ಸವಿದು ಹೋಗುವ ಸಿರಿ ಸಂಪತ್ತಿಗೆ ಸಂಪೂರ್ಣ
ಸೋತು ಬಂಧಿಯಾಗಿಹಳು/ಹನು ಶ್ರೀಮಂತಿಕೆಗೆ
ಕೊರಳೊಡ್ಡಿ.. ತನುವರಳಿಸಿದ ಸ್ವಚ್ಚಂದ ಸೋನೆ
ಪ್ರೀತಿಯ ಧಿಕ್ಕರಿಸಿ.. ಸ್ವರ್ಗರೋಹಣ ಸುಖವು
ಅವನ/ಳ ಭಾರದ ಆಸೆಗಳ ಚಿವುಟಿ ಹಾಕಿತ್ತು ಮೋಜು
ಮಸ್ತಿಯ ದುರಸ್ತಿ.. ಬೆಲೆಕೊಟ್ಟರು ಎಟುಕದ
ಬಡಪಾಯಿಯ ಕುರುಡು ಪಿರುತಿಯ
ಧೂಳಿಪಟ ಮಾಡಿಹಳು/ನು ಎಳ್ಳಷ್ಟು ಚಿಂತಿಸದೆ...
ಬಂಗಲೆ ರತ್ನವ ಮೋಹಿಸುವವಳು/ನು ತನ್ನ ಜೀವನವನ್ನೇ
ಬರಡಾಗಿಸಿ ಕೊಂಡಿಹನು/ಳು ಅತಿ ವ್ಯಾಮೋಹದಿ...-
ಹೃದಯದಲ್ಲಿದ್ದರೆ ಪ್ರಯೋಜನವಿಲ್ಲ
ಆಡಂಬರದ ಪ್ರದರ್ಶನವಿರಬೇಕು
ಆಗ ಹತ್ತು ಸಲಾಂ ಎದ್ದು ಕಾಣುವುದು-
ನಿನ್ನಾ-ಗರ್ಭದ ಸಿರಿವಂತಿಕೆಗೆ
ಋಣವ ತೀರಿಸಲಾಗದ
ಕಡು ಬಡವ ನಾನವ್ವ
ನಿನ್ನ ಉದರದ ಒಡಲೊಳಗೆ
ಬೆಳೆದೆ ಸಸಿಯಾಗಿ
ಮಡಿಲೊಳಗೆ ಮರವಾಗಿ
ಹೃದಯದೊಳಗಿನ ಬಾಡದ
ಬೇರಾಗಿಹೆ ನಾನವ್ವ
ಚಿಗುರೊಡೆಯುವ ಹಸಿರಾಗಿ
ಉಸಿರಾಗುವ ಫಸಲಾಗಿ
ನೆರಳಾಗುವ ಹೆಮ್ಮರವಾಗಿ
ನೀನಗೆಂದೆ ಬದುಕುವೆನವ್ವ-
*ಹೈಕುಗಳು*
************
ಉಪ್ಪು ನೀರಿನ
ಜಳಕ; ದುಡಿಮೆಯೆ
ದುಡ್ಡಿನ ತಾಯಿ
ಕಾಯಕ ಕಾವು
ಕೊಡಲಿ; ಸಿರಿತನ
ನೆಮ್ಮದಿ ಬಾಳು
ಅನ್ಯಾಯ ಕಣ್ಣ
ಮುಂದೆ ; ಕಣ್ಣು ಮುಚ್ಚಿದೆ
ಮೌಲ್ಯದ ಬೀಡು-
ವರ್ತಿಸುವ ಮಾತುಗಳಲಲ್ಲ
ತೋರಿಸುವ ಆಡಂಬರದಲಲ್ಲ,
ಮಾನವೀಯ ಮೌಲ್ಯಗಳನ್ನು
ಅನುಸರಿಸೊ ಮನಸಿರಬೇಕು
ಕರುಣೆ ತೋರಿಸುವ ಗುಣವಿರಬೇಕು
ಸಕಲ ವಿಚಾರ ಅರಿತಿದ್ದರು
ವಿನಯತೆಯಿಂದ ಕೂಡಿರಬೇಕು
ವ್ಯಕ್ತಿತ್ವವೇ ಬಿಂಬಿಸುವುದು ಅವರ
ಹೃದಯ ವೈಶಾಲ್ಯತೆಯನ್ನು.
-
ಶ್ರೀಮಂತಿಕೆ ಬಂದಾಗ ಎಚ್ಚರಿಕೆಯಿಂದಿರಬೇಕು,
ಬಡತನ ಬಂದಾಗ ತಾಳ್ಮೆಯಿಂದಿರಬೇಕು;ಅಂದಾಗ ಮಾತ್ರ ಜೀವನ ಒಂದಳತೆಯಿಂದಿರುತ್ತದೆ.!-
ಸಿರಿವಂತಿಕೆ ಇರುವವರಿಗೆ
ಹೆಚ್ಚು ಜನರಿಗೆ
ಹೃದಯ ವಂತಿಕೆ ಇರಲ್ಲ
ಹೃದಯವಂತಿಕೆಇರುವ
ಬಡಪಾಯಿಗಳಿಗೆ
ಸಿರಿತನ ಇರಲ್ಲ
ಇದು ವಿಚಿತ್ರ ಆದ್ರೂ ಸತ್ಯ
ಸತ್ಯ ಆದ್ರೂ ವಿಚಿತ್ರ ....
-