ಸುಕನಸು   (ಸುಕನಸು)
1.5k Followers · 540 Following

read more
Joined 10 July 2018


read more
Joined 10 July 2018
15 MAR AT 8:21

ನನ್ನ ಚಹರೆ ಮರೆತೆಹೋಗಿದೆ
ಕನ್ನಡಿಯಲೂ ನಿನ್ನನ್ನೇ ಕಾಣುವೆ
ಅಮ್ಮನ ಅಕ್ಕರೆಯ ರುಚಿಯನು
ಮತ್ತೊಮ್ಮೆ ನಿನ್ನಲ್ಲಿ ಕಂಡಿರುವೆ

ಕಳೆದುಕೊಳ್ಳುವ ಭಯ ಹೆಚ್ಚಿದೆ
ಮನದಲಿ ನಿನ್ನ ಬಯಸಿ ಬಚ್ಚಿಡುವೆ
ಅಪ್ಪನಂತೆ ಧೈರ್ಯ ತುಂಬಿರುವ
ನೀ ಆತ್ಮಸ್ಥೈರ್ಯಕೆ ಶಕ್ತಿಯಾಗಿರುವೆ

ಮಗುವಿನ ಮುಗ್ಧ ಮನಸ ಮೆಚ್ಚಿದೆ
ಬಾಳ ಪಯಣದಲಿ ಪಾಲು ಕೊಟ್ಟಿರುವೆ
ಕಂದನಂತೆ ನಿಷ್ಕಲ್ಮಶದಿ ಪ್ರೀತಿಸುವ
ನಿನ್ನ ಅನುರಾಗದ ಭಾವ ಅರಿತಿರುವೆ.

-


14 MAR AT 8:27

ಗಜಲ್

ನೆನಪುಗಳ ಸಾಗರದಲ್ಲಿ ಮುಳುಗಿ ನನ್ನೆ ಮರೆಯುತಿದ್ದೆ
ಆಸೆ ಅಲೆಗಳ ಅಪ್ಪಿ ಕನಸಲ್ಲಿ ಸಂತಸದಿ ಬೆರೆಯುತಿದ್ದೆ

ಮುಂದೆ ಜೊತೆಗಿರುವ ಯೋಜನೆಗಳ ರಚನೆ ಹೆಚ್ಚಿತ್ತು
ನನ್ನವನೆಂಬ ಮೋಹದಲಿ ಕುರುಡಾಗಿ ಮೆರೆಯುತಿದ್ದೆ

ಒಂದಿನಿತೂ ದೂರಾಗುವ ಕಲ್ಪನೆಯೇ ಸುಳಿಯಲಿಲ್ಲ
ಹಿಂತಿರುಗಿವೆಯೆಂಬ ಭ್ರಮೆಯಲ್ಲಿ ಕೂಗಿ ಕರೆಯುತಿದ್ದೆ

ಕಾಮನಬಿಲ್ಲು ಹಿಡಿಯುವ ಹುಚ್ಚು ಯೋಚನೆ ಅಷ್ಟೇ
ಹಣೆಯಲಿಲ್ಲದನ್ನು ಮೋಡಗಳ ಮೇಲೆ ಬರೆಯುತ್ತಿದ್ದೆ

ಚಿಗುರಿದ ಸುಮ ಅರಳದೆ ಮುದುಡಿ ಮಣ್ಣು ಸೇರಿತು
ಜೀವನ ಪಾಠ ಆರಿಯದೆ ಪಾಪ ವಿಧಿಯ ಜರೆಯುತಿದ್ದೆ

-


12 MAR AT 8:15

ಸದಾ ಇರಲಿ ಮಗುವಿನಂತ ಮನಸು ನನ್ನವನಿಗೆ
ನಾ ಕೊಡುವೆ ಮಳೆಬಿಲ್ಲಿನಂತ ಕನಸು ನನ್ನವನಿಗೆ
ಅದೃಷ್ಟ ಕೈ ಹಿಡಿದು ಬಯಸಿದೆಲ್ಲ ಸಾಕಾರವಾಗಲಿ
ಬೇಡುವೆ ವರ ಕುಬೇರನಂತೆ ಮೆರೆಸು ನನ್ನವನಿಗೆ

-


7 MAR AT 7:58

ರುಬಾಯಿ
ಜೊತೆ ಇರದ ಬೇಸರ ದೂಷಿಸಲಿ ಯಾರನ್ನ
ವಿಧಿಯಾಟ ಉಗ್ರತೆಗೆ ನಿಂದಿಸಲಿ ಯಾರನ್ನ
ಹಣೆಬರಹದ ಲಿಖಿತ ತಿದ್ದಲಾಗುವುದೆ
ನನ್ನದೇ ದುರದೃಷ್ಟಕ್ಕೆ ಶಪಿಸಲಿ ಯಾರನ್ನ.

-


5 MAR AT 8:22

ಹೇಳೋದು ಸುಲಭ ಮಾಡೋದು ಕಷ್ಟ
ಮಾಡೋದು ಸುಲಭ ಕಲಿಯೋದು ಕಷ್ಟ
ಕಲಿಯೋದು ಸುಲಭ ಅನುಸರಿಸೋದು ಕಷ್ಟ

-


3 MAR AT 9:11

ಯಾರೋ ಪ್ರೀತಿಸಿ  ನಂಬಿಕೆ ದ್ರೋಹ
ಮಾಡಿದರೆಂದು ದೂಷಿಸಿ
ಸಾವಿಗೆ ಶರಣಾಗುವ ಯುವ ಪೀಳಿಗೆ

ತಿಳಿಯುವುದಿಲ್ಲವೇಕೆ ಅವರಿಗೆ
ಅವರೂ ಅದೇ ನಂಬಿಕೆ ದ್ರೋಹ
ಮಾಡಿದರೆಂದು ತಮ್ಮ ಪೋಷಕರಿಗೆ.

-


2 MAR AT 9:03

ಮನವಿಂದು ಬರಡಾಗಿದೆ
ಭಾವನೆ ತೊಳಲಾಡಿದೆ
ನೆನಪು ಕಾಡುತಿದೆ
ಜಗವೆಲ್ಲ ಶೂನ್ಯವೆನಿಸಿದೆ
ಕಣ್ಣೀರು ನಿಲ್ಲದಾಗಿದೆ
ಹೃದಯ ಸ್ತಬ್ಧವಾಗಬಾರದೆ...

-


1 MAR AT 13:46

ನೆನ್ನೆಯ ತಪ್ಪುಗಳು
ಇಂದಿನ ಪಾಠಗಳು
ಪ್ರತಿ ಇಂದಿಗೆ
ನೆನ್ನೆಗಳು ಇದ್ದದ್ದೆ
ಕಲಿಕೆ ನಿರಂತರ.

-


29 FEB AT 8:25

ಬೇಕೆನಿಸಿದ್ದು ಅಕ್ಕರೆಯ ಪ್ರೀತಿ
ಸಿಕ್ಕಿದ್ದು ನಿರ್ಲಕ್ಷ್ಯದ ಅನುಭೂತಿ
ನಿರೀಕ್ಷಿಸಿ ಎಡವಿತ್ತು ಮತಿ
ಬುದ್ಧಿ , ಮಂಕು ಪ್ರತಿ ಸರತಿ
ಜೀವನ ಸಾಗುವುದು ಇದೆ ರೀತಿ.

-


24 FEB AT 8:09

ಪಾಠ ಬದುಕಿನುದ್ದಕ್ಕೂ ಕಲಿಯಲೇಬೇಕು
ಬಂದದ್ದನ್ನು ಬಂದಂತೆ ಸ್ವೀಕರಿಸಲೇಬೇಕು
ಆಸೆ ಇಷ್ಟ ನಿರೀಕ್ಷೆಗಳ ಕೊಲ್ಲಲ್ಲೇಬೇಕು
ನಗುವ ಮುಖವಾಡ ಧರಿಸಿರಲೇಬೇಕು.

-


Fetching ಸುಕನಸು Quotes