ರಂಜಿತಾ ಸೋಮಶೇಖರ್ ❤️💚   (ಹಿತಾ💐(Hitha))
711 Followers · 189 Following

read more
Joined 30 March 2020


read more
Joined 30 March 2020

ಹೊತ್ತಿಗೊಂದು ಕೂಳು...
ದಿನನಿತ್ಯದ ಬಾಳು ಸವೆಸುತಲೆ ಅರಿವಾಗಿದ್ದು!
ದಿನಕ್ಕೊಂದು ಪರಿವರ್ತನೆ ಪ್ರತಿನಿತ್ಯವೂ ಹೊಸ ಕಲ್ಪನೆಗಳಲೇ ತೆರೆದುಕೊಳ್ಳುವುದು ಅಸಂಖ್ಯಾತ ಕನಸುಗಳ ಕಾರ್ಖಾನೆ...
ಇವುಗಳನ್ನೆಲ್ಲ ಸಾಕಾರಗೊಳಿಸಲು ಹರಸಾಹಸಪಡುವುದರಲ್ಲೇ ಜೀವ ಜೀವನ ಎರಡೂ ಸವೆದು ಹೋಗಿರುತ್ತದೆ 😌

-



ಸೋತಾಗ ಸಂತೈಸಲು ಬಾರದವರು...
ಮುಂದೊಂದಿನ ಗೆಲುವಿನ ನಗೆಯ ಬೀರಿದಾಗ ಮೆಚ್ಚುಗೆಯ ಮಾತುಗಳನ್ನಾಡುವುದಾಗಲಿ, ನಾಟಕೀಯ ಪ್ರೇಮವನ್ನು ತೋರುವುದಾಗಲಿ ಬೇಡವೇ ಬೇಡ 🙏

-



ಆರೋಪಗಳನ್ನು ಸಹಿಸಿಕೊಂಡಷ್ಟು ಆರೋಪ ಮಾಡುವುದನ್ನೇ ಕಸುಬು ಮಾಡಿಕೊಂಡುಬಿಡುತ್ತಾರೆ ಕೆಲವುರು!

-



ಪಾಪಗಳಿಗೆ ತಕ್ಕ ಪ್ರಾಯಶ್ಚಿತ/ಪಶ್ಚಾತಾಪ...
ಪುಣ್ಯಗಳಿಗೆ ತಕ್ಕ ಪ್ರತಿಫಲ...
ಭಗವಂತನ ನ್ಯಾಯಾಲಯದಲ್ಲಷ್ಟೇ ಲಭ್ಯ 🙏✨️

-



ಪಾಪ ಪುಣ್ಯಗಳಿಗೆಲ್ಲ/ ಬದುಕಿನ ಆಗು ಹೋಗುವಿಕೆಗೆಲ್ಲ ಹಣೆಬರಹವನ್ನು ದೂಷಿಸುವವರು ತಮ್ಮ ಬದುಕನ್ನು ತಮ್ಮಿಚ್ಛೆಯಂತೆ ಬದಲಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ!

-



ನಾವು ನಮ್ಮವರು ಎನಿಸಿಕೊಂಡವರ ಬದುಕಲ್ಲಿ ಬಿತ್ತಿದ್ದು ಸ್ನೇಹ ಪ್ರೀತಿ ಸಲಹೆಗಳನ್ನೊಳಗೊಂಡ ಆತ್ಮೀಯ ಕಾಳಜಿ....
ಆದರವರು ಬಿತ್ತಿದ್ದು ಕೇವಲ ನೋವುಗಳಷ್ಟೇ.!

-



ನಮಗೆ ನಮ್ಮ ನೋವುಗಳು ಅರಿವಾಗುವಂತೆ ಇತರರ ನೋವುಗಳನ್ನು ಕೂಡಾ ಅರಿವಾಗಿ ಆ ಮರುಕ್ಷಣದಲ್ಲಿಯೇ ಸ್ವತಃ ನಮ್ಮ ನೋವುಗಳನ್ನು ನಾವು ಮರೆತು
ಅವರ ನೋವಿಗೆ ಸ್ಪಂದಿಸುತ್ತೇವೆಂದರೆ ಅಂದಿಗೆ ಮಾನವೀಯತೆಯುಳ್ಳ ಮನುಷ್ಯರಾಗಿದ್ದೇವೆಂದರ್ಥ 💙❤️

-



ಕೆಲವೊಬ್ಬರ ಜೀವನದಲ್ಲಿ ದೊಡ್ಡ ದೊಡ್ಡ ಸಂತಸಗಳಿಗೆ ಅವಕಾಶವಿರುವುದಿಲ್ಲ!
ಸಣ್ಣ ಪುಟ್ಟ ಖುಷಿಗಳನ್ನೇ ಬಹು ದೊಡ್ಡ ಮಟ್ಟದ ಸಂತಸವೆಂದವರು ಪರಿಗಣಿಸಿ ಜೀವಿಸುತ್ತಿರುತ್ತಾರೆ....
ಹೀಗಿರುವಾಗ ನಾವು ಬಯಸಲ್ಪಡುವ ಕಿರಿದಾದ ಸಂತಸಗಳನ್ನು ಆಪ್ತರೆನಿಸಿಕೊಂಡವರು ನೆರವೇರಿಸುವರೆಂದು ಭರವಸೆಯನ್ನಿತ್ತು,
ಕಿರಿದಾಗಿದ್ದ ಆಸೆಯನ್ನು ಹಿರಿದಾಗಿಸಿ ಇನ್ನೇನು
ಆ ಆಸೆಯನ್ನು ಸಂಭ್ರಮಿಸಬೇಕೆಂದು ಸಜ್ಜಾಗಿರುವಾಗ
ಅಂತಹ ಸಂತಸವನ್ನು ಈಡೇರಿಸಲಾಗುವುದಿಲ್ಲವೆಂದು
ಪ್ರತಿಭಾರಿ ಅವುಗಳನ್ನು ಅರಿತೋ ಅರಿಯದೆಯೋ
ಕಸಿಯುವುದು ಅದೆಷ್ಟು ಸರಿ?

-



ನಮ್ಮ ಮಾತುಗಳಿಗೆ ಮಹತ್ವ ಹೆಚ್ಚಾಗುವುದು
ನಾವು ಮೌನಿಗಳಾಗಿ ಪರಿವರ್ತನೆಗೊಂಡಾಗಲೇ.... 💙❤️

-



ಅವನೊಲವೇ ಹಾಗೇ ಬಳಿಯಿದ್ದಾಗ
ಹುಸಿ ಕೋಪವ ತೋರಿ ಗದರುವುದು....
ದೂರವಿದ್ದಾಗ ಮಿಸ್ಯೂ ಎನುತಾ ತನ್ತಾನೇ ಬೇಸರಗೊಳ್ಳುವುದು ❤️💙

-


Fetching ರಂಜಿತಾ ಸೋಮಶೇಖರ್ ❤️💚 Quotes