SHILPA S H   (♡︎SH♡︎)
19 Followers · 55 Following

Joined 17 October 2020


Joined 17 October 2020
11 APR 2023 AT 9:21

ಒಂದು ದಿನದಲ್ಲಿ ಎಲ್ಲವೂ ಆಗಲ್ಲ
ಆದರೇ..........
ಒಂದು ದಿನ ಎಲ್ಲವೂ.... ಆಗತ್ತೆ.
ತಾಳ್ಮೆ ಮತ್ತು ನಂಬಿಕೆಯ ಪ್ರತೀಕ
ಅದುವೇ.........ಭರವಸೆಯ ಬೆಳಕು.
ಕತ್ತಲಾದ ಮೇಲೆ ಬೆಳಕಾಗುವಂತೆ
ನೊಂದಮೇಲೆ ನಲಿವಾಗಲೆ ಬೇಕಲ್ಲವೇ
ಸಹಿಸು ನಿನ್ನ ಸಮಯ ಬರುವವರೆಗೂ....!

-


3 APR 2023 AT 22:05

ಅಂದುಕೊಂಡ ಬದುಕಿಗೂ
ಸಾಗುತ್ತಿರುವ ಜೀವನಕ್ಕೂ
ಸಂಬಂಧವೆಲ್ಲಿ..? ನವಿಲಿಲ್ಲದ ನಾಟ್ಯ
ಸೃಜನಾತ್ಮಕತೆ ಇಲ್ಲದ ಸಾಹಿತ್ಯ
ಮೂರಕ್ಷರದ ಜೀವನ...... ಎರಡಕ್ಷರದ ಸಾವನ್ನೇ
ಮೀರಿಸಿತ್ತೆ...?
ಕಾಣದ ಕನಸೊಂದು ಕಣ್ಣೆದುರು ನಿಂತಾಗ
ಕಣ್ಣಿಗೆ ನಿದಿರೆಯೋ...?
ನಿದಿರೆಗೆ ಸಾವೋ.....?

-


8 FEB 2023 AT 12:46

"ನಿಮ್ಮನ್ನು ನಿನ್ನತನವನ್ನು ಪ್ರೀತಿಸಿ ಗೌರವಿಸುವವರು ಯಾರೇ ಆಗಿರಲಿ ಅವರಿಗೆ ಸಮಯ ಕೊಡುವುದು ಸೂಕ್ತ
ದಿಕ್ಕರಿಸುವ ದ್ವೇಷಿಸುವ ಜನರ ಬಗ್ಗೆ ಚಿಂತಿಸುವುದು ವ್ಯರ್ಥ
ನೆನಪಿರಲಿ ಸಮಯಕ್ಕೆ ರೆಕ್ಕೆಗಳುಂಟು"

-


4 JAN 2023 AT 19:04

(⁠・ั⁠ω⁠・ั⁠)ʕ⁠´⁠•⁠ ⁠ᴥ⁠•̥⁠`⁠ʔ(⁠・ั⁠ω⁠・ั⁠)
ಹೊಸತರಲ್ಲಿ ಎಲ್ಲವೂ ಸುಂದರ
ಕಾಲ ಕಳೆದಂತೆ ಬದುಕೇ ಕಾಂತಾರ
(⁠*⁠˘⁠︶⁠˘⁠*⁠)⁠.⁠。⁠*⁠♡(⁠◍⁠•⁠ᴗ⁠•⁠◍⁠)⁠✧⁠*⁠。

-


1 JAN 2023 AT 18:41

ಅನಿಸಿದಂತೆಲ್ಲ ಬದುಕು ಸಾಗಿಸಬಹುದು
ಆದರೇ......◉⁠‿⁠◉
ಅನಿಸಿದಂತೆ ಸಾಯೋಕೆ ಆಗಲ್ಲ
ಕಾರಣ ಇಷ್ಟೇ......。⁠◕⁠‿⁠◕⁠。
ಇದ್ದಾಗಲೇ ನೂರು ಬಿರುದು ಕೊಡೊ ಜನ
ಸತ್ತಮೇಲೆ ಸುಮ್ನಿರ್ತಾರಾ...?☆゚⁠.⁠*⁠・⁠。゚
ನಮ್ಮ ಮೇಲೆ ಒಂದ್ ಸಿನೆಮಾನೇ ಮಾಡ್ತಾರೆ.
ಬದುಕೊದಷ್ಟೆ ಕಷ್ಟ ಅಲ್ಲಾ ಸ್ವಾಮಿ(⁠。⁠ŏ⁠﹏⁠ŏ⁠)
ಸಾಯೋದು ಅದಕ್ಕಿನ್ನ ಕಷ್ಟ.(⁠@⁠_⁠@⁠)
ಜೀವ ಇರೋವರೆಗು ಜೀವಿಸಿಬಿಡೋಣ.
(⁠✯⁠ᴗ⁠✯⁠)(⁠✿⁠^⁠‿⁠^⁠)(⁠✯⁠ᴗ⁠✯⁠)(⁠‘⁠◉⁠⌓⁠◉⁠’⁠)
♥⁠╣⁠[⁠-⁠_⁠-⁠]⁠╠⁠♥😊😊♥⁠╣⁠[⁠-⁠_⁠-⁠]⁠╠⁠♥

-


1 JAN 2023 AT 18:32

ಹೊಸದಾದ ದಾರಿ ತರಲಿ ನೆಮ್ಮದಿ
ನೂರಿರಲಿ ನೋವು ಮರೆ ಎಲ್ಲ ಸಂಗತಿ
ಹರುಷ ತರಲಿ ಈ ಇಪ್ಪತ್ಮೂರರ ಸರತಿ
ಸಾಗಲಿ ಬದುಕು ಬರುವುದೆನ್ನ ಪ್ರಗತಿ.
ನಂಬಿಕೆ ಎಳ್ಳಷ್ಟೂ............!
ಬದುಕು ಸಾಗರದಷ್ಟು........!
ಉಳಿಸುವುದು ಅಳಿಸುವುದು ನಿನ್ನದೇ ಸಂಪ್ರೀತಿ.
ಕಾಯುವೆನು ನನಗಿಲ್ಲ ಬೇರೆ ಪ್ರತೀತಿ.

-


1 JAN 2023 AT 17:59

ಮನದ ತುಂಬ ನೋವಿರುವಾಗ
ಹುಸಿನಗುವ ನಾಟಕ
ಹೊಸ ವರ್ಷ ಬಂತೆಂದು ಕುಶಿಯ ಸಡಗರ
ಮನದಲ್ಲಿ ನೋವಿನ ಸಂಕಟ
ಬದುಕಿನ ಪಯಣದಲ್ಲಿ ಒಂಟಿಯಾದೆ ನಾ
ಮುಚ್ಚಿಟ್ಟು ಭಾರವಾಯಿತು ಮನ
ಕಣ್ಣಂಚಿನ ನೀರು...ನನ್ನ ತಪ್ಪಿಗೋ
ಇಲ್ಲ ವಿಧಿಯ ಬರಹಕ್ಕೊ...?
ಶಪಿಸುವೆ ದೇವಾ ನನ್ನ ಬದುಕಿನ ಬರವಣಿಗೆಗೆ ನಿನ್ನ.
ಸಾಕೇನಿಸುವಷ್ಟು ಬದುಕಾಯಿತು ಸಾಕಿನ್ನು ಬದುಕು.

-


27 DEC 2022 AT 19:42

ನೂರು ಮನಗಳಿದ್ದರೇನು ಜೊತೆಗೆ
ದುಗುಡ ಕಳೆಯದು ಮನಕೆ.
ನಿನ್ನ ಮನದ ಮುಂದೆ ಬಿಚ್ಚಿಟ್ಟ ನೋವ
ಇನ್ನಾರಿಗೆ ಹೇಳುವೆ ನೀ...
ನಿನಗಾಗದ ಜೋತೆ ಮನವರಿಯದೇ
ಮನಕ್ಕಿಂತ ಜೋತೆ ಬೇಕೇ ಮನವೇ..?
(⁠;⁠ŏ⁠﹏⁠ŏ⁠)⊙⁠﹏⁠⊙(⁠*⁠﹏⁠*⁠;⁠)⊙⁠﹏⁠⊙(⁠;⁠ŏ⁠﹏⁠ŏ⁠)

-


13 DEC 2022 AT 18:54

ನಮ್ಮವರಲ್ಲದ ನಮ್ಮವರನ್ನು
ನಮ್ಮವರೆಂದು ತಿಳಿದು
ಮರುಳಾದ ಮನಸೇ....!
ನಮ್ಮದು 🤗🤗🤗

-


13 DEC 2022 AT 15:37

ನಿನ್ನನ್ನ ನಂಬಲಿ ಅಂತ ಮಾಡಿದ
ಸರ್ಕಸ್ನಲ್ಲಿ ಒಂದೇ ಒಂದು ಪರ್ಸೆಂಟ್
ನಿನ್ನ ಲೈಫ್ ಬಗ್ಗೆ ಯೊಚಿಸಿದ್ದರೆ ನೀನಿವತ್ತು
ಒಂದು ಹಂತದಲ್ಲಿ ಇರ್ತಿದ್ದೆ.
(ನಂಬಿಸ್ತಾ ಮೋಸ ಮಾಡೋದೇ ಜೀವನ ಅಲ್ಲ)

-


Fetching SHILPA S H Quotes