ಜೀವನದಲ್ಲಿ ಒಂದು ಬಾರಿಯಾದರು
ಬಾನಾಡಿಯಾಗಿ ಹಾರಲೆ ಬೇಕೆಂಬ ಬಯಕೆ
-
ಕಗ್ಗತ್ತಲ ರಾತ್ರಿಯಲಿ
ಕಪ್ಪು ಮೋಡಗಳ ಹೊತ್ತಿನಲಿ
ಚಂದಿರ ನಕ್ಷತ್ರಗಳೆಲ್ಲಾ ಮೋಡದಲ್ಲಿ
ಅವಿತು ಕೂತಿರಲು
ಆಗಸವೆಲ್ಲಾ ರಹದಾರಿಯೆಂದು
ತಿಳಿದು ವಿಮಾನಗಳೆಲ್ಲಾ ಕಣ್ ಹಾಯಿಸಿದ ಕಡೆಗಳಲೆಲ್ಲಾ
ಮಿಂಚುತ್ತಾ ಓಡುತಿವೆಯೆಲ್ಲಾ
ನಡೆಯುವುದ ಬಿಟ್ಟು ಜನರೆಲ್ಲಾ ಹಕ್ಕಿಯಂತೆ
ಹಾರುತಿಹರಲ್ಲಾ...-
ನೀ bike ಮೇಲಾದರೂ ಬಾ
Car ನಲ್ಲಾದ್ರು ಬಾ
Bicycle ನಲ್ಲಾದ್ರೂ ಬಾ
ಸಂಚಾರ ನಿಯಮ ಮುರಿದ್ರೆ
ಪೊಲೀಸಪ್ಪ ವಿಮಾನ ಹತ್ತಿಸ್ತಾನೆ 😀😀-
ಬಲು ದುಬಾರಿ
ಎಲ್ಲರೂ ಆಗಲಾರರು ಅದಕೆ ಆಭಾರಿ
ಸುಖಕರ ಪ್ರಯಾಣ ಬಲ್ಲಿದರಿಗೆ ಪ್ರಾಣ
ಬಡವರಿಗೆ ನಿಲುಕಲಾರದ ತಾಣ
-
ಕೆಲವು ಅನಿರೀಕ್ಷಿತ ಘಟನೆಗಳು ಮನುಷ್ಯನ ಜೀವನವನ್ನು ಬೆಳಗಿಸಿದರೆ, ಇನ್ನು ಕೆಲವು ಅವನ
ಜೀವನವನ್ನು ಕೊನೆಗೊಳ್ಳಿಸುತ್ತವೆ........-
ವೇಗದ ಪಯಣ
ಮೋಡವ ಸೀಳಿ ಮೇಲೇರಿ
ಆಗಸದಲ್ಲಿ ಸುಖಾಸನದಲ್ಲಿ ಕುಳಿತು
ಸಂಚರಿಸುವ ಅನುಭವ
ಒಮ್ಮೆಯಾದರೂ ಹೊಂದಬೇಕು-
ಬಹಳ ಸುಖಕರ,
ಆದರೆ ಅಷ್ಟೇ ಅಪಾಯಕರ,
ಆದರೂ ನಿಲ್ಲದು ಪ್ರಯಾಣ ಜನರ!
ಕನಸದು ಬಡವರ,
ಶ್ರೀಮಂತರಿಗದು ಬಸ್ಸಿನ ತರ
ಕೆಲವರಿಗದು ಮನೆಯ ಮುಂದೆ ಕಾರಿನ ತರ.
ಮಧ್ಯಮ ವರ್ಗದವರಿಗದು ಹುಳಿಯ ದ್ರಾಕ್ಷಿಯ ತರ
ಹೋಗಿ ಬಂದರಂತೂ ಸಾಧನೆ ಅಪಾರ
ಒಂದಷ್ಟು ದಿನ ಜೇಬಿಗೆ ಮನಸ್ಸಿಗೆ ಸ್ವಲ್ಪ ಭಾರ.
-
ವಿಮಾನದಲ್ಲಿ ಮೊದಲ ಪ್ರಯಾಣ
ಚಿಕ್ಕವರಿದ್ದಾಗ ವಿಮಾನ ನೋಡಿ
ಟಾಟಾ ಮಾಡಿದ್ದು ನೆನಪಿದೆ
ಇಂದು ಅದರಲ್ಲಿ ಪ್ರಯಾಣಿಸಬೇಕಿದೆ
ಕರೆ ಬರಲು ಒಂದು ತಾಸು
ನಿಂತಿರುವೆ ನಾನು ಹಿಡಿದು ಸುಟ್ಕೆಸು
ಮನದಲ್ಲಿ ಹೊಸ ಕುತೂಹಲ
ಹೊಟ್ಟೆಯಲ್ಲಿ ತಳಮಳ
ಕುತಾಯಿತು ನನ್ನ ಸಿಟಿನಲ್ಲಿ
ವಿಮಾನ ಹೊರಟಿತು ಲಗು ವೇಗದಲ್ಲಿ
ಭುವಿ ಮೇಲೆ ಹಾರಾಯಿತು ಸ್ವಚ್ಛಂದವಾಗಿ
ಹೊರ ದೃಶ್ಯ ಅನಿಸಿತು ಕೈಲಾಸವಾಗಿ!
-