ಒಲವೊಳಗಿನ ತಲ್ಲಣ, ಮನದಲಿ ಸಂ-ಚಲನ...
(caption 👇)-
ಬಂಧಗಳ ಸರಪಳಿಯೊಟ್ಟಿಗೆ ಎಳೆಯುತ್ತಲೇ ಇದ್ದೇನೆ ಕೊರಡಿನಂತಹ ಬದುಕ..!
ಕೊರಡು ತೇಯ್ದಷ್ಟೂ ಘಮಿಸುವ ಚಂದನವಂತೆ,
ಇಲ್ಲದಿರೆ ಬರಿಯ ಬಂಧನವಂತೆ..!-
ನಾವು ದೇವರಿಗಿಂತ ಪಂಚ ಭೂತಗಳನ್ನೆ ನಂಬಬೇಕು,
ಅವನು ಸಿಗದಿದ್ದರು ಪರವಾಗಿಲ್ಲ...-
ತಿಂಗಳಾಯಿತಾಗಲೇ ನೀ ನಮ್ಮನಗಲಿ!
ತಿಂಗಳಾದರೂ ಮನೆಯ ಹೂದೋಟದ
ಸಸಿಗಳಿಗೆ ಅರಳುವ ಮನಸಿಲ್ಲ, ಮುನಿಸಿಕೊಂಡಿಹಳು ತುಳಸಿ
ಪರಿತಪಿಸುತಿಹವು ತಾವರೆಗಳು
ಚಂದಿರನ ಛಾಯೆಗಾಗಿ,
ಇತ್ತ ಸೂರ್ಯನು ಆಗೊಮ್ಮೆ ಇಗೊಮ್ಮೆ ಇಣುಕಿದರೆ,
ಚಂದಿರನ ವಿಳಾಸವೆಲ್ಲಿದೆಯೋ ಕಾಣೆ
ಕೋಗಿಲೆಗಳ ಕುಹುಗಾನ ಕೇಳದಾಗಿದೆ, ನಿನ್ನೊಡನಾಟದ ಕೆಲ ನೆನಪುಗಳು
ಇನ್ನೂ ಹಸಿರಾಗಿರೆ,ಕೆಲವು ನಿನ್ನೊಡನೆ ಭಸ್ಮವಾಗಿವೆ.
ಹಗಲಿರುಳು ಕಾಡುತಿಹವುದು ನಿನ್ನ ಕಣ್ಣುಗಳಲ್ಲಿ ಕಂಡ ಚಿನ್ನದ ಬೆಳಕು,
ನಾವು ಕಂಡ ಕನಸಿನ ಚಿತ್ತಾರ,
ನಿನ್ನೆಲ್ಲ ಕನಸುಗಳಿಗೆ ರೂಪ ಕೊಡುವ ಶಕ್ತಿ ಕರುಣಿಸು ನೀನೆಲ್ಲಿರುವೆಯೋ ಅಲ್ಲಿಂದಲೇ! ನೀ ನೆಟ್ಟ ಸಂಗೀತದ ಸಸಿ ಚಿಗುರಿ
ಸಂತಸದ ಗಾನ ಹರಸಲಿ,ನಿನಗೂ-ನಮಗೂ
ಶಾಂತಿ,ನೆಮ್ಮದಿಯ ನೀಡಲಿ.!💕-
ಹಣವಿದ್ದೊಡೆ ಮನೆ,ಕಾರು, ಕಾರುಬಾರು
ಹಣವಿದ್ದರೂ ಕೊಳ್ಳಲಾಗುವುದು ಸುಖ
ಸಂತೋಷ, ಪ್ರೀತಿ, ವಿಶ್ವಾಸ, ಸಂತೃಪ್ತಿ,
ಹಣವಿದ್ದೊಡೆ ಪುಸ್ತಕ, ಲ್ಯಾಪ್ಟಾಪ್,ಟಿವಿ,
ಆದರೆ, ವಿದ್ಯಾ, ಬುದ್ಧಿ, ಜಾಣತನವನ್ನಲ್ಲ,
ಇನ್ನೂ ಜೀವಂತವಾಗಿದೆ ಮಾನವೀಯತೆ
ಲಾಕಡೌನ ಅವಧಿಯಲ್ಲೂ ಜನರಿಗೆ
ಸಿಗುತ್ತಿದೆ ಒಪ್ಪತ್ತಿನ ಅನ್ನ.
#ಚಂದನ.-