ಇಷ್ಟಪಟ್ಟ ಕಾರ್ಯ, ಘಟನೆ ವಿಷಯಗಳ ಬಗ್ಗೆ ಸಾಕ್ಷಾತ್ಕಾರವಾದಾಗ ಉಂಟಾಗುವ ಆನಂದದ ಉತ್ತುಂಗವೇ ಉತ್ಸಾಹ..
-
ಅನ್ನದಾತ ಉಪವಾಸ ಇದ್ದು ದುಡಿದು ಬೆಳೆದ ಆಹಾರ ನಮ್ಮ ತಟ್ಟೆಗೆ ಬಂದಿರುತ್ತದೆ.
ಅನ್ನ ಹಾಕಿಸಿಕೊಂಡು ಕೆಡಸತೀವಿ ಎಂದರೆ ರೈತನಿಗೆ ಅವಮಾನ ಮಾಡಿದಂಗ
ನಾವು ದುಡಿದಿದ್ದರಲ್ಲಿ ತಂದ ಆಹಾರವಾಗಿದ್ದರೆ ಅದು ಅಮೃತ ಇದ್ದಂಗ
ಇಲ್ಲಾ ಅಂದ್ರೆ ಅದು ವಿಷ ಇದ್ದಂಗ
ಪ್ರತಿ ತುತ್ತು ಉಣ್ಣುವಾಗಲೂ ನಾವು ಕೇಳಿಕೊಳ್ಳಬೇಕು ಆ ಅನ್ನ ಬೇಯಿಸುವ ನೀರು ನಮ್ಮ ಶ್ರಮದ ಬೆವರಿನ ನೀರೋ..! ಅಥವಾ ಪರರ ಕಣ್ಣೀರೋ..!! ಅಂತ.
ನಮ್ಮ ಶ್ರಮವಾದರೆ ಅದು ಅಮೃತ. ಇಲ್ಲಾ ಅಂದ್ರೆ ಅದು ವಿಷ.
-
ಒಂದೊಂದು ಅನುಭವವೂ ಒಬ್ಬೊಬ್ಬ ಶಕ್ಷಕನಿದ್ದಂತೆ
ಅನುಭವವನ್ನು ಗಳಿಸುತ್ತಲೇ ಇರು. ಅದು ನಿನ್ನನ್ನು ಬೆಳೆಸುತ್ತಲೇ ಇರುತ್ತದೆ.
ನಿಜಜೀವನ ದರ್ಶನ ನಿಜವಾದ ಮಾರ್ಗದರ್ಶನ ಮಾಡುತ್ತಲೇ ಇರುತ್ತದೆ.
ಅಭಿವೃದ್ಧಿಯ ವಾಸ್ತವ ಪಥದಲ್ಲಿ ಸಾಗಿಸುತ್ತಿರುತ್ತದೆ.
ಕಷ್ಟ ನೋವುಗಳಿಗೆ ಸಾಂತ್ವನ ಹೇಳಿ ಬದುಕಿನಲ್ಲಿ ಬೆಳೆಯುವ ದಿಕ್ಕಿಗೆ ದಿಕ್ಸೂಚಿಯಾಗುತ್ತದೆ.-
ತಾಯಿಯ ಮಮತೆಯ ಮಡಿಲು
ತಂದೆಯ ಪ್ರೇಮದ ಹೆಗಲು
ನಿಜವಾದ ಪವಿತ್ರ ಸ್ಥಳಗಳು..
ಅಪ್ಪನ ಬೆವರ ಹನಿ
ಅಮ್ಮನ ಕಷ್ಟದ ಪರಿ
ತಲೆಯಾಗಿಟ್ಕೊಂಡು ಬದುಕೋದು ಕಲಿ..-
ನೂರು ದೇವರ ಫಲ ಸಿಗಲೆಂಬ ಆಸೆಯ ಲೆಕ್ಕಾಚಾರ ಬೇಡ ಏಕೆಂದರೆ...
ಪ್ರಪಂಚದಲ್ಲಿ ಕಣ್ಣು ಕಿವಿ ಮೂಗು ನಾಲಿಗೆ ಕೈ ಕಾಲು ಇಲ್ಲದವರು ಇದ್ದಾರೆ
ಆದರೆ ಹೊಟ್ಟೆ ಇಲ್ಲದವರು ಯಾರೂ ಇಲ್ಲ. ಇದೇ ಸೃಷ್ಟಿಯ ನಿಯಮ
ಹೊಟ್ಟೆ ಇಲ್ಲದಿದ್ದರೆ ಯಾವ ಅಂಗಗಳೂ ಇರುವುದಿಲ್ಲ.
ಹಸಿದವರಿಗೆ ತುತ್ತು ಅನ್ನ ಹಾಕುವುದು ನಮ್ಮ ಹೃದಯ ವೈಶಾಲ್ಯತೆ
ನಮ್ಮ ಮನಸಾಕ್ಷಿಯು ಒಪ್ಪುವ ಶ್ರೇಷ್ಠ ಮಾನವೀಯತೆ
ಹಸಿದವರ ಹೊಟ್ಟೆ ತುಂಬಿದಾಗಿನ ಸಂತೃಪ್ತಿ ಅದೇ ಅನ್ನ ನೀಡಿದವರಿಗೆ ಅತ್ಯುನ್ನತ ಪ್ರಶಸ್ತಿ...-
ಗಾಳಿಗಿಂತ ವೇಗವಾದ ಮನಸ್ಸಿದೆ.
ಯಾರೂ ಲೇಬಲ್ ಕೇಬಲ್ ಹಾಕೊಂಡು ಭೂಮಿಗೆ ಬಂದಿಲ್ಲ. ಅಪರಿಚಿತರಾಗಿಯೇ ಭೂಮಿಗೆ ಬಂದವರು ನಾವೆಲ್ಲ
ಜನನದಿಂದ ಭೂಮಿಗೆ ಬಂದಾಗ ನಮ್ಮ ನಿಜವಾದ ಮುಖವೇ ನಮಗೆ ಕಂಡಿಲ್ಲ
ನಾವು ಏನು ಅಂತಲೂ ಗೊತ್ತಿಲ್ಲ ನಮ್ಮ ಹಣೆಯ ಮೇಲೆ ಬರೆದುಕೊಂಡು ಬಂದಿಲ್ಲ
ನಿಸರ್ಗ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದೆ ನಮ್ಮ ನಮ್ಮ ಕಾಯಕದಿಂದ ಶ್ರೇಷ್ಠರಾಗಬೇಕು ಇಲ್ಲಿ
ಮನುಷ್ಯ ಎಂದರೆ ಖಾಲಿ ಬಾಟಲಿ ಅಷ್ಟೇ.. ನಾವು ಅದರಲ್ಲಿ ಏನು ತುಂಬಿಕೊಳ್ಳುತ್ತೇವೆ ಅದೇ ನಾವಾಗುತ್ತೇವೆ. ಸದ್ಗುಣ, ಸದ್ವಿಚಾರ,ಜ್ಞಾನ ತುಂಬಿದರೆ ಶ್ರೇಷ್ಠರಾಗುತ್ತೇವೆ. ಇಲ್ಲದಿದ್ದರೆ ಕಸದ ಬುಟ್ಟಿಗೆ ಹೋಗುತ್ತೇವೆ. ಜನನದಿಂದ ಯಾರೂ ದೊಡ್ಡವರಲ್ಲ. ಮಾಡಿದ ಕರ್ಮದಿಂದ ದೊಡ್ಡವರಾಗುತ್ತೇವೆ. ಏನೇ ಆದರೂ ಅದು ಗಾಳಿಯಂತೆ ಪ್ರಸಾರವಾತ್ತಿರುತ್ತದೆ...-
🙏 ಶುಭೋದಯ 🙏
ಹಣೆಬರಹ ಬದಲಿಸುವ ಹಣೆಯ ಬೆವರು
ಹಣೆಬರಹ ಅವಾಸ್ತವ. ಹಣೆಯ ಬೆವರು ವಾಸ್ತವ.
ಹಣೆ ಬರಹ ಏನೇ ಇರಲಿ ಬೆವರು ಅದನ್ನು ಬದಲಿಸಬಹುದು.
ಕಾಯಕ ನಿಷ್ಠೆಯಿಂದ ದುಡಿಯಬೇಕು ಅಂದರೆ ನಿನ್ನ ಉಪ ಜೀವನಕ್ಕಾಗಿ, ನಿನ್ನ ಈ ಭೂಮಿಗೆ ತಂದು ಬದಕು ಕಲಿಸಿದ ತಂದೆ ತಾಯಿಯರ ಉಪಕಾರ ಸ್ಮರಣೆಗಾಗಿ, ನಿನಗೆ ಬದುಕಲು ಅವಕಾಶ ಕಲ್ಪಿಸಿದ ಪ್ರಕೃತಿ, ಸಮಾಜ, ದೇಶದ ವಿಕಾಸಕ್ಕಾಗಿ ದುಡಿಯಬೇಕು.
-
ಬದುಕಿನಲ್ಲಿ
ಸಂತೋಷ ಕಂಡುಕೊಳ್ಳಬೇಕು
ಸಂಕಟ ಪಟ್ಟುಕೊಳ್ಳೋದಲ್ಲ..!!
ಮನುಷ್ಯ
ಮನಷ್ಯನಾಗಬೇಕೇ ವಿನಹ
ನರರೂಪದ ರಾಕ್ಷಸರಾಗಲು ಅಲ್ಲ..!
-
ಕಾಲ ನಿನ್ನೊಂದಿಗೆ ಇರೋದಿಲ್ಲ
ಕಾಲದೊಂದಿಗೆ ನೀ ಇರಬೇಕು
ಒಳ್ಳೇ.. ಕಾಲ ಬರುತ್ತೆ ಅಂತ ಕಾಯ್ತ ಕುಳಿತ್ರ..!
ಆ ಒಳ್ಳೇ ಕಾಲ ಸುಳಿಯೋದೇ ಇಲ್ಲ ನಿನ್ನತ್ರ
ಇರೋ ಕಾಲವನ್ನ ಒಳ್ಳೆ ಮನಸ್ಸು
ಒಳ್ಳೆ ದೃಷ್ಟಿಕೋನ್ದಿಂದ ನೋಡಿದ್ರ ಮಾತ್ರ
ಕಾಲ ನನ್ನೊಂದಿಗಿಲ್ಲ ಎಂಬ ಪ್ರಮೆಯವೇ ಇರೋದಿಲ್ಲ
ಕಾಲ ವರ್ಷ ಎಂಬುದು ಅಮೂರ್ತ
ಅದನ್ನ ನಮ್ಮ ಮನಸ್ಸು ಬದುಕಿಗೆ
ನಿಲುಕಿಸಿಕೊಳ್ಳಲು ಮಾಡೋ ಪ್ರಯತ್ನ ಮಾತ್ರ..
-