ಮೌನಿಯಾಗು....ಒಂದು ಬಾರಿ ....
ಮನದೊಳಗಿನ ಮೌನದ
ಮಾತ ತಿಳಿಯಲು....!!!-
ಕಣ್ಣಿಗೆ ಕಾಣುವ ದೇವರು..
ಅಕ್ಕರೆ-ಅನುಕಂಪ...
ಪ್ರೀತಿ-ಮಮತೆಯ ತವರು...!
ಸಂಸಾರದ ಕಣ್ಣವಳು...
ಮಗುವಿನ ನಗುವಲ್ಲಿ ತನ್ನೆಲ್ಲ
ನೋವು ಮರೆತಳು....!
ಅಮ್ಮ ಎಂದರೇ ಏನೋ ಹರುಷವು...
ಕೋಪವದು ಅವಳಿಗೆ ಕ್ಷಣ ಮಾತ್ರವು...!
ನೆನಪಿರಲಿ...ಊರಿಗೆ ಅರಸನಾದರು
ತಾಯಿಗೇ ಮಗನೇ....!
ಮರೆತರದು ತರವಲ್ಲ ತಾಯಿಯ ತ್ಯಾಗವ...
ಭಗವಂತನು ಕ್ಷಮಿಸಲಾರ ತಾಯಿ
ಕಣ್ಣೀರಿನ ಶಾಪವ....!
ಅಮ್ಮಾ....ಯಾರೇನೇ ಅಂದರೂ...
ನಿ ನನ್ನ ದೇವರು.....!
ಹರಸಿ ಹಾರೈಸಲಿ ನಿನಗೆ
ಕಣ್ಣಿಗೆ ಕಾಣದ ದೇವರು..!
🖋ದಿನಕರ್ ಅಂಚನ್ ಬರಿಮರು
-
ಅಳಳು
ಹೂ ತೋಟದಲ್ಲಿ ಹೂವೊಂದು
ಸ್ವಚ್ಛಂದವಾಗಿ ಅರಳಿತ್ತು...!
ಆದರೆ
ಅರಳುವಿಕೆಯ ಹಿಂದೆ
ಬಿಸಿಲು ಗಾಳಿ ಮಳೆಯೆನ್ನದೆ
ಸಹಿಸಿಕೊಂಡಿದ್ದ ಅಳಳಿತ್ತು...!!!-
ದಾನ
ನೊಂದ ಮನಸ್ಸಿಗೆ ಅವನ ಬಳಿ
ಏನೂ ಇರಲಿಲ್ಲ ನೀಡಲು 'ದಾನ'
ಆದರೂ
ಸ್ವಚ್ಛ ಮನಸ್ಸಿನಿಂದ ಮಾಡಿದ
ಕಣ್ಣೀರೊರೆಸುತ್ತಾ ಸಾಂತ್ವನ...!!!-
ಯಾರು??
ಹೊಸತಾಗಿ ಊರಿಗೆ ಬಂದಾಗ
'ಅವನನ್ನು' ಜನ ಅಂದರು
ನೀನು ಯಾರು..??
ವರುಷಗಳ ನಂತರ ಅವನಿಗಾಗಿಯೇ
ಬಂದ ಜನ ಕೇಳುತ್ತಿದ್ದರು
'ಇವರು' ಎಲ್ಲಿರುವರು..!!
-
-:ಹನಿಗವನ:-
ಮಾತು
ಆಡಲು ಅದು ನಮಗೂ ಗೊತ್ತು
ಆದರೂ ಅಪ್ಪಿ-ತಪ್ಪಿ ತಪ್ಪಿತ್ತು
ಕ್ಷಣ ಮಾತ್ರದಲ್ಲೇ ಕಾದಿತ್ತು
ಅರಗಿಸಿಕೊಳ್ಳಲಾಗದ ಆಪತ್ತು....!!!-
ನಿರೀಕ್ಷೇಗಳೇ ಇಲ್ಲದೇ ಇರುವುದು ಒಂದು ಜೀವನ...
ನಿರೀಕ್ಷೇಗಳಿಂದಲೇ ಕಾಯುವುದು ಅದೂ ಒಂದು
ಜೀವನ..
ಹಾಗೂ...
ನಮ್ಮ ಬಗ್ಗೆ ಇತರರಲ್ಲಿ
ನಿರೀಕ್ಷೆಗಳನ್ನ ಹುಟ್ಟಿಸಿ ಸಾಧನೆಯ ದಾರಿಯಲಿ ಸಾಗುವುದು
ಒಂದು ಜೀವನ...!!
ಆಯ್ಕೆ ಮಾತ್ರ ನಮ್ಮದು...!!!-
ದೊಡ್ಡವರೆದುರು ದಡ್ಡರೆನಿಸಿದರೂ ಚಿಂತೆಯಿಲ್ಲ...
ದಡ್ಡರೆದುರು ದೊಡ್ಡವರೆನಿಸಿಕೊಳ್ಳಬೇಡ.....!!!
-
ಬದುಕುವ ಭರವಸೆಯಿರಲಿ ಸೋಲಿನ ಭಯವಲ್ಲ...
ಸಾಧನೆಯ ಹಾದಿಯಲಿ ಎಡವಿದಾಗ
ಅವರಿವರೂ ಏನಂದಾರೋ
ಎಂಬ ಚಿಂತೆಯಲ್ಲೇ.. 'ಚಿತೆ' ಏರುವ ಬದಲು
ಛಲವ ಬಿಡದೇ ಸಾಧಿಸಿ ಇತರರ
'ಚಿಂತನೆ'ಯೊಳಗೆ ಚಿರಂಜೀವಿಯಾಗು....!!!-
ಯೋಚಿಸು ಸಾವು ಬೇಕು ಎನ್ನುವ ಮುನ್ನ....!
ನೋವು ಕೊಟ್ಟವರೆಲ್ಲಾ ಶತ್ರುಗಳಲ್ಲ...
ನಲಿವಿನಲಿ ಒಂದಾದವರೆಲ್ಲಾ ಮಿತ್ರರೂ ಅಲ್ಲ.
ಈ ಕ್ಷಣದವರೆಗೆ ನಿನ್ನವರೆನ್ನುವವರೂ ನಿನ್ನವರಲ್ಲ...
ಸಾವು ನೋವುಗಳ
ನಡುವೆ ಬದುಕಿಗೊಂದು ಅರ್ಥ ನೀಡು
ನಿನಗೇ ನೀನೇ ಶಕ್ತಿ...ನಿನಗೇ ನೀನೇ ಮುಕ್ತಿ....!!
-