ಜೀವನದಲ್ಲಿ ಒಂದು ಬಾರಿಯಾದರು
ಬಾನಾಡಿಯಾಗಿ ಹಾರಲೆ ಬೇಕೆಂಬ ಬಯಕೆ
-
ಭೇಟಿಯಾದ ದಿನ
ಕಂಗಳೆರೆಡು ಬೆರೆತು
ಮತ್ತೆ ನಲಿದವು....
ಮತ್ತದೇ ಮೌನ
ಮತ್ತೆ ಮತ್ತೆ ನೋಟ
ಎಷ್ಟು ಚಂದ ನಿನ್ನ ಕಣ್ಣೊಟ
ಆ ನಿನ್ನ ಮುಗ್ದ ಮನಸಿನ ಮಾಟ
ತುಟಿಯಂಚಲಿ ತುಸು ನಕ್ಕು
ಮತ್ತದೇ ಪರದಾಟ....
ಮರೆತುಬಿಡು ಎಂಬ
ಮೌನದ ಸನ್ನೆಯ ಕಾಟ
ಆದರೂ ಚಂದ ನಲ್ಲ
ನಿನ್ನ ಒಡನಾಟ
ಚಂದ ನಲ್ಲ ನಿನ್ನ
ಮೌನದೊಡನಾಟ....
-
ನಿನದೆಂತ ಹುಚ್ಚು ನೆನಪು ನನಗೆ
ಕೆಲವೊಮ್ನೆ ನವಿರು
ಕೆಲವೊಮ್ಮೆ ಬಿಗಿವುದು ಉಸಿರು...
ನಿನ್ ನೆನಪದಾಗಲೆಲ್ಲ
ದೊತ್ ಎಂದು ಭೋರ್ಗರೆವುದು ಕಣ್ಣ ಹನಿ ನೀರು
ಹೀಗೆ ಸಾಗಿದೆ ನೋವಿನ ಕಾರುಬಾರು
ಬಿಗಿದಪ್ಪಿ ಸಾಗಿದೆ ನಿನ್ ಬರುವಿಕೆಯಲೇ
ಜೀವನದ ತೇರು...
-
ಮುಂಗಾರುಮಳೆಗೆ ಮೈಯೊಡ್ಡಿ ನಿಂತೆ ಕಾದು ನಿನ್ನ ಬರುವಿಕೆಯನೇ....
ಬಾರದೆ ದೂರದಲೇ ನಿಂತೆ ಏಕೆ ಸುಮ್ಮನೆ
ಪ್ರತಿ ಹನಿಗೂ ಬೇಸರವಿದೆ ಕಾಯುತ ನಿನ್ನನೇ
ನೀ ಬಂದಾಗಲೇ ತಣಿಯುವುದೀ ಮನ
ಹರಿಸಿಬಿಡು ಪ್ರೀತಿಯ ಸೋನೆ......-
ಪ್ರತಿ ಬದುಕಿಗೊಂದು ತಿರುವಿದೆ ಕೆಲವರಿಗೆ ಅಂತ್ಯ
ಮತ್ತೆ ಕೆಲವರಿಗೆ ಆರಂಭ ಮತ್ತೆ ಕೆಲವರಿಗಂತೂ ಆರಂಭವೇ ಅಂತ್ಯ ಒಟ್ಟಿನಲ್ಲಿ ಬದುಕಿನ ಪಯಣ ನಿರೀಕ್ಷೆಯ ಕೈಗನ್ನಡಿ.ಹೀಗೆಯೇ ಸಾಗಬೇಕಿದೆ ಪ್ರತಿ ಹೆಜ್ಜೆಗೂ ಬರೆದು ಮುನ್ನುಡಿ.....-
ಸಾಗರದಾಚೆಯೆಲ್ಲೋ
ಸೌಮ್ಯತೆಯ ಸಾರುವ ನಲ್ಲ
ಮೌನದಲೇ ಹೃದಯಕದ್ದ ಮಲ್ಲ
ಪಿಸುಗುಡು ನೀ ಪ್ರೀತಿ ಮೆಲ್ಲ
ಕಾದಿದೆ ನನ್ನೀ ಜೀವ
ತಿಳಿಸಿಬಿಡು ನಿನ್ನೊಲವಿನಾಳ....-
ಮರೆವೆಯಾದರೆ ಮರೆತುಬಿಡು
ಬಿಡುವೆಯಾದರೆ ಬಿಟ್ಟುಬಿಡು
ಆದರೆ ಜೊತೆ ಬರೆದ ಭಾವ
ಬರಹಗಳನ್ನೆಲ್ಲವ ದಯಮಾಡಿ ಕೊಟ್ಟುಬಿಡು...
-
ಹೆಸರಿಲ್ಲದ ಬಂಧ ನೀನಾಗಿರುವಾಗ
ನಾ ಏನೆಂದು ಹೆಸರಿಡಲಿ ಹೇಳು
ಹೇಳದೆ ನೂರು ಭಾವ
ಮನಕೆ ಭಾರ ವಾಗಿರುವಾಗ
ಹೇಳದೆಯೇ ಮೌನವಾಗಿ
ಹೇಗೆ ಬಾಳಲಿ ಹೇಳು
ಪ್ರತಿ ಪ್ರಶ್ನೆಗೂ ಉತ್ತರ
ನೀನಾಗಿರುವಾಗ
ತೊಲಳಾಟದ ಮನಕೆ
ಬರೆವ ಪುಟವಾಗಿ ಬಿಡುವೆಯ
ಪ್ರತಿ ಪದಕೂ ಜೀವ ತುಂಬಿ
ಕವಿತೆಯ ಸಲಾಗಿ ಹೊಮ್ಮಿಬಿಡಲಿ
ಶಾಶ್ವತ ನನ್ನೀ ಬರಹದಲಿ....
-