಳಲ್ಲಿ ಕೂಡುವಾಸೆ,
ನಿನ್ನ ನಗುವಲ್ಲಿ ನನ್ನ ನೋಡುವಾಸೆ,
ನಿನ್ನ ಕನಸಲ್ಲಿ ಬಂದು ಕಾಡುವಾಸೆ...!!

ಮುಗಿಯದ ಕವಿತೆಯಿದು,
ನಿನ್ನ ಆಗಮನಕ್ಕಾಗಿ ಕಾಯುತ್ತಿರುವುದು.....!!

-


30 AUG 2021 AT 10:35

Like the sweetest honey,
Like the salt that adds taste to food..!
Like the spices that evokes the taste buds..!!

But it also feels like,
Unfinished poem,
Black and white painting.
Broken musical strings...!!

It's the freedom and
Also the lonely journey..!!

-


30 AUG 2021 AT 10:29

ಕಾದಿದೆ ಈ ಮನವು,
ನಿನಗಾಗಿ ಜನುಮಜನುಮಗಳಿಂದ,
ನನ್ನ ಹಣೆಯು ನಿನ್ನ ಪಾದದ ಮೇಲೆ,
ನಿನ್ನ ಆಶೀರ್ವಾದ ನನ್ನ ಮೇಲಿರಲು ನನಗೇಕೆ ಭಯ?

ಕೃಷ್ಣಾ ನೀ ಬೇಗನೆ ಬಾರೋ,
ನಿನ್ನ ಪೂಜೆಗಾಗಿ ಕಾದು ಕುಳಿತಿರುವುದು
ಈ ಮನುಜ ಕುಲವು....!!
ನೀ ಬೇಗನೆ ಬಾರೋ ಹೂಗಳು ಬಾಡಿ ಹೋಗುವ ಮುನ್ನ,
ಗಂಧವು ಆರಿಹೋಗುವ ಮುನ್ನ..!!
ಮನವು ಸೋಲುವ ಮುನ್ನ...!!
ಕಾಯುತ್ತಿರುವೆನು ಆ ನಿನ್ನ ನಗುವ ನೋಡಲು
ಕೃಷ್ಣಾ ನೀ ಬೇಗನೆ ಬಾರೋ...!!

-


28 AUG 2021 AT 5:18

ಬಾಳ ಬೆಳದಿಂಗಳು ನೀನು,
ಸಂಕ್ರಾಂತಿಯ ಸಿಹಿ ನೀನು,
ನಿನ್ನ ನೆನಪಲಿ ನಾನು....!!

-


23 AUG 2021 AT 9:40

The hardest thing on earth to do is... waiting for someone...!!
It becomes even more difficult if you don't know whom you are waiting for......!!

-


26 JUL 2020 AT 18:38

ಅವಳ ನೆನಪುಗಳನ್ನು ಮರೆಯಲು,
ನಾನು ಕೊಟ್ಟ ಸಿಹಿಮುತ್ತುಗಳನ್ನು
ಮರಳಿ ಪಡೆಯಲು,
ಜೊತೆಗೆ ಕಂಡ ಸಾವಿರ ಕನಸುಗಳ
ನನಸಾಗಿಸಲು.
ಸಮಯವೇ ಸ್ವಲ್ಪ ನಿಲ್ಲು
ನನ್ನವಳು ಜೊತೆ ಬರುವಳು..!!

-


Fetching Dr vishal S h Quotes