Sudarshan Harnalli   (ಸುದರ್ಶನ್ ಹಾರ್ನಳ್ಳಿ)
2.2k Followers · 663 Following

https://www.facebook.com/pg/raasyam.in/events/?ref=page_internal
Joined 9 April 2018


https://www.facebook.com/pg/raasyam.in/events/?ref=page_internal
Joined 9 April 2018
4 DEC 2023 AT 21:30

-


9 JUL 2023 AT 23:37

ಮೊದಲು ಗೆಲ್ಲಬೇಕಿರುವ ಕೌಶಲ್ಯವೇ ತಾಳ್ಮೆ,
ತಾಳ್ಮೆ ಗೆದ್ದವರು ಪರಮಾತ್ಮನ ಸಮಾನರಂತೆ,
ನೆನ್ನೆ ತಾಳ್ಮೆ ಗೆದ್ದೆಂತಹ ಒಂದು ವ್ಯಕ್ತಿತ್ವವನ್ನು ಕಂಡೆ.

ಬದುಕು ಸನ್ನಿವೇಶಗಳ ತಾಳಕ್ಕೆ ಕುಣಿವ ಗೊಂಬೆ,
ಕಷ್ಟದಲ್ಲೂ ಎದೆಗುಂದದ ಮನಸ್ಸು ನಮ್ಮದಾಗಲಿ,
ತಾಳ್ಮೆಯಿರಲಿ ಬದುಕಿನದ್ದಕ್ಕೂ, ಉಸಿರಿನದ್ದಕ್ಕೂ!

-


18 JUN 2023 AT 13:24

-


15 JAN 2021 AT 21:50

ಹೇಗಿದ್ದರೇನು? ಇರದಿದ್ದರೇನು?
ಜವರಾಯ ಬಂದು ಅಪ್ಪಿಕೊಳ್ಳುವನೊಂದು ದಿನ,
ಆಮಿಷ ನೀಡಲು ಅವನೇನು ಭ್ರಷ್ಟಾಚಾರಿಯಲ್ಲ,
ಆಸೆಗಳನ್ನು ಬಿಟ್ಟೋಗಲು ಯಾರಿಗೂ ಮನಸ್ಸಿಲ್ಲ.
ಮೊದಲು ಬರಲು ಓಟವಂತೂ ಸಾಗುತ್ತಿದೆ,
ಯಾರು ಯಾರಿಗೆ ಸ್ಪರ್ಧಿಯೆಂದು ತಿಳಿಯದೆ.
ಸಂಪಾದಿಸು ಮನುಜ ಒಂದಿಷ್ಟು ನೆನಪುಗಳನ್ನು,
ಬದುಕಿಗೊಂದು ಸುಂದರ ಬೆನ್ನುಡಿ ಬರೆದು.
ಹೇಗಿದ್ದರೇನು? ಇರದಿದ್ದರೇನು?

-


3 JAN 2021 AT 19:12

ಬೆವರೇ ದುಡ್ಡಾಗಿದ್ದರೆ,
ಜಿಮ್ ಆರ್ ಬಿ ಐ ಆಗುತ್ತಿತ್ತು!

-


28 NOV 2020 AT 22:54

ಮಾಸಿದ ಅಂಗಿ, ಹರಿದ ಪಂಚೆ,
ಒಣಗಿದ್ದ ಆರಡಿಯ ದೇಹ,
ತಲೆಗೆ ಸುತ್ತಿದ್ದ ಹಳೇ ವಲ್ಲಿ,
ಮೊಳಕೆಯೊಡೆದಿದ್ದ ಬಿಳಿ ಗಡ್ಡ,
ಪಿನ್ನ ಹಾಕಿದ್ದ ಹವಾಯಿ,
ತುಂಡು ಬೀಡಿಗಳಿದ್ದ ತಂಗುದಾಣ,
ಧೂಳೆಬ್ಬಿಸಿ ಬಂದ ಸವ್ಕಾರಿ ಬಸ್ಸು,
ಲಗೇಜ್ ಹಿಡಿದು ಇಳಿದ ಮಗಳು,
ಅರಳಿದ ಅಪ್ಪನ ಮುಖ,
ಬಡತನವ ಮರೆಸಿತ್ತು!

-


15 AUG 2020 AT 1:14

ಕೋಟ್ಯಾಂತರ ದೇವರು, ಲಕ್ಷಾಂತರ ಗುಡಿಗಳು, ಎಲ್ಲವೂ ಸಾರಿದ್ದು ನಂಬಿಕೆಯೇ ದೇವರೆಂದು. ಮನುಜನಲ್ಲಿ ನಂಬಿಕೆ ಮೂಡಲೆಂದೇ ಹುಟ್ಟಿದ್ದು ದೇವರೆನ್ನಲೆ?

ನಮ್ಮ ರಾಮ, ಅಲ್ಲಾ, ಯೇಸುವಿಗಿಂತ ಮೀರಿದ ದೇವತೆಯಿದ್ದಾಳೆ, ಅವಳೇ ಭಾರತ ಮಾತೆ. ಭಾರತೀಯರ ಎದೆಯೇ ಅವಳ ಗುಡಿ. ಏಕತೆಯೇ ಅವಳ ಧ್ಯೇಯ.

ಮೊಳಗುತಿರಲಿ ಎಲ್ಲರಲ್ಲಿ ಒಂದೇ ಮಂತ್ರ:
'ಭಾರತ ಮಾತೆಗೆ ಜಯವಾಗಲಿ'

-


20 JUN 2020 AT 9:46

ಕೋಗಿಲೆಯ ಕಂಠವನು ಶಕುನವೆಂದರು;
ಕಾಗೆಯ ಶಬ್ದವನ್ನು ಅಪಶಕುನವೆಂದರು;
ಕೋಗಿಲೆಯನ್ನು ಸಲಹಿದ್ದು ಕಾಗೆಯಲ್ಲವೇ?
ನೋಟದಲ್ಲಿ ಯಾರ ವ್ಯಕ್ತಿತ್ವನಳೆಯದಿರು!

-


14 MAY 2020 AT 23:03

ನನಗೇನು ಗೊತ್ತಿತ್ತು!
ತುಂಟ ಹುಡುಗ ನಾನಂತೆ.
ನಿನ್ನ ಸೌಂದರ್ಯ ನನ್ನ ಸೆಳೆದಿತ್ತು.
ಪುಷ್ಪದ ಮೇಲೆ ನಿನಗಿತ್ತು ವ್ಯಾಮೋಹ!
ಅದೋ ಸೃಷ್ಟಿ ವಿಧಿಸಿದ ನಿಯಮ.
ನೀ ಮೈಮರೆತಾಗ ನಾ ನಿನ್ನ ಹಿಡಿದೆ!
ನಿನ್ನ ಬಣ್ಣಗಳ ಸಾಲ ಪಡೆದಿತ್ತಂತೆ ಪ್ರಪಂಚ.
ಹೇ ಚಿಟ್ಟೆ, ಹಿಡಿದು ನೋಡಿ ಪರವಶನಾಗುತ್ತಿದ್ದೆ.
ಒಂದೆರಡು ಕ್ಷಣ ನಿನ್ನ ಬಂಧಿಸಿದ ಪಾಪ ನನಗೆ!
ಮತ್ತೆಂದೂ ನಿನ್ನ ಬಂಧಿಸುವ ಮನಸ್ಸಿಲ್ಲ ಎನಗೆ.
ಆ ಬೆರಳುಗಳಿಗಂಟಿದ ನಿನ್ನ ರೆಕ್ಕೆ ಬಣ್ಣಗಳೇ,
ಇಂದು ಈ ಪದಗಳಿಗೆ ಸ್ಫೂರ್ತಿಯಾಗಿದೆ.
ಕ್ಷಮಿಸಿ ಬಿಡಿ ಒಮ್ಮೆ ಈ ತುಂಟಾಟದ ಪೋರನ!

-


29 APR 2020 AT 21:48

ಹೋದ್ ವರ್ಷ ಈ ಟೈಮಲ್ಲಿ ನಮ್ ಮಾವಿನ ಹಣ್ಣು ಹಲ್ಲಿಗ್ ಸಿಕ್ಕಾಕೊಂಡಿತ್ತು, ಆದ್ರೆ ಈ ಟೈಮಲ್ಲಿ ಕೊರೊನಾ ಇಂದಾ ಮನೆಲ್ಲೇ ಸಿಕ್ಕಾಕ್ಕೊಂತೀನಿ ಅಂತ್ ಗೊತ್ತಿರ್ಲಿಲ್ಲ.

-


Fetching Sudarshan Harnalli Quotes