QUOTES ON #ಮುಸ್ಸಂಜೆ

#ಮುಸ್ಸಂಜೆ quotes

Trending | Latest


ಬಾನು ಭುವಿಯ ರಮಿಸಲು
ಜಗವು ಸುಂದರ ಸ್ವಪ್ನದ
ಕುಂಚದಲಿ ಮುಳುಗಿರಲು
ಅಂಕುರಿಸುತಿಹ ಭಾವನೆಗಳ
ಸನಿಹಕೆ ತಂಗಾಳಿಯ ಕಂಪು

ಸ್ಪಂದಿಸೋ ಬಂಧನಕ್ಕೆ
ಮುಗಿಲೆತ್ತರ ಸಾರಿದೆ
ಬರಿಗಾಲಿಗೆ ಗೆಜ್ಜೆಯಿಡುವ
ಮನದ ಸಾಲಿನ ಇಂಪು

ಪ್ರತಿ ಧ್ವನಿಸುತಿರುವ ಸಂಗೀತಕೆ
ಮುಗುಳು ನಗುತ್ತಾ
ಅಲೆಯ ಹಾಗೆ ಬಂದು ಬಂದು
ಕರೆಯುತಿದೆ ಈ ತಂಗಾಳಿ ತಂಪು
✍Thilaka kulal






-


17 APR 2021 AT 18:37

ಒಂಟಿ ಸಂಜೆಯಲಿ ಮನಸ್ಸಿಗಿಂದು ರೆಕ್ಕೆ ಬಂದು ಹಾರಿದೆ ಆಕಾಶದೆಡೆಗೆ ಮನಸ್ಸು ಬಿಚ್ಚಿ..!

-


29 NOV 2020 AT 19:42

ಕಲ್ಪನೆಯ ಜಗತ್ತಲ್ಲಿ ಕಂಡಿದ್ದ ಆ ಕನಸುಗಲ್ಲೆಲವೂ ಬಿಕ್ಕಳಿಸಿ ಅಳುತ್ತಿವೆ. ಒತ್ತಿಕ್ಕಿ ಬರುವ ಸಾಗರದ ಅಲೆಗಳು ಬಂಡೆಗಳ ಕೊರೆವಂತೆ. ನಿನ್ನ ನೆನಪುಗಳು ನನ್ನ ಅಂತರಾಳವ ಕೊರೆಯುತಿವೆ. ಕ್ಷಣಗಳು ಕೂಡ ಯುಗಗಳಾಗಿವೆ. ಕಣ್ಣುಗಳು ಆ ನೋಟವನ್ನೇ ಬಯಸುತಿವೆ. ಮನಸು ಆ ನಸು ನಗುವನ್ನೇ ಕೇಳುತಿದೆ. ಉಸಿರು ನಿನ್ನೆಸರೇ ಹೇಳುತಿದೆ.. ಈ ಜೀವ ನಿನಗಾಗಿ ಮುಡಿಪಾಗಿಡುವೆ.. ಜನುಮಗಳೇ ಕಳೆಯಲಿ ನಿನಗಾಗಿ ಕಾಯುವೆ...

-



ನನ್ನ
ಮುಂಜಾನೆ
ಮುಸ್ಸಂಜೆಯ
ಕವನವೇ
ನೀನು!
ಸುರಿಯುವ
ಈ ಒಲವ
ಮಳೆಯಲಿ
ನನಗೆ ಮಾತ್ರ
ಕೇಳಿಸುವಂತೆ!
ನಿನ್ಹೆಸರನ್ನೊಮ್ಮೆ
ಜೋರಾಗಿ
ಕೂಗಿ ಹೇಳು ಬಾ
ಮಳೆ ಹನಿಯೇ!

-



ಆ ನಡು ರಾತ್ರಿಯ
ಹಾಲ್ಬೆಳಕಲ್ಲಿ
ನಾಚಿದ
ಮನಸಿಗೆ ಇಂಪನ..
ಮಧುರವಾದ
ಮುತ್ತಿಗೆ
ಮೈಯೆಲ್ಲಾ ಕಂಪನ..

-


14 JUL 2021 AT 9:37

ಮುಂಜ್ ಮುಂಜಾನೆ ಮುಸ್ಸಂಜೆ ಅನ್ಸೋ
ತಾಜಾ ಫೀಲ್ ಕೊಡೋಕೆ
ಮುಸುಕಿನಡಿ ಕುಸುಕುಸು ಅಳೋ
ಮೋಡಕಷ್ಟೇ ಸಾಧ್ಯ

-



ಇಳಿಸಂಜೆಯ ಮೌನಕ್ರಾಂತಿಗೆ
ಮೊಡದಲೆಯ ನರ್ತನ..!
ಸ್ತಭ್ಧವಿರುವ ಗೋದುಳಿಗೆ
ಗುಡುಗು ಸಿಡಿಲಿನ ಚೇತನ..!
ಮುಸ್ಸಂಜೆ ಮಳೆಯ ಸಮ್ಮೀಲನದಲ್ಲಿ
ಮಧುರ ಭಾವನೆಗಳ
ಸಂಯೋಜಿತ ಸಂಭ್ರಮ...!!!

-


4 SEP 2019 AT 17:57

ಅದೇ ಮುಸ್ಸಂಜೆ ಮಂದ ಬೆಳಕು
ಹಾಕುತಿರುವೆ ನೆನಪುಗಳ ಮೆಲುಕು
ಇದರಿಂದ ಹೇಗೆ ಹೊರಬರಲಿ ಇನ್ನು
ಬೇಡ ಎಂದರೂ ನೆನಪಾಗುತಿದೆ ಅದೇ ಕಾಡುವ ಕಣ್ಣು

-


24 SEP 2022 AT 14:23

ಬಾನಂಗಳದ ತುಂಬಾ ಕೆಂಬಣ್ಣದ ಚಿತ್ತಾರ
ನೀ ಬಾರೋ ಚಂದಿರ,
ಎನ್ನುತ್ತಾ, ಮೆಲ್ಲನೇ ಜಾರುತಿರುವ ಭಾಸ್ಕರ..!

ಗೂಡು ಸೇರಲು ಹಾರಿ ಹೊರಟವು ಹಕ್ಕಿಗಳು
ಇರುಳ ಬಾನ ಝಗಮಗಿಸಲು,
ಒಂದೊಂದೇ ಪ್ರತ್ಯಕ್ಷವಾಗುತ್ತಿದ್ದವು ತಾರೆಗಳು..!!

-


8 NOV 2020 AT 18:17

ಓ ಮನವೇ ಯಾಕಿನ್ನು ಮೌನ, ಯಾರಿಗಾಗಿ ಈ ಮೌನ, ನಿನ್ನ ಬೇಡವೆಂದ ಮನಕೆ ಯಾಕಿಷ್ಟು ಮರುಗುತ್ತೀಯಾ, ಒಮ್ಮೆ ಎದೆಬಿಗಿದಪ್ಪಿ ಅತ್ತು ಬಿಡು ನಿನ್ನ ನೋವನ್ನೆಲ್ಲ ಹೊರಹಾಕಿ ಬಿಡು, ನಿನ್ನ ನೋವನ್ನು ಕೇಳುವ ಹೃದಯವೇ ಇಂದು ಮೂಕವಾಗಿದೆ,,, ಯಾರಿಗೆ ಹೇಳುವೆ ನಿನ್ನ ನೋವನ್ನು ...! ಈ ನನ್ನ ಮುಸ್ಸಂಜೆಯ ಕವಿತೆಯಲ್ಲಿ....

-