QUOTES ON #ಹಂಬಲ

#ಹಂಬಲ quotes

Trending | Latest
1 OCT 2019 AT 14:17

ಯಾರಿಗೂ ನೀವು
ಸಂಚಕಾರ ತರುವಷ್ಟು
ಸಹಕಾರ ಕೊಡ್ಬೇಡಿ.

ಯಾರಿಗೂ ನೀವು
ಮೋಸ ಹೋಗುವಷ್ಟು
ದಾಸರಾಗಬೇಡಿ.

ಯಾರಿಗೂ ನೀವು
ಕಂಬನಿಸುವಷ್ಟು
ಹಂಬಲಿಸಬೇಡಿ.

-


5 MAR 2020 AT 13:05

ತುಳಿದು ನಡೆವ ಜನರ ಎದುರು
ಬೆಳೆದು ನಿಲ್ಲೋ ಹಂಬಲ
ಬಳಲಿ ಬೆಂಡಾಗುತಿರುವೆ
ಸಿಗದೆ ಯಾರ ಬೆಂಬಲ

-


16 MAY 2019 AT 11:48

ಬಯಕೆಗಳೆಲ್ಲಾವೂ
ನೆರವೇರುವಂತಿದ್ದರೆ
ಬದುಕು ಸಾರ್ಥಕತೆಯ
ಉತ್ತುಂಗದ ಮೆಟ್ಟಿಲೇರುತಿರಲಿಲ್ಲ!
ಆಗ ದೈವಕ್ಕೂ ನಮಗೂ ಅಂತರವಿರುತಿತ್ತೇ?
ಇದು ಸಾಧ್ಯವೇ?
ಆಗೇನಾದರು ಆದರೆ ದೈವವೂ
ಬರಿ ಮಾಯೆಯಾಗುತಿದಷ್ಟೆ!
ಹಂಬಲದಲ್ಲೂ ಜಿಪುಣತೆಯಿರಬೇಕು!
ದೈವತ್ವದಲ್ಲೂ ನಂಬಿಕೆಯಿರಬೇಕು
ಆಗ ಬದುಕು ನೋವು ನಲಿವಿನ
ಅರಮನೆಯೂ!!

-



Vಚಿತ್ರ














-


3 OCT 2019 AT 13:06

ತೊರೆಯು ಅದೆಷ್ಟೇ ತುಂಬಿ ಹರಿಯುತ್ತಿದ್ದರೂ
ತಾನು ಶರಧಿಯ ಸೇರಿ ಪರಿಪೂರ್ಣತೆಯ
ಕಂಡುಕೊಳ್ಳುವ ತುಡಿತ,.
ತನಗಗತ್ಯವಾದ ಎಲ್ಲವನ್ನು ಪಡೆದರು
ಮತ್ತಿನ್ನೇನೋ ಪಡೆಯಲು ಹಂಬಲಿಸುವುದು ಮನುಜನ ಮಿಡಿತ...

-


6 MAR 2020 AT 10:39

ತನ್ನವರೆಲ್ಲ ಭಾವಗಳು ತನಗಾಗೆ ಮೀಸಲಿರಬೇಕೆಂಬ
ಹಠದ ಹಂಬಲವೇಕೆ,
ಎಂದಿಗೂ ಬದಲಾಗಲಿಚ್ಚಿಸದ ಮನಃಸ್ಥಿತಿಗಳ ಬದಲಿಸುವ ಹುಚ್ಚು ಹುಂಬತನವೇಕೆ.

-


20 MAY 2020 AT 11:17

ಹಂಬಲವೊಂದು ಬೆನ್ನತ್ತಿ ಕಾಡಿದಾಗಲೆ ಅರಿವಾಗುವುದು, ಒಲವೊಂದು ಅಮೃತ,
ಅದ ಕಾಯ್ವುದು ನಂಬಿಕೆಯೆಂಬ ವೃತ.

-



ಎಲ್ಲರಂತೆ ಉತ್ತಮ ಕವನಗಳ
ಬರೆಯುವ ಹವಣಿಕೆ ಎನಗೂ ಇದೆ,
ಪದಗಳು ಬಳಿಬಾರದೆ
ಕಣ್ಣಾಮುಚ್ಚಾಲೆ ಆಡಿಸುತ್ತಿದೆ.

ಉದ್ದುದ್ದ ಸಾಲುಗಳ ಕವನವ ಕಂಡು
ಪಡುವುದು ಮನವು ಸಂತಸವ,
ಲೇಖನಿ, ಪುಸ್ತಕ, ಹಿಡಿಯುವೆನು
ಬರೆಯಲು ನಾನೂ ಒಂದ್ನಾಲ್ಕಕ್ಷರವ.

ಅಕ್ಷರ ಬೆಸೆದು,ಪದಗಳ ಹೆಣೆದು
ಸಾಲುಗಳಿಗೆ ಕೊಡುವೆ ರೂಪವನು,
ಭಾವನೆ ತುಂಬಿ ಬಾಗುತ ಬರೆದೆನು
ಖಾಲಿ ಪುಟದಲ್ಲೆರಡು ಸಾಲುಗಳನು.

-


26 DEC 2020 AT 23:02

ಚಾತಕ ಪಕ್ಷಿಯಂತೆ
ಹನಿ ನೀರಿಗಾಗಿ
ಹಂಬಲಿಸುತ್ತಿದ್ದ ಎನಗೆ,
ನಿನ್ನ ಮಾತಿನಿಂದ
ಬೊಗಸೆ ತುಂಬಾ
ನೀರು ಕುಡಿದಷ್ಟು
ಸಂತಸವಾಯಿತು

-



ಎದೆಬಡಿತಕ್ಕೆ ಅನುಗುನವಾಗಿ
ನಿನ್ನ ನಾ ನೆನೆವಾಗ,
ಬಿಕ್ಕಳಿಗೆಗೆಗಾದರು
ತಿರುಗಿ ನೋಡುವ ನೆಪವು
ಮರೆತು ಹೊಯಿತು ನಿನಗೆ.

ನಗುತಲಿ ನೋಡುವೆ ಎಂದು,
ಕಾಯ್ದಿರಿಸಿ ಸತಾಯಿಸಿ ಕಾಯಿಸುವ
ನಿನ್ನ ನೋಡುವ ಹಂಬಲ ಮಾತ್ರ
ಮರೆಸಲಾಗುತ್ತಿಲ್ಲ ಯನಗೆ,
ಮರೆಯಲಾಗುತಿಲ್ಲ ನನಗೆ.

-