ಲೇ ಚೆನ್ನಿ..
ನೀ ಕೇಳುತ್ತಿರುವೆ
ನನ್ನ ಸಮಯವನ್ನಾ
ನಾ ನೀನಗಾಗಿ
ನೀಡಿರುವೆ ನನ್ನ ಜೀವನವನ್ನಾ..!-
ಬಣ್ಣದ ಮಾತಿಗೆ ಮರುಳಾಗಿ..!
ಯಾರೊ ಎನೊ ಹೇಳ್ತಾರೆ ಅಂತ ಆತುರದ ನಿರ್ಧಾರ ತೊಗೊಂಡು ಯಾರನ್ನೊ ಆಯ್ಕೆ ಮಾಡಬೇಡಿ..!!
ಮುಖವಾಡದ ಬದುಕು ಜಾಸ್ತಿ ದಿನ ಬಾಳೊದಿಲ್ಲ ಸ್ವಲ್ಪ ಯೋಚನೆ ಮಾಡಿ ಆಯ್ಕೆ ಮಾಡಿ ತಪ್ಪದೆ ಮತದಾನ ಮಾಡಿ ನೆಮ್ಮದಿಯ ಜೀವನಕ್ಕೆ, ಸಮೃದ್ದಿ ಭಾರತಕ್ಕೆ-
ಬಿಸುವ ತಂಗಾಳಿಗೆ ಕೆದರಿದ
ಕೆಶರಾಶಿಯ ಮರೆಯಲಿ
ತುಟಿಯ ಕಚ್ಚಿ ಗುಳಿಕೆನ್ನೆಯ ಮಡಿಲಲ್ಲಿ
ಮುಗುಳು ನಗೆಯ ಬೀರುತ ನಿಂತರೆ ನೀನು..!!
ಬಾನಿಗೆ ರಂಗೋಲಿಯ ಹಾಕಿ
ಹೊಳಪನ್ನು ಹೆಚ್ಚಿಸುವ ಕಾಮನಬಿಲ್ಲನ್ನು
ನಾಚಿಸುವಂತ ಸೌಂದರ್ಯವತಿ ನೀನು..!!-
ಲೇಖನಿ ಹಿಡಿದು ಕುಳಿತಿರುವೆ
ವರ್ಣಿಸಲು ನಿನ್ನ..!
ಹುಡುಕುತ್ತಿರುವೆ ಪದಗಳ ರಾಶಿ ಹಾಕಿ
ಪೊಣಿಸಲು ಸಾಲುಗಳನ್ನ..!
ಅಳೆದು ತೂಗಿದರು ಸಾಲದು
ನಿನ್ನ ಸೌಂದರ್ಯಕೆ ಪದಗಳ ಹುರಣ..!-
ನಿನ್ನ ಪೀತಿ ಎಂಬ ಕಿರು ಹೊತ್ತಿಗೆಯಲ್ಲಿ
ನನ್ನ ಕನಸಿನ ಅಧ್ಯಾಯವಿರಲಿ..!
ನಿನ್ನದೆ ಹೆಸರಿನ ಶಿರ್ಷಿಕೆಯೊಂದಿಗೆ
ನನ್ನ ಹೆಸರಿನ ಅಡಿಬರಹವ
ನಾ ಬರೆಯುವೆ ದುಖಃದಲಿ ..!!-
ಕನಸಿನ ಗೋಪುರವ ಕಟ್ಟಿದೆ...
ಹೃದಯದ ಮಹಲಿನಲಿ..!
ಅಲೆಯು ಬಂದು ಕೊಚ್ಚಿಹೋಯಿತು..
ಕಳೇಬರವನ್ನು ಬಿಡದೆ ...!!-
ನೋದಡದಿರು ಚೆಲುವೆ
ಹುಣ್ಣಿಮೆ ಚಂದ್ರನನ್ನ
ನಿನ್ನಂದಕೆ ಶರಣಾಗಿ
ಜಗವ ಬೆಳಗುವುದ
ಮರೆತು ಬಿಟ್ಟಾನು..!!-
ಮುಂಗುರುಳ ಮರೆಯಲಿ
ನಾಚಿ ಮಿಂಚುತ್ತಿರುವ ಆ ನಿನ್ನ ಕಣ್ಣು
ಅದರುತ್ತಿರುವ ಆ ನಿನ್ನ ಕೆಂದುಟಿ
ಕೆರಳಿಸುತ್ತಿದೆ ನನ್ನಿ ಹೃದಯದ
ಬಡಿತವ ಚೆಲುವೆ..!!-
ನನ್ನವಳು.. ನೀನು..
ನನ್ನ ಹೃದಯದರಸಿ ನೀನು..
ಪದಗಳಿಗು ನೀಲುಕದ
ಚೆಲುಮೆ ನೀನು..!
ಕಾಮನ ಬಿಲ್ಲು ನಾಚಿಸುವಂತ
ಸೌಂದರ್ಯವತಿ ನೀನು..!!-