ಮತ್ತೊಂದು ಹೆಜ್ಜೆ ಬದಲಾವಣೆಯ ಕಡೆಗೆ
ಇರುವುದೆಲ್ಲವ ಬಿಟ್ಟು ಇನ್ನೇನೋ ಹುಡುಕಲು
ಇನ್ನೊಮ್ಮೆ ಸಿಕ್ಕಾಗ ಮತ್ತಷ್ಟು ಮಾತುಗಳು
ಇದುವೇ ಸರಿ ಸಮಯ ವಿರಾಮ ಕೊಡಲು.-
Old_Monk
(vi▪️raw▪️gi)
1.7k Followers · 1 Following
⚫ಭಾಷೆ ಕನ್ನಡ ಭಾವನೆ ಕನ್ನಡಿಗ
⚫ #respectwomen
⚫ #respectwomen
Joined 25 April 2018
Old_Monk 5 DEC AT 19:37
Old_Monk 28 NOV AT 12:20
ಮಳೆ ಬರುವ ಹಾಗಿದೆ
ಮೋಡ ಪೂರ್ತಿ ಮುಸುಕಿದೆ
ತುಸು ಮಂದ ಗಾಳಿ ಮನವ ಹಸಿ ಮಾಡುತಿದೆ
ಹಳೆ ಗೆಳೆಯ ನಿನ್ನ ನೆನಪು ತುಂಬ ಕಾಡುತಿದೆ-
Old_Monk 26 NOV AT 9:58
ನೀ ಇದ್ದರು ಇಲ್ಲದಿದ್ದರೂ ನಾನಂತೂ ಇರುವೆ
ಅಳತೆಗೆ ಸಿಗದ ಆಕಾಶದಂತೆ ವಿಶಾಲವಾಗಿ
ಅಗೆದಷ್ಟು ಮುಗಿಯದ ಭೂಮಿಯಂತೆ ಆಳವಾಗಿ
ನಿನ್ನ ವಿರಹದಗ್ನಿಯಲಿ ಸುಟ್ಟ ದೇಹದಿಂದ ಹೊರಬಂದ
ಕೊನೆಯಿರದ ಆತ್ಮವಾಗಿ
ನಾನಂತು ಇರುವೆ, ಖಂಡಿತ ನಾನಂತೂ ಇರುವೆ-
Old_Monk 22 NOV AT 19:50
ಭಿಕ್ಷೆ ಕೊಟ್ಟು ಬೀಗಬೇಡ
ದಾನ ಕೊಟ್ಟರೆ ಗರ್ವ ಬೇಡ
ಕೊಟ್ಟೆ ಎಂದರೆ ಕೆಟ್ಟು ಹೋಗುವೆ
ಕೊನೆಗೆ ಎಲ್ಲ ಬಿಟ್ಟು ಹೋಗುವೆ-