ನಿಶ್ಯಬ್ದ ನಂಟು
ಇನ್ನೆನೂ ಬೇಕಿಲ್ಲ ಮಾತುಗಳು,
ನಮ್ಮ ಮೌನವೇ ಪ್ರೀತಿಯದು.
ನೋಟ ಒಂದೇ ಸಾಕು,
ಚೆಲ್ಲಿತು ಭಾವದ ಹೊಳೆ.
ಸದ್ಯತೆಯಲಿ ನಿನ್ನ ಸಾನ್ನಿಧ್ಯವಿತ್ತು,
ನಿನ್ನ ಅಂತರಂಗ ಸ್ಪಷ್ಟವಾಗಿತ್ತು.
ನಿಶ್ಯಬ್ದದಲಿ ನಾನರಿವೆ,
ನೀನೆನಗೆ ಸಾಕೆಂಬ ರಹಸ್ಯ
-
He sleeps late, She greets the Sun,
He hates mess, She shrugs it off,
She plans ahead, his alters suddenly,
Their love hide in silence.
They walk alone, yet side by side,
No fancy displays, just understand,
Two opposite hearts beat along,
A quite story, still never done.-
My restless, crazy heart wants to drown in devotion to you.
It yearns to lose itself in remembering you.
Please come to me, don’t torment me with your absence.
Whom shall I tell these heartaches, my friend?
These moments they refuse to pass.
Your memories haunt me every now and then.
I've turned into a hermitess, while you remain detached.
My own heart has become my enemy.-
ಸೌಮ್ಯ ಬೆಳಕು ಹೊಸ ಹಾದಿ ಪ್ರಕಟಿಸಲು,
ಮೆಲು ದನಿಯಲ್ಲಿ ಸಿಹಿ ಸುದ್ದಿ ಹೇಳಿತ್ತು,
ಪ್ರತಿ ಕಿರಣ ನೂತನ ವಿವರ ತಂದಿರಲು,
ಭರವಸೆಯ ವಾತಾವರಣ ಪಸರಿಸಿತ್ತು!-
ಮರಳಿ ಸಿಗೋಣ ಆಪ್ತಳೆ,
ಈ ವಿದಾಯ ಶಾಶ್ವತವಲ್ಲ!
ನಗು, ಹುಸಿ ಮುನಿಸು, ಜಗಳ,
ಕಳೆದಿಹೆವು ತಮಾಷೆಯಲ್ಲಿ.
ನೀನು ನಾ ಕಂಡ ವಿಭಿನ್ನ ವ್ಯಕ್ತಿ,
ನೀನೇ ನನಗುತ್ತಮ ಹಿತೈಷಿ,
ನನ್ನ ಪ್ರತಿ ಪದ ಆಲಿಸಿರುವೆ,
ಅನುಕಂಪದಿ ಸಂತೈಸಿರುವೆ!
ವಿಶಾಲ ಹೃದಯ ನಿನ್ನದು,
ಭಾವಗಳ ದಡ, ಅಕ್ಕರೆಯ ಸೆಲೆ,
ನೀನು ನೀಡಿದ ಹಿತಪಾಠ,
ನನಗೆಂದೂ ಅಳಿಯದ ಉಡುಗೊರೆ!
ಬದಲಾಗಿದೆ ನಮಗೀಗ ಪಯಣ,
ಇದು ವಿದಾಯವಲ್ಲ, ಅಲ್ಪ ವಿರಾಮ.
-
ತವರೂರ ದಾರಿ
ಅಂದೊಂದು ದಿನ ನಾ ಹೊರಟೆ,
ತವರೂರ ದಾರಿ ಹಿಡಿದು,
ಒಂದು ಮೈಲಿ ಕಳೆದಂತೆ,
ನಾನು ಪುಲಕಿತನಾಗುವೆ,
ಮನ ನಲಿಸುವ ಆ ತಾಣ,
ನನ್ನ ತಾಯಿ ಮನೆ!
ಸಪುರ ಹಾದಿ ಬದಿಯಲ್ಲಿ,
ಸಣ್ಣ ಪುಟ್ಟ ಅಂಗಡಿಗಳು,
ಪಿಸುಗುಟ್ಟುತ್ತಿದೆ ಬಾಲ್ಯದ ಕಥೆಗಳು,
ಒಮ್ಮೆ ಅಳು ಇನ್ನೊಮ್ಮೆ ನಗು,
ಕಳೆದು ಹೋಗಿರಲು ಮುಗ್ಧ ದಿನಗಳು.
ಪ್ರತಿಯೊಂದು ತಿರುವಿಗೂ ನಿಟ್ಟುಸಿರು,
ವರ್ಷಗಳು ಕೈ ಜಾರಿಹೋಗಿರಲು,
ನೆನಪುಗಳೊಂದಿಗೆ ಈ ಪಯಣ,
ಸಾಗಿಹುದು ತವರೂರ ಕಡೆಗೆ!-
ಶುಭೋದಯ
ಮುಂಜಾವಿನ ಹೊಂಬೆಳಕು,
ಭೂವಿಯನ್ನು ಮೃದುವಾಗಿ ಚುಂಬಿಸಿ,
ಇರುಳನ್ನು ಬೆಳಕಿನಿಂದ ಒಡೆಯುತಿರಲು,
ಬಾನು ಶಾಂತವಾಗಿ ಎಚ್ಚರವಾಯಿತು!
ಚಂದಿರನು ಮೆಲ್ಲನೆ ಜಾರುತಿರಲು,
ಕೇಸರಿ ರಂಗನು ಆಗಸದಿ ಚೆಲ್ಲಾಡಿ,
ಚಿನ್ನದ ಸುಳಿವಿನೊಂದಿಗೆ,
ರಾತ್ರಿಯ ರಹಸ್ಯದ ಕಥನ ಮುಕ್ತಾಯ!
ಹಕ್ಕಿಗಳ ಚಿಲಿಪಿಲಿ ಗಾನದಲಿ,
ತಾರೆಗಳು ಕ್ಷೀಣಿಸುತ್ತಿರಲು,
ಈ ವಿಸ್ಮಯದ ಅಪ್ಪುಗೆಯಲ್ಲಿ,
ಪ್ರಕೃತಿ ಸ್ತಬ್ದಾಗಿದೆ!!
-
ಸ್ತಬ್ಧ ಮರಗಳು ವರ್ಷಗಳಲ್ಲಿ ಪಿಸುಗುಟ್ಟುತ್ತವೆ,
ಅವರ ಮೌನ ಭಯ
ತಾಳ್ಮೆಯನ್ನು ಕಲಿಸುವುದು,
ಹೂವಿನ ಅರಳುವಿಕೆ, ಕ್ಷಣಿಕ ಆದರೂ
ಈ ಸೌಂದರ್ಯವನ್ನು,
ರವಿಯ ಬೆಳಕಲ್ಲಿ ಕಾಣಬಹುದು,
ಚಂಡಮಾರುತವು ಕೆರಳಬಹುದು,
ಆದರೆ ಅದೂ ಹಾದುಹೋಗುತ್ತದೆ,
ಹುಲ್ಲಿನ ಮೇಲಿನ ನೆರಳುಗಳಂತೆ,
ತೊಂದರೆಗಳು ಮರೆಯಾಗುತ್ತವೆ.-
ಭಯವೆಂಬ ಮರೀಚಿಕೆ ದೂರಾಗುವುದು,
ಇಟ್ಟ ಪ್ರತಿ ಹೆಜ್ಜೆ ಕಲಿಸುತಿರಲು ನೂತನ ಪಾಠ,
ಕರಾಳ ಇರುಳಿನ ನಂತರ ಬೆಳಕಾದಂತೆ!-
ನಿನ್ನ ಎದೆಗೂಡಿನಲ್ಲಿ ಅರಿತುಕೊಳ್ಳುವಾಸೆ,
ನಿನ್ನ ಸ್ಮರಣೆಯಲ್ಲಿ ಉಳಿಯುವಾಸೆ,
ನೀ ಕಾಣುವ ಹವಿಗನಸಿನಲ್ಲಿ ನಾ ಎಚ್ಚರವಾಗುವಾಸೆ,
ನಿನ್ನ ಕಣ್ಣೋಟದಲ್ಲಿ ನಾ ಪ್ರತಿಬಿಂಬಿಸುವಾಸೆ.-