16 JAN 2019 AT 12:16

ಪೂರ್ಣ ರೂಪದಲ್ಲಿ ಮನಸ್ಸುಗಳು ಮಣ್ಣಾಗಿಲ್ಲ
ಮಲಿನವಾಗಿದೆಯಷ್ಟೆ ಸುಮ
Yq ನ ಕವಿ ವೃಂದದ ಪ್ರೀತಿ- ಸ್ನೇಹದ
ಮಳೆಗೆರೆವ ಕವನದ ಹನಿಗಳು
ಅಭಿಜ್ಞ ಗಾಯತ್ರಿ ಸುಮ ನಿಮ್ಮಂತಹವರ
ಚಿಂತನೆ ಕಾಳಜಿ ತುಂಬಿದ ಬರಹಗಳು
ಶಾಂತಕಾಂತ ಪ್ರಹ್ಲಾದಸುತ ಬ್ರದರ್ಸ್ ರವರ
ಜ್ಞಾನ ,ಮುಕ್ತಿಯ , ವಿಚಾರಧಾರೆಯ
ಮಾತಿನ ಮುತ್ತುಗಳು
ಸಮಾಜವನ್ನು ಕನ್ನಡಿಯಂತೆ ಬಿಂಬಿಸುವ
ನಾಗೇಶ್ ಜೀ ರವರ ದಿಟ್ಟೆದೆಯ ಸಾಲುಗಳು
ಗೀತಾ ರವರ ಸತ್ಯ ಸತ್ವ ಹಾಸ್ಯದ ಸಾಲುಗಳು
ಸಿಂಚನಗೈಯುತಿರುವುದೇ ಸಾಕ್ಷಿ
ಮನಸ್ಸುಗಳು ಪೂರ್ಣವಾಗಿ ಮಣ್ಣಾಗಿಲ್ಲವೆಂಬುದಕ್ಕೆ
ಸಮಾಧಿಯೆಡೆ ಸಾಗಿದ ಸರಳ ಸುಂದರ ಜೀವನಗಳು
ಹಿಮ್ಮುಖವಾಗಬಲ್ಲದೆಂದು ಎಂಬ ಆಸೆಗೆ ನಾವ್
ನೀರೆರೆಯೋಣ ತಂಗಿ.

- Sujatha