QUOTES ON #ಜಪ

#ಜಪ quotes

Trending | Latest
26 FEB 2020 AT 21:00

ಕನವರಿಸುತ್ತಿರುವೆ,
ನಿನ್ನನ್ನಲ್ಲ
ನಿನ್ನೊಂದಿಗಿನ ನೆನಪನ್ನ

-



ಅವಂದು-ನಂದು
ಯಾವತ್ತು ಒಂದೇ ಮಾತು...

ನನ್ನ ಹೆಸರನ್ನು ಹೆಚ್ಚು ಬಾರಿ
ನೀ ಉಚ್ಚರಿಸಿದಷ್ಟು ನಾ ನಿನಗೆ ಹತ್ತಿರವಾಗುವೆ!!

-



ಈ ಹೃದಯದಲ್ಲಿ ನಾನಿರುವುದೇ ಚಂದ
ನೀ ನನ್ನವನೆಂಬ ಜಂಬದಿಂದ ಬೀಗವುದೆ ಅಂದ..!!
ಮೌನದೊಳಗಿನ ಪಿಸುಮಾತುಗಳ ಜೊತೆಗೆ ನಮ್ಮಹೃದಯಗಳಾಡಲಿ ಸರಸ..!!
ಮನಸ್ಸಿಗೆ ಹಿತವೆನುವಷ್ಟು ನೀಡಿತ್ತಿರುಪ್ರೀತಿಯ ಸಂಘರ್ಷ..!!
ಜೀವ ಹೋಗುವವರೆಗೂ ನಿನ್ನ ಜಪವಾಗಿಸಿ
ಜೀವ ಭಾವಗಳೊಟ್ಟಿಗೆ ಬೆಸುದುಕೊಳ್ಳಲಿ ಸರ್ವಸ್ವ..!!

-



ನನ್ನ ಹೃದಯದಾತ್ಮದಲಿ
ನಿನ್ನಿರಿಸಿ ಜಪಿಸುವಂತ
ಗೊಂಬೆ ನೀನು,
ಅದಕಾಗೆ ತಪಗೈದು
ನೆನಹುಗಳಲೆ ನಿನ್ನ
ಬಾಚಿ ತಬ್ಬುವೆ ನಾನು...

-



ಹೃದಯ ಕುಂಡದಲ್ಲಿ
ನಿತ್ಯವೂ ನಿನ್ನ ನಾಮದ
ಜಪ ತಪಗಳು,
ಭಕ್ತಿಯಿಂದ ಮಾಡುವ
ಪಾರಾಯಣ ಬೇಗ
ತಲುಪುತ್ತದೆಯಂತೆ,
ನಿರೀಕ್ಷೆಯಲ್ಲಿರುವೆ
ನಿನ್ನನುರಾಗಕ್ಕೆ.

-


16 JUL 2020 AT 23:01

ಹಣೆಬರಹದಲ್ಲಿ ಇಲ್ಲದ ನಾಮವನ್ನು ತಮ್ಮ ಹೃದಯ ಮಂದಿರದಲ್ಲಿ ಜಪಿಸುವವರ ಸಂಖ್ಯೆ ಹೆಚ್ಚು ಈ ಜಗದಲಿ!

-



ಜಪಿಸುತ್ತಿರುವೆ,
ನಿನ್ನ ಹೆಸರನ್ನಲ್ಲ,
ನೀ ಬಂದು ಕಾಡುವ ಕನಸನ್ನ.

-


6 NOV 2018 AT 17:54

ಕಳೆದೋದ ಪ್ರೀತಿಯ
ಜಪವೇಕೆ ಮನಸ್ಸಿಗೆ?
(ಎಂಬ ಪ್ರಶ್ನೆಗೆ ಉತ್ತರ)

ಮಾಸಿಹೋಗುವ ಚರ್ಮಕ್ಕೆ
ಮೂಳೆಗಳ ಅವಶ್ಯಕತೆ ಏಕೆ?
(ಎಂಬ ಮಾತು ನೆನಪಾಗಿತ್ತು)

-


21 AUG 2021 AT 10:55

"ಜಪ" ಬೇಕೇ ಬೇಡವೇ?

ಜ" ಕಾರವು ಜನ್ಮ ವಿನಾಶಕವಾದದ್ದೆಂದೂ
"ಪ" ಕಾರವು ಪಾಪಗಳನ್ನು
ನಾಶ ಮಾಡುವುದೆಂದೂ ಅರ್ಥ.
ಜನ್ಮ ಪವಿತ್ರವಾಗಬೇಕಾದರೆ
"ಜಪ" ಅವಶ್ಯಕವೆಂದಾಗುತ್ತದೆ.

-


23 NOV 2020 AT 15:29

ನೆನಪುಗಳ ತಾಪಕೆ ನೊಂದಿರುವೆ ನಿಜ
ಅದೆ ತಾಪವ ಮೈಗೂಡಿಸಿಕೊಂಡು
ಮಾಡುತಿರುವೆ ನಾ ಏಕಾಂತದ ಜಪ.

-