Divya mohan  
710 Followers · 43 Following

Confused soul
Joined 5 February 2018


Confused soul
Joined 5 February 2018
27 JUL 2020 AT 23:28

Thanks, everyone for those lovely wishes...it really made my day.😍
Felt the vibes of all good souls...!
I thank the universe for connecting me with u all...!

-


16 JUL 2020 AT 20:50


ನನ್ನ ಅಧರವನು ನೀ ಒರಸುತಿರಲು...
ಗಾಳಿಗೂ ಅಲುಗದೆ ನಾ ಮೆರೆತಿರುವೆ.

ಮಕರಂದವ ನೀ ಹೀರುವೆ ,
ದಣಿವರಿಯದ ಪರಿಮಳವ ನಾ ಬೀರುವೆ.
ಈ ನಮ್ಮ ಒಲವು, ಅಂದದ ಅಸ್ತಿತ್ವಕ್ಕೆ ಸಲವು.

-


7 JUL 2020 AT 21:11

ನಿನ್ನ ತೋಳಿನ ಬೆಚ್ಚುಗೆ ನನ್ನ ಸುತ್ತಲಿರಲು,
ನಿನ್ನ ಹಿತವಾದ ಬಿಸಿಯುಸಿರು ನನ ತಾಕುತಿರಲು,
ನನ್ನ ಎದೆಯಾಳದ ತವಕಗಳು ತಳಸೇರುವುದು...
ನೀನಿಲ್ಲದ ದಿನಗಳೂ ಇದೇ ಕಲ್ಪನೆಯಲಿ ಕಣ್ಮುಚ್ಚುವೆ...

-


16 APR 2020 AT 21:52

the survivor when the pandemic of ego, distrust , hatred and guilt spreads over.

-


30 MAR 2020 AT 18:18

ಎಲ್ಲೋ ಹರಡಿದ ಕರೋನ ವೈರಸ್ಸು
ಇಲ್ಲಿ ತಲುಪಿದೆ ನಾಡೊಳಗೆ

ಇಲ್ಲೆ ಸೋಂಕಿದ ಸ್ನೆಹ ಬಾಂದವರ
ಗುರುತಿಸದಾದೆನು ತುರ್ತುಸ್ಥಿತಿ!
ಎಲ್ಲಿದೆ ನೆರವು
ಎಲ್ಲಿದೆ ಗೆಲುವು
ಎಲ್ಲಾ ಇವೆ ಈ ನಮ್ಮೊಳಗೆ
ಸೋಂಕಿದ ಜನರನು ತಾಕದೆ ಇದ್ದರೆ
ಬದುಕುವ ಪರಿವಿದೆ ಜೀವನಕ್ಕೆ...

-


24 MAR 2020 AT 21:49

ಎಲ್ಲರೂ ಒಕ್ಕೂಡಿರಿ, ಮಾನಸಿಕವಾಗಿ...

ಮನೆಯ ನಾಲ್ಕು ಗೋಡೆಗಳೇ ಗಡಿ
ಒಳಗೇ ರಣರಂಗ
ದೂರೀಕರಿಸುವುದೇ ತಂತ್ರ
ಕೊರೋನಾದಿಂದ ಬಿಡುಗಡೆಯೇ ಗುರಿ...

-


9 MAR 2020 AT 21:23

ಅತಿ ಭೀಕರವಾದ ಅಗ್ನಿಪರ್ವತವನ್ನೂ
ಅತಿ ನಿರ್ಮಲವಾದ ಅರಣ್ಯವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ ನೆಲದಂತೆ...ಅಗಣಿತ.

-


8 MAR 2020 AT 18:11

ನನ್ನ ಜೀವನದ ಮಹಿಳೆಯರು

ಅವಳು ತನ್ನ ಖರ್ಚನ್ನು ಕಡಿಮೆ ಇಟ್ಟು , ಸಮಾರಂಭಗಳಲ್ಲಿ ತನ್ನ ಮನೆಯ ಗೌರವವನ್ನು ಮೆರೆಸುತ್ತಾಳೆ...
ತನ್ನ ಉಳಿತಾಯವನ್ನು ಅಡುಗೆ ಪದಾರ್ಥಗಳಲ್ಲಿ ಮಾಡಿ ಪ್ರೀತಿಯಿಂದ ಬಡಿಸಿ ಸಂಪತ್ತನ್ನು‌‌ ಸುರಿಯುತ್ತಾಳೆ...
ತನ್ನ ಮಗನ ಕೋಪವನು ದನಿಸಿ ತಂದೆಯ ಬೈಯ್ಗುಳವನು ಕುಂಗಿರುಸುತ್ತಾಳೆ...
ಮಗಳಿಗೆ ಧೈರ್ಯವನ್ನು ತುಂಬಿ, ಮಗನಿಗೆ ಜಾಣ್ಮೆಯನು ಪಲಗಿಸುತ್ತಾಳೆ...
ಕುಟುಂಬದ ಬಂಧಕ ಶಕ್ತಿಯಾಗಿರುವ ಮಹಿಳೆಯರಿಗೆ ಶುಭಾಶಯಗಳು!

-


2 MAR 2020 AT 15:35

ಇನ್ನೆಷ್ಟು ನೀರೆರೆಸಿದರೂ ಚಿಗುರದು...
ಇನ್ನೂ ಜೀವಂತ ಇದ್ದಾಗಲೇ ಉಳಿಸಿ
ಈಡೇರಿಸಿ, ನಿಮ್ಮ ಆಂತರಿಕ ಶಾಂತಿಯನ್ನು ಬೆಳಸಿ...

-


27 OCT 2019 AT 17:14

ನಿನ್ನೊಂದಿಗೆ ಕಳೆದ ಪ್ರತಿ ಕ್ಷಣಗಳನ್ನೂ ಸಾವಿರ ಸಾರಿ ಮತ್ತೆ ಜೀವಿಸುತ್ತಿರುವೆ...ನಾ ಕಾಣುವ ಕನಸುಗಳಲ್ಲಿ...

-


Fetching Divya mohan Quotes