QUOTES ON #ಸೇತುವೆ

#ಸೇತುವೆ quotes

Trending | Latest
26 FEB 2019 AT 1:12

ಶ್ರೀ ಸೀತೆಯ ತರಲು ಹನುಮಂತನು
ಕಟ್ಟಿದ್ದು ಸಮುದ್ರ ಸೇತುವೆ.
ಗುಣ ಸಮಾನತೆ ತರಲು ಕೃಷ್ಣ-ಕುಚೇಲರು
ಕಟ್ಟಿದ್ದು ಸ್ನೇಹ ಸೇತುವೆ.

ಗಾಂಧಿ -ಗೋಕಲೆಗಳಿಂದ ಸ್ವತಂತ್ರ
ಭಾರತಾಂಬೆಗೆ ಶಾಂತಿ ಸೇತುವೆ.
ಭಗತ್-ಅಜೀತರಿಂದ ಸ್ವತಂತ್ರಗೊಳಿಸಲು
ಭಾರತಾಂಬೆಗೆ ಪ್ರಾಣಾರ್ಪಣೆ ಸೇತುವೆ.

ಜಾತಿ ಮತ ಹುಚ್ಚಾಟಗಳನ್ನು ತಿಳಿಸಲು
ಗೋವಿಂದ- ಶರಿಫರ ಗುರು-ಶಿಷ್ಯ ಸೇತುವೆ.
ಕೋಟಿ ಕೋಟಿ ಹೃದಯಗಳ ಮಿಡಿತಗಳಿಗೆ
ರೋಮಿಯೊ ಜುಲಿಯಟ್ ರ ಪ್ರೀತಿಯ ಪ್ರೇರಣಾ ಸೇತುವೆ.

-


9 APR 2020 AT 23:31

ಗಟ್ಟಿಯಾಗಿರಲಿ,
ಆತುರತೆಗೆ ಮುಗಿಬಿದ್ದು ಮನಸ್ಸು ಮುರಿಯದಿರಲಿ,

ಸಂಬಂಧಗಳ ಸಂತೋಷವು ಸಾಗರದ ಅಲೆಗಳಲ್ಲಿ ತೇಲುತಿರಲಿ,
ಕುಹಕಿಗಳಿಗೆ ಬಲಿಯಾಗಿ ಕರಗದಿರಲಿ,

ನಂಬಿಕೆ ನಂಟು ನೂರಾರು ಜನಮಕು ಗಟ್ಟಿಯಾಗಿರಲಿ,
ಮೂರನೇಯವರ ಕೈಗೆ ನಿಮ್ಮ ಸಂಸಾರದ ತೇರು ಸೇರದಿರಲಿ.

"ಸಂಬಂಧಗಳ ಬೆಲೆ ತಿಳಿದವ ಮಾತ್ರ, ಸುಖೀ ಜೀವಿಯಾಗುವ"

-


16 APR 2019 AT 9:20

ಮನಸು ಮನಸುಗಳ ನಡುವಿನ
ಹಸಿರ ಬಸಿರಿನ ಜೋಕಾಲೆ
ಜೀಕುತಿದೆ ಜೀವನದ ಸಾಲು ಸಾಲೆ!

-


29 AUG 2020 AT 17:32

ಸರಿದು ಹೋದವರ ನಡುವೆ
ಸೇತುವೆಯಾಗಿ ನಿಂತವರ ಮರೆಯದಿರು.
ಬದುಕ ಸಂತೆಯೊಳಗೆ, ನಿನ್ನರಸಿ
ಬರುವವರ ತೊರೆಯದಿರು.

-



ಕಟ್ಟಿ ಬೆಳೆಸುವೆ

-


13 MAY 2020 AT 15:18

ಎರಡು ದಡಗಳ ಮೇಲೆ ನಿಂತ ಇಬ್ಬರ ನಡುವೆ
ಸೇತುವೆ ಆಗುವವರು ದೊಡ್ಡವರಲ್ಲ
ಅದು ಅವರ ದೊಡ್ಡತನವು ಅಲ್ಲ,
ಬದಲಾಗಿ ಅದು
ಸ್ನೇಹಕ್ಕೊ, ಸಮರಕ್ಕೋ ಅನ್ನುವುದು ಮುಖ್ಯ!

-


15 AUG 2020 AT 10:29

ಮಂಕಾದ ಇರುಳಿಗೆ ಹಗಲಿನ ಸಾಂತ್ವನ,
ದಣಿದ ಹಗಲಿಗೆ ತಿಳಿ ಸಂಜೆಯೆ ಸೋಪಾನ,
ಅನೂಹ್ಯ ಬದುಕಿನ ಅದಮ್ಯ ತೀರವ ಸೇರಿಸುವ
ಯಾನಕೆ, ಏರಿಳಿತಗಳ ಸೇತುವೆಯ ಉಗಮ.

-



ಎಲ್ಲಿಯವರೆಗೆ ಮನಸುಗಳ ನಡುವೆ
ಕಪಟ ವಂಚನೆ ದ್ವೇಷ ಇರದೆ
ನಂಬಿಕೆ ಆತ್ಮವಿಶ್ವಾಸ ಗಟ್ಟಿಯಾಗಿ ಜೀವಂತವಾಗಿರುವುದೋ ಅಲ್ಲಿ
ಸಂಬಂಧಗಳು ಸ್ಥಿರವಾಗಿರುತ್ತವೆ
ಬಹುಕಾಲ ಉಳಿಯುತ್ತವೆ....

-


9 APR 2020 AT 20:48

ನಿಂತಿರೋದೆ ನಂಬಿಕೆಯ
ಕಂಬದ ಮೇಲೆ...

-


9 APR 2020 AT 21:40

ಸಂಬಂಧಗಳ ಸೇತುವೆ
ಗಟ್ಟಿಯಾಗಿರಲು ಕಾರಣ ಮನಸ್ಸುಗಳ ಸಂಬಂಧ ಗಟ್ಟಿಯಾಗಿದ್ರೆ ಮಾತ್ರ.
ಯಾಕಂದ್ರೆ,,
ಬದುಕಲ್ಲಿ ಕೆಲ ವ್ಯಕ್ತಿಗಳು ಸಂಬಂಧದಿಂದ ದೂರವಿದ್ರೂ ಮನಸ್ಸಿಗೆ ತುಂಬಾ ಹತ್ತಿರವಾಗಿರ್ತಾರೆ, ಮತ್ತೆ
ಕೆಲ ವ್ಯಕ್ತಿಗಳು ಸಂಬಂಧದಲ್ಲಿ ಹತ್ತಿರವಾಗಿದ್ರೂ ಮನಸ್ಸಿನಿಂದ ದೂರವಿರ್ತಾರೆ. ಆದ್ದರಿಂದ,
ಸಂಬಂಧದ ದೂರ ಮತ್ತು ಮನಸ್ಸಿನ ದೂರದ ಅರಿವು ನಮ್ಮಲ್ಲಿರಲಿ.

-