QUOTES ON #YQJOGI

#yqjogi quotes

Trending | Latest

My Father and Mother
I will not forget in my life.

-


7 AUG 2019 AT 20:40

ಒಂದು ಜೀವಕೆ,
ನೂರಾರು ದೇಹ,
ಹಲವಾರು ಬಾಂಧವ್ಯ,
ಎಷ್ಟೊಂದು ಸ್ನೇಹ,
ಆದರಲ್ಲಿ ಕೊನೆಗುಳಿಯುವುದೊಂದೆ,
ಪರಮಾತ್ಮನ ಪರಮಾಪ್ತವಾದ ಪ್ರೇಮ!!

-


17 MAY 2020 AT 13:39

हर एक हक़ अदा नहीं होता
हर कोई बावफा नहीं होता ।
फर्क पड़ता है इरादों से अपने
काम कोई बुरा नहीं होता ।

-


20 JUN 2020 AT 19:58

ವೇಶ್ಯೆಯ ಬದುಕಿನ ಚಿತ್ರಣ
ಕವನ ಮಾಲಿಕೆ
ಚತುಶ್ರಯ ಏಳೆ
ಛಂದಸು ಪ್ರಕಾರ
(Read Caption)

-


22 AUG 2020 AT 6:50

ಭಗವತಿ ತನಯನೆ ಈಶನ ಪ್ರಿಯನೆ
ಜಗದಲಿ ಪೂಜೆಗೆ ಪ್ರಥಮನು
ಮಗುವಿನ ಮನವದು ಗೌರಿಯ ಪುತ್ರನು
ನಗುತಿಹ ನಿತ್ಯವು ಗಜಾನನು||

ನೃತ್ಯವ ಮಾಡುತ ಜನರನು ನಗಿಸುತ
ನಿತ್ಯವು ಒಳಿತನು ಮಾಡುತಿಹನು
ಕೃತ್ಯದಿ ತೊಡಗುವ ಮಂದಿಯ ವಧಿಸುತ
ಸತ್ಯದ ಪಥವನು ತೋರಿಸುತಿಹನು||

ಮಂಗಳ ಪೂಜೆಯ ಪಡೆಯುವ ಬೆನಕನು
ಅಂಗಳದಲ್ಲಿಯೆ ನಲಿಯುವನು
ಕಂಗಳ ನೋಟವು ಹೃನ್ಮನ ಸೆಳೆಯುತ
ರಂಗದಿ ನೃತ್ಯವ ಕುಣಿತಿಹನು||

ಗೌರಿಯ ಮಾತಿಗೆ ನಿಷ್ಠೆಯ ಮೆರೆಯುತ
ಭಾರಿಯೆ ವಂದಿಸಿ ಸಾಗುವನು
ತೇರಲಿ ಶೋಭಿಸಿ ಶುಭವನು ಕೋರುತ
ಸಾರದ ಧ್ಯೇಯವ ಹೇಳುವನು||

ಗಣಗಳ ಅಧಿಪತಿ ನಮಿಸುತ ತಥ್ಯವು
ಕಣವದು ವಿಜಯದ ಹಾದಿಯಲಿ
ಚಣದಲೆ ಭಕ್ತಿಯ ತೋರಿಸಿ ಅವನಲಿ
ಧಣಿಯನು ನೆನೆಯುತ ತೋಷದಲಿ||

-



ಅದ್ವಿತೀಯ ಆಂತರ್ಯದೊಳು
ಅನನ್ಯತೆಯನ್ನೊಳಗೊಂಡ
ಅವಿಸ್ಮರಣೀಯ ಅನುಭೂತಿ ಅಪ್ಪನದು!

-


17 JUN 2019 AT 19:05

ಗಂಡಸು ಅಳುವಂತಿಲ್ಲವೆಂದರು,
ಅಕ್ಷರಗಳಲೇ ಅಳುವುದ‌ ಕಲಿತೆ.
ಬೆಟ್ಟು ತೋರಿಸಿ ನಕ್ಕರು,
ನನ್ನತ್ತ ನಾನೇ ನಗುವುದು ಕಲಿತೆ.
ನೇರ ನುಡಿಗೆ ಸ್ನೇಹಿತರಿಲ್ಲವೆಂದರು,
ನಾಲ್ವರಿದ್ದರೂ ನೇರವಿರಲಿ ಎಂದುಕೊಂಡೆ.
ಅವರಿವರ ಹೆಜ್ಜೆ ಹಿಂಬಾಲಿಸೆಂದರು,
ನಿಧಾನವಾದರೂ ನನ್ನದೇ ಹೆಜ್ಜೆಯಿಡುತಿರುವೆ.

-


16 JUL 2017 AT 11:28

Despite being a Hindu, I like Urdu.
Although my friend is a Muslim, he loves Hindi.
English is ruling as usual.

-


2 JUN 2020 AT 8:03

ಅವಳು....

ಮನಸ್ಸಲ್ಲಿದ್ದಿ ಕನಸಲ್ಲಿಲ್ಲ....
ಹೃದಯದಲ್ಲಿದ್ದಿ ಬದುಕಿನಲ್ಲಿಲ್ಲ...

-



ನನ್ನ ಪ್ರತಿ ನೋವಿಗು ಗುಳಿಗೆಯಾಗಿ
ನನ್ನ ಪ್ರತಿ ಕಂಬನಿಗು ಕೊಡೆಹಿಡಿಯುವಿರಿ
ನನ್ನ ಕನಸಿನ ನಿಚ್ಚಣಿಕೆ ನೀವು
ನನ್ನ ಪ್ರತಿ ಉಚ್ಚ್ವಾಸ ನಿಶ್ವಾಸದಲು
ನಿಮ್ಮ ನಾಮದ ಪದಪುಂಜಗಳ ಅಣಿಮುತ್ತುಪೋಣಿಸಿರುವೆ
ಬದುಕಿರುವೆ ನಿಮ್ಮ ಉಸಿರಿನ ಹೆಸರಲಿ
ಅರಳಿರುವೆ ನಿಮ್ಮ ಪ್ರೀತಿಯ ಕಡಲಲಿ
ಬೆಳೆದಿರುವೆ ನಿಮ್ಮ ಮುದ್ದು ಮಗಳಾಗಿ
ನನ್ನ ಒಡಲ ಗುಡಿಯ ಮೂರ್ತಿಯು ನೀವು
ಪ್ರತಿ ಅರ್ಚನೆಗು ನಿಮ್ಮ ನಾಮದ ಸಹಸ್ರಾರ್ಚನೆ
✍Thilaka kulal




















-