ಪ್ರಯಾಣಿಕಳು   (ಸಂಚಾರಿಣಿ)
794 Followers · 634 Following

read more
Joined 4 July 2019


read more
Joined 4 July 2019

ಅರ್ಧ ಬಣ್ಣ ಕಳೆದುಕೊಂಡ ಕಪ್ಪಾದ ಕೂದಲುಗಳು
ತಲೆ ದಿಂಬಿಗೆ ತುದಿ ಒತ್ತಿದಾಗೊಮ್ಮೆ,ಅಂದ್ಯಾರೋ ಆಡಿದ ಅವಮಾನದ ಮಾತುಗಳು ಜೀವ ಬಂದು ಕುಣಿಯಲಿ...
ಕಣ್ಣುಗಳು ನಿದ್ರೆ ಬೇಡುವಾಗ ಮನಸಿನಾಳದಲ್ಲೆಲ್ಲೋ ಮರೆತ್ಹೋದ ಕನಸೊಂದು ಸಂದು-ಗೊಂದಿನಲ್ಲಿ ತೂರಿ ಬಂದು ತುತ್ತೂರಿ ಊದಲಿ...
ಇರುಳ ಕತ್ತಲಿನೊಳಗೆ ಹೃದಯ ಬೆಳಕನ್ಹುಡುಕುವಾಗ ಮಡಚಿಟ್ಟ ಧೂಳ್ಹಿಡಿದ ಹಳೇ ಪುಸ್ತಕದ ಅಕ್ಷರಗಳೆಲ್ಲಾ ಮೈಕೊಡವಿ ಏಳಲಿ...

-



ಮುಗಿದು ಹೋಗುವ
ಬದುಕು ಕಾನನದ
ನಡು ಮಧ್ಯೆದಲ್ಲಿ
ಹರಿವ ತೊರೆಯಂತೆ...
ಅದಕ್ಕೇ,ಇರಬೇಕು ಅಲ್ಲಲ್ಲಿ
ತಂಗಿದವರೆಲ್ಲರೂ ತೊರೆದು
ಹೋಗುತ್ತಾರೆ !!

-



The strength of a human being may be defined as an ability to resist failure under the action of difficulties of life...

-



ಇಡೀ ಪ್ರಪಂಚದಲ್ಲಿ ನಿನಗೋಸ್ಕರ ತೀರಾ ನಿನ್ನೊವ್ರು... ನಿನಗಾಗಿ....ಅಂತಾ ಇರೋದು ಅಂದ್ರೆ ನೀನು ಮತ್ತು ನಿನ್ನೊಳಗಿನ ಚಿರಂತನ ಆತ್ಮ ಅಷ್ಟೇ !!
ಇನ್ನು ಉಳ್ದಿರೋವ್ರು...ಉಳಿದಿರೋದೆಲ್ಲಾ.....ಯಾವ್ದೋ ಒಂದು ಮಾಯಾವಿ gaussian surfaceವೊಳಗೆ ಅಡಗಿರೋ ಕಲ್ಪನೆ, ಡಾಂಭಿಕತೆ,ಕನಸು,ಶುದ್ಧ ಸುಳ್ಳು,........., ಇತ್ಯಾದಿ ಇತ್ಯಾದಿ...

-



"ಥೂ ಜನ್ಮಕ್ಕೆ"

-



ಬಾ ಎಂದರೆ ನಾಳೆಯೇ ಮನೆ ಬಾಗಿಲು ಬಡಿಯುತ್ತದೆ...
ಯಮನೇ ಸೋತು ಹಿಂತಿರುಗಿದಾಗ ಸಾವಿಗ್ಯಾವ ಕಿಮ್ಮತ್ತು !!

-



ಬದುಕಿಗೆ ಬೆನ್ನು ತೋರಿಸಿ
ಓಡಿ ಹೋಗುವುದು ಅಷ್ಟು ಸುಲಭವಲ್ಲ !
ನೋಡಿದ ಪ್ರತಿ ಮುಖದ ಮೇಲೂ
ನನ್ನದೇ ಆತ್ಮ ಸಾಕ್ಷಿ ಬರೆದಿರುತ್ತದೆ...

-



ಹೊಸ್ತಿಲಾಚೆಗೆ ಚಾಚಿದ ಪಾದವನು
ಎಲ್ಲಿಂದಲೋ ತೇಲಿ ಬಂದ ತಂಪು ಗಾಳಿ ಮುಟ್ಹೋಗಲಿ...!!

ಆಗಸದ ನೀಲಿಯಲ್ಲಿ ನಾ ದೃಷ್ಠಿ ನೆಟ್ಟು ನಿಂತಾಗೊಮ್ಮೆ ನನ್ಹೆಸರು,ಅದರುಸಿರು ಅನಂತದ ನೆಮ್ಮದಿಯೊಳಗೆ ಲೀನವಾಗಲಿ...!!

-



ಸೋತು
ಬರುವೆನು
ಗುರುವೆ
ನಿನ್ನ ಬಳಿಗೆ...
ಸದಾ ಸೋತ
ಜೀವವನಾತುಕೋ
ಒಂದು ಗಳಿಗೆ...










-



ಪದಗಳಲಿ ಮನ ಬೆರೆತು
ಎದೆ ಬೀದಿ ಸಾಲಾಯ್ತು

ರಾಗದಲಿ ಸಿಹಿ ತೂರಿ
ಮಾತೂ ಮೌನವೂ ಹಾಡಾಯ್ತು

-


Fetching ಪ್ರಯಾಣಿಕಳು Quotes