QUOTES ON #YQJOGI_LOVE

#yqjogi_love quotes

Trending | Latest
29 MAY 2019 AT 12:05

ಮೊದಲ ಭೇಟಿಯಲ್ಲಿ
ಕಣ್ಣಲ್ಲಿ ಇಣುಕಿದ,
ಎರಡನೆಯ ಭೇಟಿಯಲ್ಲಿ
ಹೃದಯಕ್ಕೆ ಇಳಿದ,
ಮೂರನೆಯ ಭೇಟಿಯಲ್ಲಿ
ತುಟಿಗೆ ತುಟಿಯು ತೀಡಿ
ಬೀಗ ಹಾಕಿದ;
ಸಮಯ ಕಳೆದಂತೆ
ತನ್ನ ಮಾತಿಗೆ ಬೀಗ ಹಾಕಿ
ನಿಗೂಢತೆಯ ಮೌನಕ್ಕೆ ಇಳಿದ
ಬಾನಿನಲ್ಲಿರೊ ತಾರೆಯಂತೆ
ನನ್ನೆಡೆಗೆ ದೂರಿನಿಂದಲೇ ಇಣುಕಿದ.

-


29 AUG 2018 AT 1:58

ಪ್ರೀತಿಯಲ್ಲಿ ಬೀಳೋ ಉದ್ದೇಶವೇ ಇರಲಿಲ್ಲ,ಆದರೂ ಬಿದ್ದೆನಲ್ಲ.
ಅವನ ಆ ನಿಶ್ಕಲ್ಮಶ ಪ್ರೀತಿಗೆ, ಮನಸೋಲದೇ ಇರಲಾಗಲಿಲ್ಲ.
ಹಸಿವಿಲ್ಲವೆಂದು ನಾ ಹಟಹೂಡಿದಾಗ, ಮುದ್ದಿಸಿ,
ಅವನಿಡುವ ತುತ್ತು,
ಯಾವ ಆಪತ್ತು ಬಾರದಂತೆ ಕಾಪಾಡುವನು ನನ್ನ,
ಜೊತೆಯಿರುವಷ್ಟೂ ಹೊತ್ತು.
ರಸ್ತೆ ದಾಟುವಾಗ ಕೈ ಹಿಡಿದು ನನ್ನ ಜೊತೆ ನಡೆಯುವ,
ಯಾವ ಕೆಟ್ಟ ದೃಷ್ಟಿಯು ನನ ಮೇಲೆ ಸೋಕದಂತೆ ಕಾವಲಾಗಿರುವ.
ಪ್ರೀತಿಯಲ್ಲಿ ಬೀಳೋ ಉದ್ದೇಶವೇ ಇರಲಿಲ್ಲ, ಆದರೂ ಬಿದ್ದೆನಲ್ಲ.
ಇಷ್ಟೊಂದು ಪ್ರೀತಿ ಸಿಗಬಹುದೆಂದೆಣಿಸಿರಲಿಲ್ಲ, ಸಿಕ್ಕಿದ್ದು ಅದೃಷ್ಟವೆಂದರೆ ತಪ್ಪಲ್ಲ.

-


25 MAY 2021 AT 13:42

ನನಗೆ ಎಲ್ಲವನ್ನೂ ವರ್ಣಿಸಲು ಗೊತ್ತಿದೆ,
ಆದರೆ ಅವಳ ನಗುವೊಂದನ್ನ ಬಿಟ್ಟು...

-


28 SEP 2020 AT 13:50

ಅವಳೇನು ಅಷ್ಟೊಂದು
ಸುಂದರಿಯೇನಲ್ಲ ,
ಆದ್ರೂ
ಅವಳಿಗಿಂತ ಸುಂದರಿಯರು
ಯಾರು ಇಲ್ಲ...

-


17 MAY 2021 AT 22:04

ಜಗತ್ತನ್ನ ಗೆಲ್ಲುವ ಶಕ್ತಿ ಇರೋದು
ಪ್ರೀತಿಗೆ ಮಾತ್ರ.
ನಿನ್ನವರನ್ನ ನೀನು ಪ್ರೀತ್ಸು,
ಅವ್ರು ನಿನ್ನ ಪೂಜಿಸ್ತಾರೆ..

-


31 MAR 2020 AT 22:45

ಆಕಿ ನನ್ನಾಕಿ
ಬಾಳ ಬೆಳಗಿದಾಕಿ
ಬಾಳ ಬೆಳಗಾದಾಕಿ
ಆಕಿ ನನ್ನಾಕಿ
ನನ ಮನದಾಕಿ..!

[Caption,,,,,,,,,,✍]

-


20 AUG 2019 AT 6:39

एक कच्ची डोर से बंधे है हम
ज्यादा ना खींचा करिये
हकीकत में तो आते नहीं
कभी कभी सपनों में तो आया करिए।

-


15 APR 2021 AT 14:18

ನಾ ಪ್ರೀತಿಸೋ ಹುಡುಗಿ ಹೆಂಗಿರ್ಬೇಕಂದ್ರೆ,
ಅವಳು ನಕ್ರೆ ಚಂದ್ರ ಕಾಣ್ಬೇಕು
ಅವಳ ಕಣ್ಣಲ್ಲಿ ಕಷ್ಟ ಕರಗಬೇಕು
ಅವಳ ಮುಗುತೀಲಿ ನನ್ನ ಛಾಯೆ ಹೊಳಿಬೇಕು..

-


3 JUN 2019 AT 8:10

ಮನ ಸೆಳೆದ ಮೊದಲ
ನಗುವಿನೊಡತಿ ನೀನು
ಆ ನಗುವ ಮನದುಂಬಲು
ಜಪಿಸಿ ಕುಳಿತವ ನಾನು
ಹೊಂಬೆಳಕ ಬೀರಿ
ಮನದ ಮೂಲೆಯಲು
ಬೆಳಗು ಹರಿವಂತೆ
ಚೆಲ್ವ ಸುಖ ಹರಿಸಿ
ಹೊಸ ಪುಳಕಗಳು
ಹುಟ್ಟುಪಡೆಯುವಂತೆ
ನಗೆಯೆಂಬ ನವಿಲುಗರಿಯ
ಮನಕೆ ನವಿರಾಗಿ ಸವರಿರುವೆ
ಅದ್ಯಾವ ಸೂಜಿಗಲ್ಲಿಟ್ಟಿರುವೆ
ನಿನ್ನ ನಗುವೊಳಗೆ
ಪದೆ ಪದೆ ಅದೆ ನಗುವಿಗೆ ನಾ
ಮರುಳಾಗುವುದು ಹೇಗೆ?

-


29 SEP 2019 AT 9:12

ಬಣ್ಣಿಸಲು ಬರವೆನಿಸಿಹವೆನ್ನೊಳು
ಬಣ್ಣ ಬಣ್ಣದ ಭಾವಪದಗಳು
ಗುಣಿಸಲು ಗೌಣವೆನಿಸಿಹವೆನ್ನೊಳು
ಚಿನ್ನ ಚರಣದ ಚೆಲುವ ಚಿತ್ತಗಳು..!!

ನಯನಗಳೆರಡು ನೋಟದಿರಿಸಲು
ನಿತ್ಯಸೋಲುತಿಹವು ಮಿತ್ಯವೆನಿಸಿಹವು
ಕರ್ಣ ಕುಟಿರಗಳಾದ್ವಂದ್ವದ್ವಾಶಿಕೆ
ಕುಳಿಗಳವನು ಮರಳಿ ಮರಳಿ
ಮುಗಿಲಗಲ ಹಿಗ್ಗಿಸಿರಲು..!

ಕೃಷ್ಣೆಯವಳ ಕನಕ ಕಂಟ
ಸ್ವಪ್ನ ಶ್ರವಣಕೂ ಸಿದ್ಧಿಸಿಹುದು
ಸವಿಯಬೇಕೆಂಬ ಇಂಪುನಾದದ
ನಲುಮೆಯೊಲವ ನವ್ಯ ನಂಟ..!!

ನುಡಿದ ನುಡಿಯ ನುಲಿಯುತಿಹುದು
ನನ್ನವಳ ನಗುಮೊಗವ ನಡುನಡೆಯ
ನುಡಿಸಲೋಗಿ ನಡಿಸಲೋಗಿ
ನಳನಳಿಕೆಯ ನವ್ಯರಾಗದೊಳು
ನಿತ್ಯ ನಿತ್ಯವೂ ನಿರ್ಮಿಸಲೋಗಿ..!!

-