ನಾಳೆಗಳಿಗಾಗಿ..
ಬದುಕು ಕಾದಿದೆಯೋ ...
ಬದುಕಿಗಾಗಿ..
ನಾಳೆಗಳು ಕಾದಿದೆಯೋ....
ನಾ...ಕಾಣೆ...
ನಾಳೆಯೂ ನನ್ನೊಳಗೆ
ನಾನಿದ್ದರೆ ಸಾಕೆಂದ...
ನನ್ನೊಳಗಿನ ಮಾರ್ಮಿಕ.
✍🏻ನೂತನ್. ಬೈಸೆ..-
"ಭಾವನೆಗಳು..
ಭರವಸೆಗಳು...
ಬೇರಿಲ್ಲದ ಮರದಂತೆ...
ಬೀಸುವ ಗಾಳಿಗೆ
ಬುಡಸಮೇತ
ಬಿದ್ದಾಗಲೇ
ಅರಿವಾಗೋದು
ಬದುಕೊಂದು
ಭ್ರಮೆಯೆಂದು..."-
"ನಂಬಿಕೆಯೆನ್ನುವುದು
ಹೃದಯದೊಳಗೆ
ರೂಪಸಂತರಗೊಳ್ಳುವ ವೈರಸ್ಸು...
ಮೂಢನಂಬಿಕೆಯಲ್ಲೇ
ಸಾಯುವ ಭಯದಲ್ಲೂ...
ಸಾಗುತ್ತಿದೆಯಾಕೋ ಮನಸು..."-
"ಈ ಒಡಲೋಳಗಿನ ಪ್ರೀತಿ..
ಆ ಕಡಲೋಳಗಿನ ಮುತ್ತಿನರೀತಿ..
ಅಳಕ್ಕಿಳಿದಾಗಲೇ ನನ್ನೊಡತಿ...
ಅರಿವಾಗುವುದು ಮಾರಾಯ್ತಿ ..."-
"ಬದುಕಿನ ಕಸಿಮಾಡಲು..
ಕೃಷಿಯು ಬಡತನವ ಮೆಟ್ಟಿ
ಖುಷಿನೀಡುವುದಲ್ಲವೇನು..
ಭಾವನೆಗಳ ಹುಸಿಮಾಡದಿರಲು..
ಖುಷಿಯ ಬೊಗಸೆಯ ತುಂಬಿ..
ಕೃಷಿಮಾಡುವುದಲ್ಲವೇನು...
ಅರಿತರು ಅರಿಯಲಾರೆ ನೀನು...
ನೀ ಅರಿತರೆ ಬದುಕೇ ಸವಿಜೇನು..."-
"ಹೂವೊಂದು ಮೊಗ್ಗಾಗಿ
ಅಂದವಾಗಿ ಅರಳುವಾಗ...
ದುಂಬಿಯೊಂದು ಮುದ್ದಿಸಿ
ಮರಳುಮಾಡಿದರೇನು..
ಮುಂದಿನ ದಾರಿಯ
ನೆರಳು ಕಾಣದ ಮೇಲೆ..."-
"ಬಗೆದು ತೋರಿಸಲಾಗದು
ನಿನಗೆ ನನ್ನ ಎದೆಯ..
ನಿನ್ನಿಂದಲೇ ನಿತ್ಯವೂ
ನನ್ನೊಳಗೆ ಸೂರ್ಯೋದಯ...
ನಿನ್ನಿಂದಲೇ ಕೈಗೆಟುಕದ
ಆಕಾಶದಂತಾಗಿದೆ ಈ ಹೃದಯ..."-
"ನಗು ನಗುತ್ತಲೇ
ಸಾವಿರ ಕನಸುಗಳ ಕಟ್ಟಿ
ಕೊಲ್ಲುವುದನ್ನೇ ನಿಜವಾದ..
ಒಲವೆನ್ನಬಹುದು...
ಸೋತು ಸೋಲುತ್ತಲೇ
ಸಾವಿರ ಪಾಠಗಳನ್ನು
ಕಲಿಸುವುದನ್ನು ನಿಜವಾದ
ಗೆಲುವೆನ್ನಬಹುದು.."-
ಈ ಬಾಡಿಗೆ ಬದುಕಿನಲ್ಲಿ ..
ನಾ ಒಳ್ಳೆಯವನೋ..
ನಾ ಕೆಟ್ಟವನೋ..
ನಾ ಕಾಣೆ ಶಿವ..
ಒಮ್ಮೊಮ್ಮೆ ನನ್ನ ಒಳ್ಳೆ ಗುಣಗಳೆ
ನನ್ನ ಕೆಟ್ಟವನಾಗಿಸಿರುವಾಗ.
ನಾ ಹೇಗೆ ಹೇಳಲಿ..
ನಾ ನನ್ನ ಅರಿತರು
ನನ್ನವರು ಅರಿಯದ
ನನ್ನೊಳಗಿನ ನನ್ನವನ ಬಗ್ಗೆ..-
ನಾ.. ನಿನ್ನಲ್ಲಿ ಜೇನಿನ
ರಸವನ್ನು ಬೇಡಿದೆ...
ನೀ.. ನನಗಾಗಿ ಜೇನಿನ
ವಿಷವನ್ನು ನೀಡಿದೆ...
ನಾ ಬದುಕಲಿ ಹೇಗೆ ಹೇಳು
ವಿಷವನ್ನೇ ರಸವೆಂಬ
ಭಾವನೆಗಳ ಭ್ರಮೆಯಲ್ಲಿ...-