ಕುರುಡನೊಬ್ಬ ತನ್ನ ಕಲ್ಪನೆಯಲ್ಲಿ
ಜಗತ್ತನ್ನು ಸುಂದರವಾಗಿ ಕಂಡಿದ,
ವಾಸ್ತವದಲ್ಲಿ ಜಗತ್ತೆ ಸ್ವಾರ್ಥದಿಂದ ಕುರುಡಾಗಿತ್ತು....-
ನನ್ನಲ್ಲಿಯ ಒಂದು ಶಕ್ತಿ,
ನನ್ನನ್ನು ಬರೆಸುತ್ತಿದೆ. ಆ ಶಕ್ತಿಯೇ ಹೆಣ್ಣು...
ರಕ್ತಪಾತವಿಲ್ಲದೆ ಲೇಖನಿಯಿಂದ ಶತ್ರುಗಳ ಹೃದಯವನ್ನು ಕೊಳ್ಳೆ ಹೊಡೆಯುವ ಹುಚ್ಚಾಸೆ....
-
ಲೋ ಹುಚ್ಚಪ್ಪ,
ಬೇರೆಯವರ ಕನ್ನಡಿಯ ಪ್ರತಿಬಿಂಬವನ್ನು ಬಳಸಿ
ನಿನ್ನ ಹೆಸರನ್ನು ಬೆಳಗಿಸಿಕೊಳ್ಳುವ ಜಾಣ್ಮೆ ನಿನ್ನಲ್ಲಿರಬಹುದು,
ನಿನ್ನ ಹೆಸರನ್ನು ಬೆಳಗಿಸುವ ಕನ್ನಡಿಯನ್ನು ಯಾವ ಮಾರುಕಟ್ಟೆಯಲ್ಲಿ ಪುಕ್ಕಟೆಯಾಗಿ ಕೊಳ್ಳುವೆ..?-
ಮನಸ್ಸನ 'ಗಾಂಧಿ ಬಜಾರ್' ಮಾಡಿ ಧರಣಿ ಹೂಡಬೇಡಿ,
ಬಂದವರೆಲ್ಲ ನೋವಿನ ಉಡುಗೊರೆಯನ್ನು
ಬಿಟ್ಟು ಹೋಗಬಹುದು....-
ಪ್ರೀತಿ,
ನಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳಬಹುದಾದ
ಕನ್ನಡಿಯಂತಿದ್ದರೆ ಅತಿ ಸುಂದರ....-
ತನ್ನ ತಾಯಿಯ ಗರ್ಭದ ಗುಡಿಯಲ್ಲಿ ಉಸಿರಾಡಿದವ,
ಇನ್ನೊಂದು ಹೆಣ್ಣಿನ ಉಸಿರು ಕಸಿದುಕೊಳ್ಳಲಾರ....-
ಅವಳ ಮನದ ತುಂಬಾ ಬೆಳದಿಂಗಳ ಛಾಯೆ ತುಂಬಿದರು,
ಗ್ರಹಣವು ಮೇಲಿಂದ ಮೇಲೆ ತಾಕುತ್ತಲೆ ಇರತ್ತೆ...-
ಬೇರೆಯವರ ಬದುಕಿನ ಸುತ್ತ ಗಿರಗಿಟ್ಲೆ ಹೊಡೆಯುವ ನಮ್ಮ ಮಾತುಗಳೆ ನಮ್ಮ ವ್ಯಕ್ತಿತ್ವವನ್ನು ಸಮಾಧಿ ಮಾಡುತ್ತದೆ....
-
ಅವಳಿಗಾಗಿ ನೀನು ಒಲವಿನ ಅರಮನೆಯನ್ನೇ ಕಟ್ಟಿರಬಹುದು,
ಅವಳೇನು ಮೂರ್ಖಳಲ್ಲ ತನ್ನ ಹೆತ್ತವರ ಒಲವಿನ ಕೋಟೆಯನ್ನು ತೋರೆದು ಬರುವಷ್ಟು....-
ಮೌನ ಒಂಥರ ಖುಷಿ ಕೊಡುತ್ತದೆ ಒಂದು ಸಾಮ್ರಾಜ್ಯದಲ್ಲಿ ರಾಜ ದರ್ಬಾರ್ ಮಾಡಿದ ಹಾಗೆ...
-