ನಿನ್ನೆದೆಯ ಬಿಸಿಯುಸಿರು ತಾಕಿದಾಗ ಪಲ್ಲವಿಸಿತು ನನ್ನೊಲವ ಸುಮ
ನಮ್ಮ ಅನುರಾಗದ ಕಡಲು ಬತ್ತಿದಾಗ
ನಶ್ವರದ ಈ ಜಗವೂ ಅಂತಿಮ
-
ಮೊದಲು ಅತ್ತಿದ್ದು ಫೆಬ್ರುವರಿ-09
ಸಾಹಿತ... read more
ಕಲ್ಪನೆಗೂ ಕೈಗೆಟುಕದ
ನೀನು ಈ ಜಗದ ಮರೆಯದ ಕೌತುಕ
ಕಣ್ಣೋಟಕೆ ಸಿಲುಕದ
ನಿನ್ನ ಚೆಲುವು ಸೂಜಿಗಲ್ಲಿನ ಆಕರ್ಷಕ-
ಚಳಿಗಾಲದ ಚಂದ್ರನ ಹೃದಯದಲಿ
ಪ್ರಣಯ ಚುಂಬನದ ಕಂಪನ
ಈ ಅನುಗಾಲದ ಅನುರಾಗಕೆ ನೀ ಬರೆದೆ
ಹೊಸದೊಂದು ವ್ಯಾಖ್ಯಾನ-
ಒಲುಮೆ ಎಂಬುದು
ಎದೆಯ ಗೋಡೆಯ ಬಿರುಕಿನ ಕಿಂಡಿ
ಈ ಬದುಕು ಬಯಕೆಯ ಬೆಳಕಿನ ಬಂಡಿ-
ಧಾರ್ಮಿಕವಾಗಿ ಭಕ್ತಿ ಎಂದರೆ
ಮೋಕ್ಷ ಸಾಧನೆಯ ಮಾರ್ಗ,
ಆದರೆ,
ರಾಜಕೀಯವಾಗಿ ಭಕ್ತಿ
ಅಥವಾ ವ್ಯಕ್ತಿಪೂಜೆ ಎಂಬುದು
ದೇಶದ ಅವನತಿ ಮತ್ತು
ಸರ್ವಾಧಿಕಾರದ ಖಚಿತವಾದ ಮಾರ್ಗ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್-
ಕೋಲ್ಮಿಂಚಿನ ಕಣ್ಣಂಚಲ್ಲೇ ಕೊಲ್ಲುವ
ಕಡು ನೀಲಿ ಕಂಗಳ ಚೆಲುವೆ
ಹರಿವ ನದಿಗಳ ಸಾಲಿಗೆ ಸೇರಿತು
ನಿನ್ನ ಗುಳಿಕೆನ್ನೆಯ ಕಾಲುವೆ-
ನಿನ್ನ ತಲುಪದ ಕಾರ್ಗತ್ತಲ
ರಾತ್ರಿಗಳ ಕನಸುಗಳೆಲ್ಲ
ಕಡು ಮಸಣಗಳಂತೆ ಕಣ್ಣು ಕುಕ್ಕುತ್ತವೆ
ನೀನಿರದ ಮನಸಿನ
ಚೀತ್ಕಾರದ ದನಿಗಳೆಲ್ಲ
ದಿನಪೂರ್ತಿ ದಣಿದು ನರಳುತ್ತವೆ
-
ಹೆಣ್ಣು ಮಕ್ಕಳ ಶಿಕ್ಷಣಕೆ
ಬದುಕು ಪಣಕಿಟ್ಟ
ಭಾರತ ಮಾತೆಯ ಸುಪುತ್ರಿ
ತೊಟ್ಟ ಛಲವ ಮೆಟ್ಟಿ ಸಾಧಿಸಿದ
ಧೀಮಂತ ಸಾಧಕಿ
ನಮ್ ಅಕ್ಷರದವ್ವ ಸಾವಿತ್ರಿ-
ಅವಯವಗಳೆಲ್ಲರಿಗೆ | ಸಮನಾಗಿ ಇರುತಿರಲು | ಭವಿ-ಭಕ್ತಿ-ಶ್ವಪಚ ಶೂದ್ರರಿವರಿಂತೆಂಬ | ಕುಲವೆತ್ತಣದು ? ಸರ್ವಜ್ಞ||
-