"ವಿದುರನೆಂದರೆ" ಲೋಕಹಿತೈಷಿ; ದೇಶನಿಷ್ಠ; ಕುಟುಂಬಪ್ರೇಮಿ; ಪ್ರಜಾರಕ್ಷಕ; ಸಿದ್ಧಬುದ್ಧಪ್ರಬುದ್ಧ; ಸಹಿಷ್ಣು; ನ್ಯಾಯತತ್ವರ; ಸತ್ಯವಾದಿ; ಧೀರ; ಮಾರ್ಗದರ್ಶಿ; ರಾಜನೀತಿವಿಶಾರದ; ಶಾಸ್ತ್ರಜ್ಞ; ಧೀಮಂತ; ನಿರ್ಮೋಹಿ; ತ್ಯಾಗಿ, ವಿರಾಗಿ.
ಪ್ರಭುತ್ವಕ್ಕೆ ನಿಷ್ಠನಾಗಿದ್ದೂ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ; ವ್ಯವಸ್ಥೆ ಹಾಳಾಗಿದೆಯೆಂದು ಅದನ್ನು ನಿರಾಕರಿಸದೆ, ಸರಿಪಡಿಸುವ ಪ್ರಬುದ್ಧತೆ; ವ್ಯಕ್ತಿಗೌರವವನ್ನು ಕಳೆದುಕೊಳ್ಳದೆಯೇ ಆ ವ್ಯಕ್ತಿಯ ತಪ್ಪನ್ನು ಹೇಳುವ ಸಹನಶೀಲತೆ; ಪ್ರೀತಿಯ ತನ್ನವರು ಲೋಕವಿರೋಧಿಯಾದಾಗ ಪರಿತ್ಯಾಗ ಮಾಡುವ ಮೋಹರಹಿತತೆ; ಬಲ, ಹಣ, ಪ್ರಭಾವ ಯಾವುದಕ್ಕೂ ಬಗ್ಗದ-ಜಗ್ಗದ ನ್ಯಾಯನಿಷ್ಠುರತೆ.
-