19 JAN 2018 AT 22:32

"ನನ ಮೇಲೇಕೆ ಬೇಸರ"

ನಿನ್ನ ಪ್ರೀತಿಗೆ ಕಟ್ಟಿರುವೆ ಕನಸ ಗೋಪುರ
ಇರಲಾರದೆ‌ ಬಿಟ್ಟು ಹೋದೆ ಏಕೆ ಈತರ

ನಿನ್ನ ಉಸಿರಲ್ಲೆ ಕಂಡಿದ್ದೆ ನನ್ನ ಜೀವನ
ಕೊಡಬೇಕೇನು ಈಗ ನಿನ್ನ ಪ್ರೀತಿಗು ವೇತನ
ಆಸೆಯ ಕಡಲಲ್ಲಿ ಹಡಗೊಂದು ನೂತನ
ಮುಳುಗೀತೆ ಹಾಗೆಯೆ ತೇಲಿಸದೆ ಪ್ರೀತಿನ

ನನ್ನ ಕನಸ ಪ್ರೀತಿ ಬಣ್ಣದಾ ಚಿತ್ರ ನೀನು
ಬಿಡುಸಲೆಂದು ಬಂದೆ ಆಸೆಇಂದ ನಾನು
ಕುಂಚದಿ‌ ಕಲಸಿದೆ ನಿನ್ನಂದ ಚಂದ
ನೀನೇ ಇಲ್ಲ ನನ ಕಣ್ಣ ಮುಂದ

ನಿನ್ನ ಪ್ರೀತಿಗೆ ಬರೆದ ಒಂದು ಕವನ
ಓದದೆಯೆ ಓಡಿದೆ ಪ್ರೀತಿ ಎಂದರೆ ಇದೇನ

ಒಮ್ಮೊಮ್ಮೆ ನಿನಗಾಗಿ ಕಾಯುತ್ತ‌ ದಾರೀನ
ಮರೆತು ಹೋಗಿದ್ದೆ ನಿನ್ಯೋಚನೆಯಲ್ಲಿ ನನ್ನೇನ
ಮತ್ತೆ ಎಚ್ಚೆತು ಹುಡುಕಾಡಿ ನಿನ್ನ ಕರೆದೆ
ಕಾಣದಿರ ನಿನ್ನನ್ನು ಕಣ್ಣಿರ ಕೋಡಿ ತೆರೆದೆ

ನಿನ್ನ ಪ್ರೀತಿಗೆ ಕಟ್ಟಿರುವೆ ಕನಸ ಗೋಪುರ
ಇರಲಾರದೆ‌ ಬಿಟ್ಟು ಹೋದೆ ನನಮೇಲೇಕೆ ಬೇಸರ

- Gipsy63