QUOTES ON #ಮನಸು

#ಮನಸು quotes

Trending | Latest
28 JUN 2020 AT 21:04

ಮನಸ್ಸೊಂದು ಬೇಡುತಿದೆ
ನನ್ನೊಳಗೆ ಹೊಸ ಕನಸ ಬಿತ್ತೆಂದು
ಕನಸದುವೆ ಪೇಳಿತು ನೀ ನಿತ್ಯ ಸಹಕರಿಸು
ನನಸಾಗಲು ನಿನ್ನೆದೆಯ ಇಳೆಯ ಹಸನಗೊಳಿಸು
ನಿತ್ಯವೇನು ಅನುಕ್ಷಣವು ನಿನ್ನೊಳಗೆ
ನಾ ಲಾಲೈಸುತಿರುವೆ ಮನವೇ.!

-


29 JAN 2020 AT 23:16

ನಿನ್ನ ಕನಸಿನ
ಜಾಡನ್ನು ಹಿಡಿದು
ಹೊರಟಿದೆ ನನ್ನೀ
ಮನಸು.!
ನೀ ಮೌನವಹಿಸಿದರೆ
ನನಸಾಗುವುದಾ
ಆ ಕನಸು.?

-


26 NOV 2019 AT 14:20

ಕನಸುಗಳ
ಬೆನ್ನೇರಿ
ಸಾಗುತಿದೆ
ನನ್ನೀ
ಮನಸ್ಸು!
ಹಿಂದೆಯೆ
ಬಂದು
ಕಟ್ಟಿಹಾಕುವೆಯಾ
ಅದನ್ನ
ನಿನ್ನ
ಒಲವಿಂದಲೆ..!

-


11 DEC 2019 AT 22:19

ಕನಸಿನ
ಕನವರಿಕೆ
ಕಲ್ಪನೆಗೆ ಗೊತ್ತು.!

ಅವಲೋಕದೊಳಗಿನ
ಆಲೋಚನೆ
ಅಂತರಾಳಕ್ಕೆ ಗೊತ್ತು.!

-



ಕನಸಿನ ಕಂಗಳು ನಾಚುವುದೇಕೆ
ಹೃದಯವೇ ನಿನ್ನದಾಗಿರುವಾಗ..
ಹಾತೊರೆಯುವ ಮನವು ಕಾತರಿಸುವುದೇಕೆ
ಸೊಗಸಾದ ಒಲವು ನಿನ್ನ ಬಳಿ ಇರುವಾಗ...

-


1 SEP 2021 AT 17:56

ಸುಕ್ಕುಗಟ್ಟಿದ ಭಾವನೆಗಳ ಜೊತೆಗೆ
ಹರಿದ ನೆನಪುಗಳ ಗುದ್ದಾಟದೊಂದಿಗೆ

-


19 APR 2022 AT 16:15

ಮಾತಾಡೋಕೆ "ಸಮಯ"
ಮತ್ತು "ಪದಗಳ"
ಅಗತ್ಯ ಇಲ್ಲ..
ಮಾತಾಡಲು "ಮನಸ್ಸು"
ಅನ್ನೋದು ಇರಬೇಕು..

-


3 MAY 2022 AT 18:41

"ನಾ ಪ್ರೀತಿಸಿದ್ದು ತಪ್ಪೇನಾ ನಿನಗಾ"
ಹಾಕ್ಕೊಂಡಿ ಗೆಳೆಯ ಅಕ್ಕಿಕಾಳ..
ತಿನಿಸಿದಿ ಮಗನ ನನಗ ಮೇಕ್ಕಿಜ್ವಾಳ
ಅಳತ ಕುಂತೀನಿ ಗಳ ಗಳ
ಅರೀವಾತು ನನಗ ನಿನ್ ಬಲು ಸುಳ್ಳ..

ಬ್ಯಾಡಾತ ನಿನಗಾ ನನ್ನ ಸಂಗ..
ಬಿಡವಲ್ದ ನನಗ ನಿನ್ನ ಗುಂಗ
ಮಾಡಿ ಹೋದಿ ನನಗ ಮಂಗ
ಬಿಟ್ಟು ಹೊಂಟಿ ನನ್ನ ಸಂಗ..

ಅಳಿಸಲಾರದಂಗ ಬಂಡಿಯ ಮ್ಯಾಲ ಬರೆದಿದ್ದಿ ನನ್ನ ಹೆಸರ..
ಹೇಳ್ತಿದ್ದೀ ಕುಂತ ನಮ್ದು ಒಂದೇ ಉಸಿರ
ಮಾಡಿ ಹೊಂಟಿ ಪ್ರೀತಿ ಹುಳಿ ಮೊಸರ
ನಿನ್ನ ಕೈ ಮ್ಯಾಲ ಬರ್ಸ್ಕೊಂಡಿ ನನ್ನ ಸವತಿ ಹೆಸರ..

ಜೋಕಾಲಿ ಆಡಿದಂಗ ಆಡಿದಿ ನನ್ ಬದುಕಿನಾಗ
ಬ್ಯಾಸರಾತೇನಾ ನನ್ ಪ್ರೀತಿ,ಬಿಟ್ಟೋದಿ ನಡು ದಾರಿಯಾಗ
ಮನಸ ಮುರಿದು ಹೋದಿ ಯಾಕಿಂಗಾ
ನಿಜ್ವಾದ ಪಿರೀತಿಗೆ ಖರೇನೇ ಬೆಲೆ ಇಲ್ಲ ಈ ಜಗದಾಗ..??

-


2 MAY 2022 AT 11:31

ಇಂದು ಎನ್ನ ತಿರುಗಿ ನೋಡಿ ಮರುಗದಿರು ನೀನು ಕೊರಗಿ..
ಅಂದೆ ಒರಗಿ ಕೂತಿದೆ ನನ್ನೆಲ್ಲ ನಲಿವು ಕರಗಿ..
ಮನದಲಿ ಪ್ರೀತಿ ತುಂಬಿ ನೆನಪಿನ ಬುತ್ತಿ ಉಣಿಸಿದೆ,
ದಿನಗಳ ಎಣಿಸುತ್ತಾ ಕಳೆದೊಗಿರುವೆ
ನಿನ್ನ ನೆನಪಲ್ಲೆ ನಾ ಸೊರಗಿ..

-


21 FEB 2022 AT 19:01

ಅಭಿನಂದನೆಗಳು ಗೆಳೆಯ..
ನಗುತ್ತಾ, ಆಡುತ್ತಿದ್ದ ನನ್ನ ಮುಗ್ದ ಮನಸ್ಸನ್ನು ಮೌನವಾಗಿಸಿದ್ದಕ್ಕೆ..— % &

-