ಏನ್... ಕಾಯೋದೋ ಏನೊ
ಕಾದೂ ಕಾದೂ ಸುಸ್ತಾಗಿ
ಮನಸ್ಸೆಲ್ಲಾ ಬೆಂಡಾಗಿ
ತಲೆ ಕೂದಲೆಲ್ಲಾ ಹಣ್ಣಾಗಿ
ಹಲ್ಲೆಲ್ಲಾ ಬಿದ್ದೋಗಿ
ನರನಾಡಿಗಳಲ್ಲೆಲ್ಲಾ ಖಸುವು ಕಳಕೊಂಡು
ಇನ್ನೇನು ಬಿದ್ದೋಗೊ ಮರದಂತಾತಲ್ಲಾ...

ಅಲ್ಲಾ....ಇನ್ನೂ ಎಷ್ಟು ದಿನಾಂತ ಕಾಯೋದೂ
ಕನಸಲ್ಲಿ ಬರ್ತೀಯಾ
ಭೋ...ನಾಟಕ ಮಾಡ್ತೀಯಾ
ಎದುರಿಗೆ ಬಾ ಅಂದರೆ ಸೊಕ್ಕು ಮಾಡ್ತೀಯಾ
ಎಷ್ಟು ಸರ್ತಿ ಕರಿಬೇಕು ಮಿಟಕಲಾಟಿ
ಇನ್ನೂ ಎಷ್ಟು ದಿನಾಂತ ಕಾಯಿಸ್ತೀಯಾ
ಅದಾದರೂ ಹೇಳು???

- 🌸ಸಂಗೀತಾ ಕಲ್ಮನೆ🌸