ತೋರು ಬೆರಳು
ನೀ ಬದಲಾಗುವುದಿಲ್ಲ,
ಶತಮಾನ ಕಳೆದರೂ ಬದಲಾಗುವುದೂ ಇಲ್ಲ,,,
ಜೀವಮಾನವಿಡಿ ಅವರಿವರ ತೋರಿಸಿ
ಕಾಲ ಕಳೆಯುವುದರ ಜೊತೆಗೆ
ಸಜ್ಜನರ ಹರಣವನ್ನು ಮಾಡಿಬಿಟ್ಟೆ,,
ಉತ್ತಮ ಸಮಾಜದ
ಜವಾಬ್ದಾರಿಯ ಹೊಣೆಗಾರಿಕೆ ವಹಿಸಿ,,
ಆ ಸಮಾಜ ವ್ಯವಸ್ಥೆಗೆ
ಸಮಸ್ಯೆಗಳ ಪೋಣಿಸಿ ಅಲ್ಲೋಲ ಕಲ್ಲೋಲ ಮಾಡಿ
ಸವಾರಿಯಾಗಿ ಮುನ್ನುಗುತಿರುವೆ,,
ವಿಧಿಯಿಲ್ಲ ಬೇಸರವಾಗಿದೆ ಎಂದರು
ಈಗ ನೀನೆ ಸರ್ವಕ್ಕೂ ಸವಾರಿ....— % &
-