QUOTES ON #ಗಂಟು

#ಗಂಟು quotes

Trending | Latest
1 JUL 2020 AT 23:18

ಗಂಟು.

ಗಂಡ ಒಮ್ಮೆ ಕಟ್ಟಿದ
ಅರಿಶಿಣದ ದಾರ.
ಅವಳೋ.!
ಹರಿದಾಗಲೆಲ್ಲಾ ಕಟ್ಟುವಳು ಅವನ
ಉಡುದಾರ.

-


24 DEC 2019 AT 14:02

ಜಗದೊಳಗೆ ಯಾವ ನಂಟಿಗೂ ಅಂಟದಂತೆ, ಅಂಟಿಯೂ ಗಂಟಾಗದಂತೆ, ಗಂಟು ನಂಟಾದರೂ ಅಂಟದಂತೆ ಇದ್ದುಬಿಡಬೇಕು, ನಂಟು ಗಂಟಾಗುವ ಮುನ್ನ ಅಂಟು ತೊರೆದು ನಡೆದುಬಿಡಬೇಕು...

-


28 DEC 2019 AT 10:21

ಮೋಹಕು ಮನಸಿಗು ಮುಗಿಯದ ನಂಟು, ಅದು ನಾವೇ ಸುತ್ತಿಕೊಂಡ ಗಂಟು, ತೊರೆದ ದಿನ ಈ ಅಂಟು, ಆಪ್ಯಾಯಮಾನವಾದ ಬಾಳು ನಮ್ಮದಾಗುವುದುಂಟು...

-


1 MAR 2021 AT 21:14

ನಿನ್ನೆದೆರು ಜ್ವಲಿಸುವ
ಲಾಂದ್ರವಾಗಿಸೆನ್ನನು,
ನಿನ್ನೆಡೆಗಿನ ಹೆಜ್ಜೆ ಗಟ್ಟಿಗೊಳ್ಳಲಿ,
ಭವದ ಗಂಟು ಸಡಿಲಗೊಳ್ಳಲಿ ।

-


12 JAN 2021 AT 17:42

ಬತ್ತಿದ ಕಣ್ಣೀರಿನ ಗುರುತು
ಅಮ್ಮನ ಜೀವನ ನೆನಪಿಸಿದ್ದವು,
ಸೆರಗಂಚಿನ ಕಾಸಿನ ಗಂಟು
ಅಜ್ಜಿಯ ಬದುಕ ಪರಿಚಯಿಸಿದ್ದವು..

-



ಎಲ್ಲಾ ನಂಟುಗಳು ನಿನಿಟ್ಟಿರುವ ಗಂಟಿನ ಮೇಲೆ ಅವಲಂಬಿಸಿವೆ, ನಿನ್ನಲ್ಲಿ ಇರುವ ಗಂಟು ಕರಗಿದಂತೆ ಜೊತೆಯಲ್ಲಿದ್ದ ನಂಟುಗಳೆಲ್ಲಾ ಒಂದೊಂದಾಗಿ ದೂರ ಸರಿಯುತ್ತವೆ.....

-


10 DEC 2023 AT 20:54

....

-


30 OCT 2019 AT 19:04

ಹೃದಯಕು ಹೃದಯಕು ಯಾರು ಹಾಕಿದರೊ ಗಂಟು
ಜೋತು ಬಿದ್ದಿವೆ ಒಂದಕ್ಕೊಂದು ಅಂಟು

-



ನನದು ನಿನದು ಏಳೇಳು ಜನ್ಮದ ನಂಟು
ಅದಕ್ಕೆ ಏನೊ ಬಿದ್ದೆ ನನಗೆ ಗಂಟು

-


16 JAN 2020 AT 13:09

ಸಂಬಂಧ ಎನ್ನುವುದು ಬಿಡಿಸಲಾಗದ ಗಂಟು,
ರಕ್ತಸಂಬಂಧಗಳೇ ವಿವರಿಸಿ ಹೇಳುವುದು ನಮ್ಮ ನಂಟು.

-