Shruthi Shettigar   (shruತಿ)
179 Followers · 60 Following

read more
Joined 10 July 2018


read more
Joined 10 July 2018
22 MAY 2020 AT 23:13

ಜನ ಜನರೆದೆಯೊಳು ಕಿಚ್ಚು
ಹುಚ್ಚೆದ್ದು ಹೆಚ್ಚಲು
ಎಲ್ಲಿಹುದೋ? ನೀರೆಲ್ಲಿಹುದೋ ?
ತಾಳ್ಮೆಯು ಕಳೆದಿರಲು ಎಲ್ಲೆಡೆ
ಇಳಿದರಿವರು ಅಖಾಡದೊಳು
ಕಿಚ್ಚೊಂದಿಗೆ ಸೆಣೆಸಾಡಲು.

ಕಿಚ್ಚನ್ನೆ ನೆಚ್ಚಿ ಬದುಕ ಸವೆಸುವ ಕಾತರದಿ
ಮತ್ತೆ ಎಲ್ಲವು ಮೊದಲಿನಂತೆ.
ಇರಲಿ ಎಲ್ಲರೊಂದಿಗೆ ಅಂತರ
ನಮ್ಮ ಜೀವ ನಮ್ಮ ಕೈಯಲ್ಲಿದೆ.

-


19 OCT 2019 AT 0:58

ಸಂತೋಷ ಎಲ್ಲರೊಳಗೊಂದುಗೂಡಿ ಬಿಚ್ಚಿಟ್ಟ
ದುಃಖ ತನ್ನಲ್ಲೆ ಬಚ್ಚಿಟ್ಟ.

-


11 OCT 2019 AT 23:31

ಪ್ರಶಾಂತತೆಯ ನಡುವಲ್ಲಿ ಗದ್ದಲ ಎಬ್ಬಿಸಿ ನನ್ನನೇ ನೋಡು ಎನ್ನುತಾನೆ.
ನೋಡಿದರೆ , ಶಾಂತನಾಗಿ ನಾಚುತ್ತ ನೋಡುತ್ತಲೆ ಇರುವನು ಸದ್ದುಗದ್ದಲವಿಲ್ಲದೆ.

-


20 DEC 2018 AT 6:06

ತುಂಬಿದ ಹೊಟ್ಟೆಗಳು ಬೇಡವೆಂದು ಬಿಸಾಡಿದ
ಆಹಾರಗಳಿಂದಲೇ ಹೊಟ್ಟೆ ತುಂಬಿಸಿಕೊಂಡವು
ಹಸಿದ ಹೊಟ್ಟೆಗಳು.

-


20 DEC 2018 AT 5:16

ಅನಾಥ ಮಗುವೊಂದು ಅನಾಥ ತಾಯಿಯ ಮಡಿಲು ಸೇರಿ
ತಾವು ಅನಾಥರೆಂಬ ನೋವನ್ನೆ ಮರೆತರು.

-


20 DEC 2018 AT 3:01

ಕಡಲ ತೀರದ ಹೆಸರುವಾಸಿ
ಪರಶುರಾಮನ ಸೃಷ್ಟಿಯ ಪ್ರದೇಶ
ಪ್ರಸಿದ್ದ ಶ್ರೀ ಕೃಷ್ಣನ ನೆಲೆ ,ಅಷ್ಟ ಮಠಗಳ ತವರೂರು
ಭೂತಕೋಲ ನಾಗಾರಾಧನೆ ಯಕ್ಷಗಾನ ಉತ್ಸವಗಳ ಬೀಡು
ತುಳುನಾಡೆಂದೆ ಪ್ರಖ್ಯಾತಿ
ಸಂತಮೇರಿ ದ್ವೀಪಗಳ ಸಮೂಹ
ಕೃಷಿ ,ಮೀನುಗಾರಿಕೆ ಇಲ್ಲಿನ ಗಮನಾರ್ಹ
ವಿಶ್ವವಿಖ್ಯಾತ ಶೈಲಿಯ ಅಡುಗೆಗೆ ಪ್ರಸಿದ್ದಿ.
ಕಣ್ಮನತುಂಬಿಕೊಳ್ಳಲು ಪ್ರಕೃತಿಯ ಮಡಿಲು
ಸವಿಯಲು ರುಚಿ ರುಚಿ ಪದಾರ್ಥಗಳು ಕಾದಿಹುದು ನಿಮಗಾಗಿ.

-


17 DEC 2018 AT 12:02

ನನ್ನ ಬದುಕಲಿ
ನೀನೆ ಎಲ್ಲ, ಈ ಬದುಕಿಗೆ
ನೀನಿಲ್ಲದೇ ಏನು ಇಲ್ಲ

-


14 DEC 2018 AT 7:54

ಎಣ್ಣೆಗೆ ಸಾಸಿವೆ ಬಿದ್ದು ಚಿಟಪಟ ಸಿಡಿದಂತೆ
ಈ ಹುಸಿ ಕೋಪ
ಪ್ರೀತಿ, ಮಮಕಾರ, ಅಕ್ಕರೆಯ ಮಸಾಲೆಗಳು
ಸಿಡಿದ ಕೋಪದೊಂದಿಗೆ ಬೆರೆತು
ಕ್ಷಣಿಕದಲ್ಲೆ ಸಿಡಿಮಿಡಿಗಳೆಲ್ಲ ತಣ್ಣಗಾಗಿ
ಪ್ರೀತಿಯ ಸ್ವಾದ ಮಗದಷ್ಟು ಹೆಚ್ಚಿಸುವುದು.

-


9 DEC 2018 AT 23:01

ನೀನು ನಿನ್ನ
ಪ್ರೀತಿಯನ್ನೆ
ಮುಡಿಪಾಗಿಟ್ಟೆ.
ನಾನು ನನ್ನ
ಜೀವವನ್ನೆ.

-


7 DEC 2018 AT 6:48

ಕಷ್ಟ ಪಟ್ಟು ಪಟ್ಟು
ನಾ ಹಾಕಿದೆ ಒಂದು ಜುಟ್ಟು.
ನೋಡಿ, ನಾಜುಕಾಗಿ ಬಳುಕಿ ನಿಂತಿರೊ ಚೊಟ್ಟು.
ನಿವ್ಯಾರು ಹುಡುಕಲಿಕ್ಕೆ ಹೋಗಬೇಡಿ ಅದರಲ್ಲಿರೊ ಹೊಟ್ಟು.
ನಾ, ಜುಟ್ಟಿನ ವಿಚಾರ ನಿಮ್ಮಲಿ ಹೇಳಿದೆ ಎಂದು
ಮಾಡಬೇಡಿ ಎಲ್ಲಿಯೂ ರಟ್ಟು.

-


Fetching Shruthi Shettigar Quotes