ಒಳ್ಳೆಯ ಜೀವನ ಬೇಕೆಂದರೆ ಕಲಿಯಲು ತಯಾರಿರಬೇಕು,
ಆ ಶಿಕ್ಷಕನಿಂದ ಜೀವನದ ಪಾಠ.-
तू मेरे सामने देखने या ना दिखने से कुछ नहीं फर्क पड़ता,
क्योंकि जब भी तेरा याद आता है,
तब मैं मेरे दिल में झांक कर देखलेताहूं वहां तुझे।-
ಬನ್ನಿರೆಲ್ಲ ಓ ನನ್ನ ಜನಗಳೇ ಮೇಲೆದ್ದು ಬನ್ನಿ,
ಯಾರೋ ಹೊದಿಸಿದ ಮುಸುಕನ್ನ ತೆಗೆದು ಬನ್ನಿ
ಬಯಸೋ ಬಯಸದೆಯೋ,ತೊಟ್ಟಿರುವ ಮುಖವಾಡವನ್ನ
ಅವರು ಏರಿಸಿದ ಯಾವುದ್ಯಾವುದೋ ನಶೆಯನ್ನ ಇಳಿಸಬನ್ನಿ
ಹುಟ್ಟುವಾಗ ಹಣೆಯ ಮೇಲೆ ಬರೆದಿತ್ತೇ ಜಾತಿಯ ಹೆಸರನ್ನ
ಕೈಯಲ್ಲಿ ಹಿಡಿದು ಹುಟ್ಟಿದರೇ ಧರ್ಮದ ಪ್ರಮಾಣ ಪತ್ರವನ್ನ
ಪಡೆದೇ ಬಂದರೇ,ಭೂಮಿಗಿಳಿದ ತಕ್ಷಣ,ಸಂಪ್ರದಾಯ
ಸಂಸ್ಕೃತಿ,ದೇವರು,ನಿರ್ದಿಷ್ಟ ಆಚರಣೆಗಳ ಗುತ್ತಿಗೆಯನ್ನ
ಕಡೆಯ ಬನ್ನಿ,ಜನರ ಜೀವನವನ್ನ ಹಾಳು ಮಾಡುತ್ತಿ
ರುವ,ಮೌಢ್ಯತೆಯ ಮುಳ್ಳಿನ ಮರಗಳನ್ನ
ಒದೆಯಲೆದ್ದು ಬನ್ನಿ,ನಮ್ಮೆದೆಯ ಮೇಲಿರುವ ದಬ್ಬಾ
ಳಿಕೆ ಶೋಷಣೆಗಳಾ ಕಬ್ಬಿಣದ ಕಾಲ ತೋಳಗಳನ್ನ
ಪಡೆಯಲು ಜ್ಞಾನವನ್ನ,ಕಳೆಯಲು ಅಜ್ಞಾನದಂಧಕಾರವನ್ನ
ಶತಶತಮಾನಗಳಿಂದ ನರಳಿ ನರಳಿ ಸತ್ತು ಬದುಕಿದ್ದು ಸಾಕಿನ್ನ
. ಹಿಡಿಯಿರಿ ಶಿಕ್ಷಣ ಸಂಘಟನೆ ಹೋರಾಟಗಳೆಂಬ ಅಸ್ತ್ರಗಳನ್ನ
. ಕಡೆಯ ಬನ್ನಿ, ಗುಲಾಮಗಿರಿಯ ಸಂಕೋಲೆಗಳನ್ನ
. ನಿರ್ಮಿಸಲು ಜಾತಿ ವರ್ಗ ರಹಿತ,ಸಮಸಮಾಜವನ್ನ
. ✒️ *ಸರ್ದಾರ್ ಚಾಂದ್ ಪಾಷ.ಪಿ* 🖊️
ಪೆರೇಸಂದ್ರ. ದಿ.20.7.25..9449179547*-
. *ಚುಟುಕು 🦂 ಕುಟುಕು*
ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಸಿದ್ದು!
ದೇವನಹಳ್ಳಿ ತಾ.ಚನ್ನರಾಯ ಪಟ್ಟಣ ಭೂಸ್ವಾಧೀನಾ ರದ್ದು,
ಈಗ ಆನೇಕಲ್ ಜಂಗಮಕೋಟೆ ರೈತರಿಂದ ಸರಕಾರಕ್ಕೆ ಗುದ್ದು!
. ✒️ *ಸರ್ದಾರ್ ಚಾಂದ್ ಪಾಷ.ಪಿ* 🖊️
ಪೆರೇಸಂದ್ರ. ದಿ.19.7.25..9449179547*-
ಇತ್ತು ಊರ ಮಧ್ಯದಲ್ಲೊಂದು ಉದ್ಯಾನವನ
ತುಂಬಾ ಬೆಳೆಸಲಾಗಿತ್ತು ಅಲ್ಲಿ ಮರಗಳನ್ನ
ಕೇಳಬಹುದಾಗಿತ್ತು ಅಲ್ಲಿ ಪಕ್ಷಿಗಳ ಕಲರವವನ್ನ
ನೋಡಬಹುದಿತ್ತು ಅವುಗಳ ಆಟವನ್ನ
ಕಟ್ಟಿದ್ದವವು ಆ ಮರಗಳ ತುಂಬಾ ಗೂಡುಗಳನ್ನ
ಕೇಳಬಹುದಿತ್ತು ಮರಿಗಳ ಕಿರುಧ್ವನಿಯನ್ನ
ಅಲ್ಲಿ ಕಾಣಲಾಗುತ್ತಿರಲಿಲ್ಲ ಜನ ಜಂಗುಳಿಯನ್ನ
ಸದ್ದು ಸಡಗರವಿಲ್ಲ ಅಲ್ಲಿ ಬರಿಯ ಮೌನ
ಬಗ್ಗಿ ನೋಡಿದರೆ ಕಾಣುತ್ತಿತ್ತು ಹಾಸಿದ ಕಲ್ಲುಗಳನ್ನ
ಏಕೆಂದರೆ ಅದು ಸುಂದರವಾದ ಸ್ಮಶಾನ
. ✒️ *ಸರ್ದಾರ್ ಚಾಂದ್ ಪಾಷ.ಪಿ* 🖊️
ಪೆರೇಸಂದ್ರ. ದಿ.19.7.25..9449179547*
.
-