ಹೇ ಹುಡುಗಿ ನೀ ನನ್ನೊಂದಿಗೆ
ಮಾತಾಡಿದ್ರೆ ಉಬ್ಬಿಕೊಂಡಿರುವ
Lays Pocket ನೋಡಿದಷ್ಟೇ ಖುಷಿಯಾಗುವುದು😍
ನೀ ಮೌನವಹಿಸಿದ್ರೆ ಅದೇ Lays Pocket
Open ಮಾಡಿದಾಗ Gas ಖಾಲಿಯಾಗಿ ತಳದಲ್ಲಿ 2, 3 Chips ಕಂಡಾಗ ಆಗುವ ನಿರಾಸೆಯಷ್ಟೇ ದುಃಖವಾಗುವುದು🤭-
ಅವಮಾನ ಮಾಡದಿರು ಪ್ರೀತಿಗೆ ಹೋಲಿಕೆಯ ಮಾಡಿ
ನಿಸ್ವಾರ್ಥ ಪ್ರೀತಿಯಲಿ ಶರಣಾಗಿ ಮಾಡು ಮೋಡಿ.-
ಯಾವಾಗ ವ್ಯಕ್ತಿ ತನ್ನನ್ನು ತಾನು ಇತರರೊಂದಿಗೆ
ಹೋಲಿಸಿಕೊಳ್ಳಲು ಪ್ರಾರಂಭಿಸುತಾನೋ ಅಲ್ಲೇ ಸೋಲುತ್ತಾನೆ.-
ಅವಳ ಹಾಲ್ಗೆನ್ನೆ ಮೊಗವು
ನುಣುಪಾಗಿದೆ ಶ್ರೀಗಂಧದಂತೆ
ಹಣೆಯ ಸಿಂಧೂರ ನಗುತ್ತಿದೆ
ಬೆಳದಿಂಗಳ ಚಂದ್ರನಂತೆ
ಕಾಡಿಗೆ ಹಚ್ಚಿದ ಕಣ್ಣ್ರೇಪ್ಪೆಗಳು
ಮಿಟುಕಿಸುತ್ತಿದೆ ಹಕ್ಕಿಯ ರೆಕ್ಕೆಯಂತೆ
ನಾಸಿಕದ ನತ್ತು ಹೊಳೆಯುತ್ತಿದೆ
ಕಡಲಾಳದ ಮುತ್ತುಗಳಂತೆ
ಕರ್ಣದ ಜುಮುಕಿಯು
ನಲಿಯುತ್ತಿದೆ ಬಣ್ಣದ ನವಿಲಿನಂತೆ
ಅಧರಗಳು ಕೆಂಪೇರಿದೆ
ಸಿಹಿಯಾದ ಸವಿ ಜೇನಿನಂತೆ
ಮುಂಗುರುಳು ಹಾರುತ್ತಿದೆ
ಕೈಗೆ ಸಿಗದ ಚಿಟ್ಟೆಯಂತೆ
ನನ್ನವಳ ರೂಪ ಹೋಲಿಕೆಗೆ
ಸಿಗದ ನಕ್ಷತ್ರದಂತೆ. _ಶೃತಿ ಶೈವ-
ಎಷ್ಟು ತೂಕದಿಂದ ಮಾತನಾಡಿದರೂ
ಜಗಳದಿಂದ ಮುಕ್ತನಾಗಲಿಲ್ಲ,
ಮನಸ್ಸುಗಳನ್ನರಿತು ಮುಕ್ತವಾಗಿ
ಬೆರೆಯಲೆತ್ನಿಸಲು ವಿಫಲನಾದೆ,
ಕನಸುಗಳಿಗೆ ಜೀವ ತುಂಬಲೆತ್ನಿಸಿದೆ
ನಿದ್ದೆ ನನ್ನೊಂದಿಗೆ ಸಹಕರಿಸಲಿಲ್ಲ,
ಬೆಳಗಿನ ಉತ್ಸುಕತೆಗೆ ಶ್ರೀಕಾರ ಹಾಕಿದೆ
ಮಧ್ಯಾಹ್ನದ ಬಿಸಿಲು ಬೆವರಿಳಿಸಿತು,
ಸಂಜೆಯ ಶೀತಲತೆಗೆ ಮೈಯೊಡ್ಡಿದೆ
ಕತ್ತಲೆಯ ಚೀರಾಟಕ್ಕೆ ಬಿಸಿ ಹನಿಗಳು,
ನನಗೆ ಜಗತ್ತನ್ನರಿಯಲಾಗಲಿಲ್ಲ
ಜಗತ್ತೂ ನನ್ನೆಡೆ ಜಾಣ ಕುರುಡಾಯ್ತು,
ಅವರಿವರನ್ನು ಓಲೈಸುವಲ್ಲಿ
ನನ್ನ ಹೋಲಿಕೆ ನಗಣ್ಯವಾಯಿತು.-
ಯಾರದೋ ಬೆಳಕ ಬಿಂಬಿಸುವ
ಚಂದ್ರನಿಗೆ ಕೊಟ್ಟ ಆಸ್ಥೆ ತನಗಿಲ್ಲವೆಂದು,
ಧರೆಗೆ ಧುಮುಕಿದ ತಾರೆಗಳೇ
ಇಲ್ಲಿ ಅಲೆಯುತ್ತಿರಬಹುದೇ
'ಮಿಣುಕುಹುಳ'ಗಳಂತೆ...???!!-
ಅವಳು ನಾಲಕ್ಕು ಕಣ್ಣು ಇರೋ ಸೊಡಬುಡ್ಡಿ
ನಾವು ಉಫ್ ಅಂದ್ರೆ ಹಾರೋಗೋ ಪರ್ಕೆಕಡ್ಡಿ
ಅವಳಿಗೆ ಇರೋದು ಅಬ್ಬಾ ಮಾರುದ್ದ ಜಡೆ
ಕಾಲ್ ಕೇಜಿ ಮಾಂಸ ಇಲ್ದಿರೋ ನಮ್ ತೊಡೆ..!!
ಅವಳ ಒಂದೊಂದು ತೋಳು ಸಹ ತೊಲೆ
ಕೂದಲೇ ಇಲ್ದೆಇರೋ ನಮ್ದು ಬಾಂಡ್ಲಿ ತಲೆ
ಹಾಳ ಮೂಳ ತಿಂದು ಇರುವಳು ತುಂಬಾ ದಪ್ಪ
ಇವಳನ್ನು ಬೀಳಿಸಿ ಕೊಳ್ಳಕ್ಕೆ ಬರ್ದಿರೋ ಬೆಪ್ಪ..!!
ಇವಳು ಹಲ್ಲು ಬಿಟ್ಟರೆ ಸಾಕು ಸೇಮ್ ತುರೆಮಣೆ
ನಮ್ದು ಎಲ್ಲಾ ಹಲ್ಲು ಉದುರಿರೋ ಫ್ಲ್ಯಾಟ್ ಮಣೆ
ಇವಳನ್ನು ನೋಡಿದರೆ ಡ್ರಮ್ಗೆ ಬಟ್ಟೆ ಸುತ್ತಿದಂಗಿದೆ
ನಮ್ಮನ್ನು ನೋಡಿದರೆ ಕೋಲಿಗೆ ಬಟ್ಟೆ ಸುತ್ತುದಂಗಿದೆ..!!
ಅವಳ ಎತ್ತರ ಜಾಸ್ತಿ ಏನಿಲ್ಲ ಐದು ವರ್ ಅಡಿ
ನಮ್ದು ಕಮ್ಮಿ ಏನಿಲ್ಲ ಕೇಳಬೇಡಿ ಎರಡು ವರ್ ಅಡಿ
ಇವಳು ನಡೆದು ಬಂದರೆ ಭೂಮಿ ಅದರುವುದು
ಇವಳು ಕಣ್ಣು ಬಿಟ್ಟರೆ ನನ್ ಹೃದಯ ನಡುಗುವುದು..!!
ಅವಳು ಕುಂತರೆ ಸಾಕು ಬೇಕೇ ಬೇಕು ಡಬಲ್ ಸೀಟು
ನಮ್ಮದು ಗೊತ್ತಲ್ಲ ಕೇಳಬೇಕ ಒನ್ ಬೈಟು ಸೀಟು
ಇವಳನ್ನು ಗಂಟು ಹಾಕಲು ಕಾದು ಕುಳಿತವ್ಳೇ ನಮ್ ಅತ್ತೆ
ಅವಳು ಅಂದುಕೊಂಡಂಗೆ ಆದ್ರೆ ಗ್ಯಾರಂಟಿ ನಾ ಸತ್ತೆ..!!-