QUOTES ON #YQJOGI_KANNADA

#yqjogi_kannada quotes

Trending | Latest
19 APR 2021 AT 22:00

ಹೆತ್ತವಳನ್ನು ಪದಗಳಲ್ಲಿ ಸೆರೆ ಹಿಡಿಯಲು
ಪ್ರಯತ್ನಿಸುತ್ತಿರುವಾಗಲೇ ಲೇಖನಿ ನನಗೆ
ಮೂರ್ಖನೆಂದು ನಾಮಕರಣ ಮಾಡಿತ್ತು...

-



ನನ್ನ ಪ್ರತಿ ನೋವಿಗು ಗುಳಿಗೆಯಾಗಿ
ನನ್ನ ಪ್ರತಿ ಕಂಬನಿಗು ಕೊಡೆಹಿಡಿಯುವಿರಿ
ನನ್ನ ಕನಸಿನ ನಿಚ್ಚಣಿಕೆ ನೀವು
ನನ್ನ ಪ್ರತಿ ಉಚ್ಚ್ವಾಸ ನಿಶ್ವಾಸದಲು
ನಿಮ್ಮ ನಾಮದ ಪದಪುಂಜಗಳ ಅಣಿಮುತ್ತುಪೋಣಿಸಿರುವೆ
ಬದುಕಿರುವೆ ನಿಮ್ಮ ಉಸಿರಿನ ಹೆಸರಲಿ
ಅರಳಿರುವೆ ನಿಮ್ಮ ಪ್ರೀತಿಯ ಕಡಲಲಿ
ಬೆಳೆದಿರುವೆ ನಿಮ್ಮ ಮುದ್ದು ಮಗಳಾಗಿ
ನನ್ನ ಒಡಲ ಗುಡಿಯ ಮೂರ್ತಿಯು ನೀವು
ಪ್ರತಿ ಅರ್ಚನೆಗು ನಿಮ್ಮ ನಾಮದ ಸಹಸ್ರಾರ್ಚನೆ
✍Thilaka kulal




















-


15 SEP 2020 AT 13:01

ನಾವ್ ಅರ್ಥ ಮಾಡ್ಕೊಳ್ಳೋರ್
ನಮ್ಮನ್ ಅರ್ಥ ಮಾಡ್ಕೊಳ್ಳೋರು
ನಮ್ಗೆ ಒಂತರ ಕನ್ನಡ ಭಾಷೆ ಇದ್ದಾಗೆ
ಆದ್ರೆ ನಮ್ಮನ್ ಅನರ್ಥ ಮಾಡ್ಕೊಳ್ಳೋರು
ನಮ್ಗೆ other longuage people’s
ತರ ತಲೇನೆ ಕೆಡಿಸಿಕೊಳ್ಳಲ್ಲ 😅🙏

-



ಕಟ್ಟಿಸಿಕೊಂಡ ದುಂಡು ಮಲ್ಲಿಗೆಯ ಹೂಗೇನು ಗೊತ್ತು...
ಕೊಂಡುಕೊಳ್ಳುವವನು ತನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುವನೆಂದು...
"ಗುಡಿಗೋ...ಮುಡಿಗೋ"
"ಮದುವೆಗೋ...ಮಸಣಕೋ "
ಬೇಯಿಸಿಕೊಂಡ ಅಕ್ಕಿಯ ಕಾಳಿಗೇನು ಗೊತ್ತು...
ಮಾಡಿದವನು ತನ್ನನ್ನು ಏನು ಮಾಡುವನೆಂದು..
"ನೈವೇದ್ಯಕೋ..ಸತ್ಕಾರಕೋ "
"ಪಿಂಡಕೋ...ದಂಡಕೋ"

-


3 SEP 2019 AT 18:06

೪೦೦೦ ನೇ ಬರಹವನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಡಾ॥ ಸರ್ವಪಲ್ಲಿ ರಾಧಾಕೃಷ್ಣನ್ ರವರಿಗೆ ಅರ್ಪಿಸುತಿರುವೆ..

(Read Caption)

-


2 APR 2021 AT 18:41


ನಿರ್ಲಕ್ಷೆಯ ಶಿಕ್ಷೆಗೆ
ಬಲಿಯಾಗದಿರಲಿ ನಿರೀಕ್ಷೆ
ಅತಿಯಾದ ಅಪೇಕ್ಷೆಯು
ಆಗದಿರಲಿ ಎಂದಿಗೂ ಭಿಕ್ಷೆ
ಒಲವಿನಂತರಾಳದಿರಲಿ ಎಂದೆಂದಿಗೂ
ಸನ್ಮಾರ್ಗದ ಸುಭಿಕ್ಷೆ....

-


14 MAR 2020 AT 21:25

ನನ್ ಪ್ರಕಾರ ಜಗತ್ತಲ್ಲಿ
ಸ್ವಾರ್ಥವಿಲ್ಲದ ಸಂಬಂಧ ಅಂದ್ರೆ
ಗೆಳೆತನ ಮಾತ್ರ...

Friends 💪❤️🤗

-


18 DEC 2020 AT 20:12

ಬೆತ್ತಲೆ ಕನಸ್ಸು ಕಾಣುವ ಕಣ್ಣುಗಳಿಗೆ,
ಬತ್ತಿಹೋಗುತ್ತಿರುವ ಬದುಕು ತಿಳಿಯುವುದಿಲ್ಲ.

ಗುಪ್ತವಾಗಿ ಗರಿಬಿಡುವ ಕಾಮದ ಕಲ್ಪನೆಗೆ,
ಗುರಿಸಾಧನೆಯ ಗಮ್ಯತೆ ನೆನಪಾಗುವುದಿಲ್ಲ.

ಕ್ಷಣದ ಆಸೆಯ ಅರಸುವ ಅಜ್ಞಾನಿಗಳಿಗೆ,
ಕ್ಷಿಣಿಸುತ್ತಿರುವ ಆಧ್ಯಾತ್ಮದ ಅರಿವಾಗುವುದಿಲ್ಲ.

ಸಿರಿವಂತಿಕೆಯ ಸುಖೋಪ ಭೋಗಿಗಳಿಗೆ,
ಸೃಷ್ಟಿಯ ಸಂಚಲನೆಯ ಸ್ಥಗಿತತೆ ಸಾಧ್ಯವಾಗುವುದಿಲ್ಲ.

ಅಹಂಕಾರದ ಅರಮನೆಯ ಅರಗಿಣಿಗಳಿಗೆ,
ಅನ್ನದ ಬಳಕೆಯ ಬೆಲೆಯು ಗೊತ್ತಾಗುವುದಿಲ್ಲ.

ಪುಣ್ಯ ಸಂಪಾದನೆಯ ನಿಜ ಅರ್ಥ ತಿಳಿಯದ ಮನುಷ್ಯನಿಗೆ,
ಪೂರ್ಣತೆಯಿಂದ ಪರಮಾತ್ಮನಲ್ಲಿ ಎಂದಿಗೂ ಲೀನವಾಗುವುದಿಲ್ಲ.

-



ಇರಬೇಕಿತ್ತು ನೀ
ಜೊತೆಯಾಗಿರಬೇಕಿತ್ತು💝

(Read caption👇)

-


14 FEB 2021 AT 22:20

ಗಂಡು ಹೆಣ್ಣನ್ನೆದೆ ಹುಟ್ಟೊ
ಅಮೋಘ ಭಾವ
ಅಕ್ಷರಸ್ಥ ಅನಕ್ಷರಸ್ಥರೆನ್ನದೆ
ಸರ್ವರಲು ಸೃಷ್ಠಿಸಿದ ದೇವ||

ಅದ್ಭುತ ಚೈತನ್ಯ ಧಾರೆಯ
ಸುಮಧುರ ಹಂದರ
ಅನನ್ಯತೆಯ ರೂಪರಾಶಿ
ನಿಷ್ಕಲ್ಮಶ ಚಂದಿರ||

ಅನವರತ ಉಕ್ಕಿ ಹರಿವ
ಭರವಸೆಯ ಜೀವನದಿ
ಕ್ಷಣಬಡಿತ ಧಮನಿ ಧಮನಿಯಲಿ
ಮೇಳೈಸುವ ಭಾವನದಿ||

ಸುಂದರ ಕನಸಿನಂಗಳವಿದು
ಭವ್ಯತೆಯ ಮಹಾಸಾಗರ
ಚಂದಿರನ ಕೌಮುದಿಯಂತೆ
ಹಾಲ್ಮನಿಸಿನ ಜ್ಞಾನ ಸಾಗರ|

-