QUOTES ON #ಕನಸು

#ಕನಸು quotes

Trending | Latest
20 APR 2019 AT 0:09

ಚದುರಿದ ಮೋಡಗಳ ಮೇಲೆ
ನಮ್ಹೆಸರ ಕೂಡಿಸಿ ಬರೆಯಲೆ
ಆ ಶಶಿಯ ವಿಶಾಲ ಎದೆಯಲಿ
ಪ್ರೇಮಕಾವ್ಯ ಕೊರೆದುಬಿಡಲೆ
ಈ ಹುಚ್ಚು ಕನಸುಗಳ ನೆನೆದು
ನಗುತ್ತಾ ನಿನ್ನೆದೆಗೆ ಒರಗಿಬಿಡಲೆ

-


21 APR 2020 AT 13:01

ಕನಸುಗಳ ಮಾರುಕಟ್ಟೆಯಲ್ಲಿ
ಅವಳು ಖರೀದಿಸಲಿಚ್ಚಿಸುವ ಬೆಲೆಬಾಳುವ ಕನಸು
ನಾನಾಗಬೇಕೆಂದುಕೊಂಡಿರುವೆ.!
😍

-


19 MAR 2020 AT 22:00

—ಕಗ್ಗತ್ತಲ ಕೋಣೆಯಲ್ಲಿ ಕಣ್ಮುಚ್ಚಿಕೊಂಡು ಕಾಣುವ

—ನವನವೀನ ರೂಪಾಂತರಗಳ ಮಹಾಮೇಳದ

— ಸುವ್ವಾಲೆಯ ಗಧಪ್ರಹಾರದಂತೆ ಆರ್ಭಟಿಸುವ ಮನ

-


19 MAR 2020 AT 21:51

— ಕಲ್ಪನಾ ಲೋಕದಲ್ಲಿ

— ನನ್ನದೆ ವಿಸ್ಮಯ ತುಣುಕಗಳ

— ಸುಂದರ ಭಾವಾಂತರಂಗ

-


10 JUL 2020 AT 15:06

ನನ್ನೊಲವ ಬಗೆ ಕಟ್ಟಿಕೊಂಡೆ ಅದಷ್ಟೋ ಕನಸು ಅಂದು
ನನ್ನೆದೆಯ ಗೂಡಲ್ಲಿ ನಿತ್ಯ ನರ್ತನದ ಸೊಗಸು ಇಂದು
ಆ ದಿನ ಒಮ್ಮೆಲೆ ಬೆಚ್ಚಿಬೀಳಿಸಿತು ನನ್ನೀಮನವ
ಅವನ ಮಾತು ಘಾಸಿಗೊಳಿಸಿ ನನ್ನೆದೆಯ ಕದವ
ಹಗಲಲ್ಲಿ ಕಾಣುತಿರುವೆಯಾ ತಿರುಕ ಕನಸು ತನುವೆ
ನಾನೆಲ್ಲ್ಹೇಳಿದೆ ನಿನ್ನವನೆಂದು ಹೇಳು ಪೆದ್ದು ಮನವೆ!|

-




ಪ್ರೀತಿಯ ಪಾಲು
ಹೃದಯದಲ್ಲಿರಿಸಿ
ಒಲುಮೆಯ ರಂಗಲಿ
ಮುಗುಳುನಗುತಿದೆ ಭಾವನೆಗಳ ಚಿತ್ತಾರ

ಮನದಾಳದಲಿ ಆಲಂಗಿಸಿದ
ಪರಿ ಅಂಕುರಿಸಿದ ಅನನ್ಯ
ಕನಸಿಗೆ ನಿನ್ನ ನಾಮಧೇಯದ
ಸಿಂಧೂರ ಮೀಸಲಾತಿ ಒಲವಿಗೆ

ಲಜ್ಜೆಯ ಲಹರಿ
ಹೆಜ್ಜೆಯನ್ನಿರಿಸಿ ಲಾವಣ್ಯದಿ
ಅಲಂಕಾರಿಸಿದ ಮದರಂಗಿ
ಬಣ್ಣಿಸಿದೆ ಕನಸಲಿ ಆವರಿಸಿದ
ಹೃದಯದ ಯೋಜನೆಯ...
✍Thilaka kulal





-




ಅಳುತ್ತಿರುವ ಮನವ
ಕೆಣಕ ಬೇಡ ಒಲವೇ
ಒಂದೊಮ್ಮೆ ಅತ್ತು ಬಿಡಲಿ
ಭಾವನೆಗಳಿಂದಾಚೆ ಕೊನೆಗೆ

ಇರುಳ ಅಂಚಿನ
ಬದುಕಾ ಬೇಗೆಯಲಿ
ಸುಡುತ್ತಿರುವ ನೂರು ಕನಸ
ಮರೆಸುತ ಕಳೆದು ಬಿಡಲಿ
ಅರೆ ಘಳಿಗೆ ಸುಮ್ಮನೆ

ಸಾಗುತ್ತಿರುವ ಯೋಚನೆಯ
ಕಡಲ ಕರೆಗೆ ಓಗೊಟ್ಟು
ಮುಳುಗಿ ಮರೆಯಾಗಲಿ
ಬದುಕ ನಡಿಗೆ ಕಡಲ ಕಡೆಗೆ....
✍️ Thilaka kulal

-


25 OCT 2019 AT 11:47

ಸಾಯುತಿವೆ
ಅವನೊಲವ
ಕನಸುಗಳೆಲ್ಲಾ
ಸಹಸ್ರ ನೆಪವೊಡ್ಡಿ..!!
ಸೊರಗುತಿವೆ
ಆಂತರ್ಯದ
ಭಾವನೆಗಳೆಲ್ಲಾ
ನವಚೈತನ್ಯವಿಲ್ಲದ
ಕಾರಣದಡಿ..!!

-



ಹತ್ತು ಕನಸುಗಳ ಹೊತ್ತ ನಗು ಅಳುತ್ತಾ ಹೇಳುತ್ತಿತ್ತು ನಿನ್ನ ಕಣ್ಣೀರಿನ ಪ್ರತಿ ಪುಟದಲ್ಲೂ ನನ್ನ ನಗುವಿದೆಯೆಂದು...

-


10 APR 2020 AT 9:16

ಎಷ್ಟೋ ಕನಸ ಕಂಡಿದ್ದೆ
ನೀನಾಡಿದ ಮೋಸದ ನಾಟಕ ಕಂಡು.
ಈಗ ಅರ್ಥ ಆಯ್ತು ,
ನಿ ಹರಿದು ಹೋದ ನನ್ನ ಚಪ್ಪಲಿಗೂ
ಸಮಯಿಲ್ಲಾ ಎಂದು...!!!

-