L Madhu MH   (LMH)
60 Followers · 45 Following

Joined 25 October 2023


Joined 25 October 2023
5 JUL AT 6:04

ಬಣ್ಣ ಬಣ್ಣದ ಅಂಗಿ
ಮಾತೆಲ್ಲ ಬರಿ ಡೋಂಗಿ
ಹೊಸಬರ ಕನಸುಗಳ ನುಂಗಿ
ಎಲ್ಲರನೂ ಮಾಡುವನು ಕಮಂಗಿ

-


2 JUL AT 15:56

ಮನಸ್ಸು, ಹೃದಯ ಒಮ್ಮೆ ತಣಿದರೆ
ಅಲ್ಲಿ ನೆನಪು ಎಂದಿಗೂ
ಚಿರಸ್ಥಾಯಿ

-


30 JUN AT 17:28

ಹಾಡು, ಕುಣಿ, ನಲಿ
ಖಂಡ ಖಂಡವಾಗಿ ಬರೆ
ಅಖಂಡವಾಗಿ ಬರೆ
ಒಂದರ ಮೇಲೊಂದು ಬರೆ
ಹುಚ್ಚು ಹೆಚ್ಚಾಗಿ ತುಸು "ಜಾಸ್ತಿನೇ " ಬರೆ
"ಭಾವಧಾರೆಯ" ಹರಿಸು
ಇನ್ನು ನಾನಿಲ್ಲಿರೆ...

-


29 JUN AT 13:17

ನಾನಿಲ್ಲಿ ನಲುಗುತಿರುವೆ
ಅವಳಲ್ಲಿ ನಲಿಯುತಿರುವಳು
ನಾ ಬಿಟ್ಟು ಬಂದ ಕಾರಣವೇ ಇರಬೇಕು

-


29 JUN AT 11:06

ಬೀದಿಯೊಳು ಒಟಗುಟ್ಟುವ ಕಪ್ಪೆ
ಮನೆಯೊಳು ಸುಮ್ಮನೆ ಇದ್ದಿತೇಕೆ
ನಾನರಿಯೆ!!

-


29 JUN AT 10:48

ಪವಿತ್ರಾತ್ಮಗಳಿಗೆ ಬೆಂಕಿ ಹಚ್ಚಿದವರು
ಸುಟ್ಟು ಭಸ್ಮವಾಗಲಿ
ದೀಪ ಹಚ್ಚಿ ಹುಡುಕು
ನನ್ನಂಥವ ನಿನಗೆ ಸಿಕ್ಕರೆ
ಬಂದು ತಿಳಿಸು
ನಾನೂ ಖುಷಿ ಪಡುವೆ

-


29 JUN AT 10:28

ಕಣ್ಣರಿಯದಿದ್ದೊಡೆ ಕರುಳರಿಯದೇನೋ?
ದೇಹಕೆ ಬೆಸದ ಬಂಧ ಮಣ್ಣಾಗುವವರೆಗೆ
ಆತ್ಮದಲ್ಲಿ ಲೀನವಾದ ಬಂಧ ಭುವಿ ಇರುವವರೆಗೆ

-


29 JUN AT 9:47

ಮುಖವಾಡ ಧರಿಸಿದ್ದರೂ
ಆ ಬದ್ಧತೆಗೆ ಮೆಚ್ಚಿದ್ದೆ
ಕಾರಣ ಅದೇನೇ ಇರಲಿ
ಪ್ರೀತಿ ಪಾತ್ರರಿಗೆ ತಿಳಿಸಬಹುದಿತ್ತು
ನೀ ಹೀಗೇಕೆ ಮಾಡಿದೆಯೋ
ಇದು ಯಕ್ಷ ಪ್ರಶ್ನೆ!!
ಈ ಸಂಕಟ, ತೊಳಲಾಟ, ಈ ನೋವು
ಅನುಭವಿಸದೇ ವಿಧಿ ಇಲ್ಲ

-


27 JUN AT 20:21

ನಂಬಿದವರಿಗೆ ದ್ರೋಹ ಬಗೆಯುವ ಕೆಲಸ

-


24 JUN AT 16:26

ಕಣ್ಣೀರ ಕೋಡಿ
ನಿನ್ನ ಭಾವ ನೋಡಿ
ಆಸೆಗಳು ಹುಡಿ
ತುಂಬಲಿಲ್ಲ ಉಡಿ
ಮುದ್ದು ಮಾತು ನುಡಿ
ಇಲ್ಲದಿರೆ ಮನಸೆಲ್ಲಾ ಬರಿ ಕಿಡಿ

-


Fetching L Madhu MH Quotes