ಕಾಣದೂರ ಕಾನನದಲ್ಲಿ ಬದುಕೆಂಬ ಬೃಹತ್ ವೃಕ್ಷಕ್ಕೆ ಪ್ರೀತಿಯೆಂಬ ಲತೆಬಳ್ಳಿಯ ಹಬ್ಬಿಸಿದ ನಿಸರ್ಗದೇವತೆ ನನ್ನವಳು
-
ಪ್ರೇಮ ಪರ್ವತವಾಗಿ ಬೆಳೆದ🤩 ಈ ಪ್ರೀತಿಯ ಕುರಿತು
ನಾ ಬರೆಯ✍️ ಹೊರಟೆ ಒಂದು ಸೊಗಸಾದ ಶಾಯರಿ..💕
ಮನದಲ್ಲಿ ಮೂಡುವ ಪದಗಳ ಮುಡುಪಿಡುವೆ ನಿನಗಾಗಿ👸 ಕಾತರಿ.
ಪ್ರತಿಕ್ಷಣ ಚಡಪಡಿಸುತಿದ್ದ ಆ ಹೃದಯವ🥰 ಅತಿರೇಖಕ್ಕೆ ಕರೆದೊಯ್ತು ನಿನ್ನ ಅನಿರೀಕ್ಷಿತ ಹಾಜರಿ...😋💖-
ಆಕಸ್ಮಿಕ ಮುಖಭೇಟಿಯಿಂದ ಹೊತ್ತಿದ ನಮ್ಮ ಭಾಂದವ್ಯ Jyothi😻
Thanuಮನ ದೆಲ್ಲೆಡೆ ಪಸರಿಸುವ ನೆತ್ತರಾಗಿದೆ...😍
ಪ್ರತಿದಿನದ ಭೇಟಿ MeghaLoka ಕ್ಕೆ ಎರಡೇ ಹೆಜ್ಜೆ 🚶♂
Devaನ Darshanaಕ್ಕೆ ಕೊಂಡೊಯ್ದ Malliಗೆಯ 🥰ಕಂಪಂತೆ,ಒಡಗೂಡಿ ಸವಿದ ಹಾಲ್Keerನ ಸ್ವಾದದಂತೆ😋,Kushalಲೋಪಚಾರಕ್ಕೆ Sowyaತೆಯ Gangaಅರ್ಚನೆ😀
ಅದೆಷ್ಟೋ ಜಗಳಗಳು🤨 ಅದೆಷ್ಟೋ ಮುನಿಸುಗಳು😌,ಏಕತೆ ಗರಿ ಧರಿಸಲು ಕೈಗೊಂಡ ಅದೆಷ್ಟೋ Mythriಗಳು🤝 ...
ನಿಸ್ವಾರ್ಥ ಪ್ರೇಮಕ್ಕೆ💕 ನಿಸ್ಕಲ್ಮಷ ಭಾವಕ್ಕೆ👤 ನನ್ನ ಸ್ನೇಹವೇ Ankitha✍️-
ದಟ್ಟಡವಿಯ ಮಡಿಲಲ್ಲಿ ಕುಪ್ಪಳಿಸಿ ಕುಣಿವ ನವಿಲ ನಡಿಗೆಯವಳು
ಬಾನಂಗಳದ ಬಟ್ಟಲಿನಲ್ಲಿ ನಗುವ ಶ್ವೇತಕಾಂತಿಯ ತಾರೆಯಂತವಳು
ಮುಂಗಾರು ಮಾರುತದಂತೆನ್ನೆದೆಯ ಗೂಡಿಗೆ ಅಪ್ಪಳಿಸಿ ಮರೆಯಾದಳು
ಹೃದಯಸಾಗರದಾಳದಲಿ ಎಂದೂ ನಿಲುಕದ ಮುತ್ತಾದಳು-
ಬದುಕಿನ ಭಾವಸಾಗರದಲ್ಲಿ ಅಂದೊಮ್ಮೆ ಶುರುವಾದ ಪದವಿಯೆಂಬ ಪ್ರಯಾಣವು ನೆನಪುಗಳ ನಾವೆಯ ಹಿಡಿದು ದಡ ತಲುಪಿದೆ...
ಜೀವನದ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದ ಈ ಮೂರು ವರ್ಷಗಳಿಗೆ, ಅನುಭವಿಸಿದ ಸಿಹಿಕ್ಷಣಗಳಿಗೆ ಎಲ್ಲೆ ಸನಿಹವಾಗಿದೆ!!
ಒಂದೆಡೆ ಕಾಲಚಕ್ರವ ದಾಟಿ ಒಂದಜ್ಜೆ ಮುಂದೆ ಹೋಗುತ್ತಿರುವ ಖುಷಿ....
ಮತ್ತೊಂದೆಡೆ ಮತ್ತೆ ಮರಳದ ಈ ಮೂರು ವರ್ಷಗಳ ನೆನೆದರೆ ದುಃಖ....!!
"Miss u Buddies"-
ಬದುಕೆಂಬ ಭಾವಸಾಗರದಲ್ಲಿ
ಪೆಚ್ಚು ಹಿಡಿಸಿದ ಹುಚ್ಚು ಬಯಕೆ,
ಈ ಹೃದಯಕೆ ....
ತಿಳಿಯದೆ ಸಳೆದಿಹ ಪ್ರೀತಿಯ ಸುಳಿಯಲ್ಲಿ
ಅನುಕ್ಷಣ ಅನುದಿನ ನಿನ್ನದೆ ಚಳುವಳಿ...
ಇಟ್ಟಿರುವೆ ಕನಸುಗಳ ನಿನಗಾಗಿ ಬಳುವಳಿ
ಈ ಹೃದಯ ಬಡಿಯುತ್ತಿದೆ ನಿನ್ನದೇ ನೆನಪಲ್ಲಿ-
ಕಂಡ ಕನಸನ್ನು ನನಸಾಗ ಬಯಸಿದೆ ನಾನು,
ಆ ಕನಸಿಗೆ ಕೂಳಿಟ್ಟು ದೂರ ಸರಿದೆ ನೀನು.........-
ನಡುಗಡಲ ಆಳದಲ್ಲಿ ಉದಿಸಿದ ಮಾಣಿಕ್ಯ ಮಣಿ ನೀನು ,
ಆ ಮಣಿಮುಖದ ಕಾಂತಿಗೆ ಆಕರ್ಷಿತನಾಗಿರುವೆ ನಾನು!
ನನ್ನೆದೆಯ ಚಿಪ್ಪಿನಲ್ಲಿ ಅಡಗಿಸ ಬಯಸುವೆ ನಿನನ್ನು,
ಚಿಪ್ಪಿಂದ ಹೊರಬರದೆ ಆಳು ನನ್ನ ಹೃದಯ ಸಾಮ್ರಾಜ್ಯವನ್ನು........-
ನಾ ಕಂಡೆ ನಿನ್ನ ಅಂದೊಂದು ದಿನ,
ಮರೆತೆ ನನ್ನನ್ನೇ ನಾನು ಅದೇ ಕ್ಷಣ.....
ಕಟ್ಟಿದೆನು ಕನಸಲ್ಲಿ ಪ್ರೇಮಮಂದಿರವನಂದೇ!
ನಾ ಅಪೇಕ್ಷಿಸಿದ್ದು ನಿನ್ನ ಪ್ರೀತಿಯನೊಂದೇ...
ನನ್ನೆದೆಯ ಅಂಗಳದಿ ಚಿತ್ತಾರ ಬರೆದವಳಾಕೆ ನನ್ನ ಗೆಳತಿ,
ನಸುಕಿನ ಕನಸಲ್ಲಿ ಬಂದು ಕೇಳಿದರೂ ಹೇಳ್ವೆ ಅವಳಿಗೆ ಸೀಮಿತವಾದುದೆನ್ನ ಪ್ರೀತಿ....-