ನಿಟ್ಟುಸಿರಿನಲ್ಲಿ ಕಾಯುತಿಹೆ ನಿನಗಾಗಿ,
ಸವೆಯುತಿದೆ ಕಾಲ ನಿನ್ನ ಸಲುವಾಗಿ,
ಬೇರೇನೂ ತೋಚದೇ ಮತ್ತೇನೋ ಕಾಡಿದೆ,
ಅಚ್ಚರಿ ಏನಿಲ್ಲ ಮೆಚ್ಚುಗೆಯ ಒಲವಿಗೆ,
ಲೋಕವೇ ಕಾಣದು ಆ ಕುರುಡು ಪ್ರೀತಿಗೆ...!-
Live the life you love
ಸುಡು ಬಿಸಿಲಿನ ತಾಪಕ್ಕೆ ತಣ್ಣನೆಯ ಗಾಳಿ ಬೀಸುತಿರಲು,
ರವಿ ಜಾರಿ ಹೋದಮೇಲೆ ತಿಳಿಸಂಜೆಯಲಿ ಬೀಸೋ ಗಾಳಿಯನ್ನೆ ಮರೆತು,
ಬೆಳಕಿನ ಹುಡುಕಾಟದಲ್ಲಿ ತೊಡಗುವ ನಾವು,
ಚಂದಿರನ ಬೆಳಕಿಗಾಗಿ ಹಾತೊರೆವೆವು.
ಕೃತಕ ಕಾಂತಿಗೆ ಶರಣಾಗಿ ಮತ್ತೆ
ಮರೆವೆವು ಚಂದಿರನು.
ಅನುಕೂಲದ ಅಡಿಯಾಳಾಗಿ ಬದುಕುವ ಕಲೆಯನ್ನೇ ಮರೆಯುತಿವೆವು ನಾವು...!-
ಕಾಣದ ಅಲೆಗಳು ಎದೆಗಪ್ಪಳಿಸುತಿಹೆ,
ಕಾಡದೇ ಬಿಡುವುದೇ? ಎಲ್ಲಾ ನೋವು,
ಮನದ ಕಡಲು... ಶಾಂತಿಗೆ ಹಾತೋರಿಯುತಿಹೆ! ,
ತಣ್ಣಗೆ ಆಗುವುದೆಂತೋ ತಿಳಿಯದೇ...,
ಕಾಲದ ಗಾಲಿಯು ಸಾಗುತಿಹೆ ಮರೆಯಾಗುವುದೆಂಬ ಭರವಸೆಯು,
ಒಳಗಣ್ಣ ತೆರೆದರೆ ಇಲ್ಲೇ... ಈಗಲೇ ಇದೆ ನೋಡು ಶಾಂತಿ ಎನ್ನುತಿವುದು ಕಾಲವು!
ನಿನ್ನ ಪ್ರೀತಿಗೆ ಕಾಯುತಿಹ ಮನಸುಗಳು ಮರೆಸುವುದು ಎಲ್ಲಾ ದುಃಖವನು...!
-
ಅಲೆಗಳ ನಾದದಲಿ,
ಬಾನಿನ ಎತ್ತಿರದಲಿ,
ಕಣ್ಣಿಗೆ ಕಾಣುವಷ್ಟು ದೂರದಲಿ,
ಕಾಣುತಿದೆ ಅಂದವೊಂದು ,
ಕರೆದಿದೆ ಬಾ ಎಂದು,
ತೀರದಿ ನಿಂತಿರಲು,
ನೆಮ್ಮದಿಯ ಕಾಣಲು ,
ಸಾಗುವೆನು ಸಾಗರದಿ ನಿನ್ನನ್ನು ತಲುಪಲು.-
ಬರಿ ಮೌನದಿ ಕಾಯುತಿಹಳು ರಾಧೇ,
ಬರುವನೇ ಕೃಷ್ಣನೆಂದು,
ನೆನಪುಗಳ ಮೆಲುಕು ಹಾಕುತ್ತಾ ,
ಮುಗುಳ್ನಗೆಯ ಬೀರುತ್ತಾ,
ನಲ್ಲನ ದಾರಿಯನ್ನೇ ನೋಡುತ್ತಾ,
ಕಾಯುತಿಹಳು ರಾಧೇ , ಕಾಯುತಿಹಳು ರಾಧೇ.
-
Moving clouds taught us that everyone must move and come back at some point and the cycle repeats itself.
Staying in one place without moving can make you lose your values.-
What hurts the most is,
We tend to care too much about people who don't care about us,
But when we realize that the people who care about us are not noticed by us.-