ಹೊಸ ಕ್ಯಾಲೆಂಡರ್ ವರುಷವನ್ನು ತುಂಬು ಹೃದಯದಿಂದ ಸ್ವಾಗತಿಸು!
ಸುಖವನ್ನು ಅನುಭವಿಸು, ದುಃಖವನ್ನು ಸ್ವೀಕರಿಸು!
ನೀ ನಗುತಾ ಎಲ್ಲರನ್ನೂ ನಗಿಸು, ನಿನ್ನವರು ಅತ್ತಾಗ ಅವರ ಕಣ್ಣುಗಳನ್ನೊರಿಸು!
ಕಷ್ಟಗಳು ಬರದಂತೆ ಇರಲು ಪ್ರಯತ್ನಿಸು, ಕಷ್ಟಗಳು ಬಂದಾಗ ಅವುಗಳನ್ನು ಸ್ವಾಗತಿಸಿ ಎದುರಿಸು!
ನಿನ್ನ ಗುರಿ ಮುಟ್ಟಲು ನಿರಂತರವಾಗಿ ಶ್ರಮಿಸು, ಅದನ್ನು ಮುಟ್ಟಲು ಪ್ರೋತ್ಸಾಹಿಸಿದ ನಿನ್ನವರನ್ನು ಸದಾ ಮನದಲ್ಲಿಟ್ಟು ಪೂಜಿಸು!
ಈ ವರುಷ ನನಗೆ ಒಳ್ಳೆಯದು ಆಗಲಿ ಎನ್ನುವುದಕ್ಕಿಂತ, ನನ್ನಿಂದ ಸದಾ ಇತರರಿಗೆ ಒಳ್ಳೆಯದೇ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸು!
2023 ನೇ ಈ ವರುಷ ಎಲ್ಲರಿಗೂ ಶುಭಕರವಾಗಲಿ!
-
Writer / ನನ್ನೊಳಗಿನ ಸಾಹಿತ್ಯದ ಹುಡುಕಾಟದಲ್ಲಿರುವ ಚಿಂತಕ
ಮುಂದೆ ಬರೋ ಸಾವಿಗೆ ಇಂದೇ ಹೆದರಬೇಡ!
ನಾಳೆ ಬರೋ ಕಷ್ಟಕ್ಕೆ ಇಂದೇ ಕೊರಗಬೇಡ!
ಹಿಂದೆ ನಡೆದ ಘಟನೆ ನೆನೆದು ಇಂದು ಚಿಂತಿಸಬೇಡ!
ಕಳೆದುಹೋದ ಘಳಿಗೆ ನೆನೆದು ಇಂದು ಮರುಗಬೇಡ!
ಇಂದು ಕಲಿತ ಪಾಠ ಎಂದಿಗೂ ಮರೆಯಬೇಡ!
ದ್ವೇಷ, ಅಸೂಯೆ, ಮದ, ಮತ್ಸರ, ವ್ಯಾಮೋಹಕ್ಕೆ ಎಂದಿಗೂ ಒಳಗಾಗಬೇಡ!
ಪ್ರೀತಿ, ಸುಖ, ಶಾಂತಿ, ನೆಮ್ಮದಿ ತಾನಾಗೇ ಬರುವುದು ನೋಡ!
ನಿನ್ನೆ ಎಂಬುದು ಕಳೆದುಹೋಗಿದೆ ಮೂಢ!
ನಾಳೆ ಎಂಬುದು ಶಿವನ ಕೈಯಲ್ಲಿದೆ ಬಿಡ!
ಅನುಭವಿಸು ಈ ಕ್ಷಣ, ಅದು ಮಾತ್ರ ನಿನ್ನದು ನೋಡ!
-
ಯಾರು ಮಾಡಲ್ಲ ತಪ್ಪು..?
ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವವರೆಗೂ,
ನಮ್ಮಿಂದ ತಪ್ಪುಗಳು ಆಗುತ್ತಲೇ ಇರುತ್ತವೆ.-
ನಿಮಗೆ ಯಾರೊಡನಾದರೂ ಮಾತನಾಡಬೇಕು ಎನಿಸಿದರೆ, ಕರೆ ಮಾಡಿ ಮಾತನಾಡಿ.
ಅದು ಬಿಟ್ಟು ಅವರೇ ಕರೆ ಮಾಡಲಿ ಎಂದು ಕಾಯುವುದು ಬೇಡ.
ನಾನೇಕೆ ಕರೆ ಮಾಡಲಿ ಎಂಬ ಹಠವೂ ಬೇಡ.
ಒಮ್ಮೆ ಆ ಯೋಚನೆಯಿಂದ ಹೊರಬಂದು ನೋಡಿ, ನಿಮ್ಮ ಮತ್ತು ಅವರ ಬಂಧ ಅದ್ಭುತವಾಗಿರುತ್ತದೆ.-
ನಿಮ್ಮ ಮಗು ಮಾಡುವ ಹಠ, ಕೋಪದಿಂದ ಆ ಕ್ಷಣ ನಿಮಗೆ ಕಿರಿಕಿರಿ ಎನಿಸುವುದು ನಿಜ!
ಆದರೆ ಒಮ್ಮೆ ನೀವು ಯೋಚಿಸಿ ನೋಡಿ.
ನಿಮ್ಮ ಮಗುವಿನ ಆ ಹಠ, ಕೋಪವೇ ನಿಮ್ಮ ಕೋಪವನ್ನು ಕಡಿಮೆಗೊಳಿಸಲು ಮತ್ತು ನಿಮ್ಮ ತಾಳ್ಮೆಯನ್ನು ಹೆಚ್ಚಿಸಿಕೊಳ್ಳಲು ಇರುವ ಒಂದು ಒಳ್ಳೆಯ ಅವಕಾಶವಲ್ಲವೇ..?-
ನಾನೇ ಶ್ರೇಷ್ಠ ಎಂಬ ಯೋಚನೆ ದೂರವಾಗಲಿ ಇಂದು!
ನನ್ನದು ಎಂಬ ಮೋಹ ನಾಶವಾಗಲಿ ಇಂದು!
ಇನ್ನೊಬ್ಬರನ್ನು ತುಳಿಯುವ ಯೋಚನೆಗಳು ಸುಟ್ಟು ಹೋಗಲಿ ಇಂದು!
ನಾನು ಎಂಬಲ್ಲಿ ನಾವು, ನನ್ನವರು ಎಂದು ಯೋಚಿಸುತ್ತಾ, ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ, ಎಲ್ಲರನ್ನೂ ನಗಿಸುತ್ತಾ, ನಾವು ನಗುತ್ತಾ ಬಾಳೋಣ!
ಎಲ್ಲರಿಗೂ ನಾಡ ಹಬ್ಬ ದಸರಾದ ಹಾರ್ದಿಕ ಶುಭಾಶಯಗಳು!-
ಮನಸ್ಸು ಮಜಾ ಮಾಡುವಾಗ, ಖುಷಿಯಿಂದ ಇದ್ದಾಗ ಹಿಗ್ಗುತ್ತದೆ.
ಕಷ್ಟ ಬಂದಾಗ, ಸೋತಾಗ ಕುಗ್ಗುತ್ತದೆ.
ಅದಕ್ಕೆ ಹೇಳೋದು ಮನಸ್ಸಿನ ನಿಯಂತ್ರಣದಲ್ಲಿ ನಾವು ಇರಬಾರದು, ನಮ್ಮ ಹಿಡಿತದಲ್ಲಿ ಮನಸ್ಸು ಇರಬೇಕು ಎಂದು.-
ಜೀವನದಲ್ಲಿ ಕಷ್ಟಗಳು ಬಂದಾಗ ಅವುಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನ ನಡೆಯುತ್ತದೆ.
ಬರೀ ಸುಖವಿದ್ದಾಗ ಜೀವನ ಎಲ್ಲಿದೆಯೋ ಅಲ್ಲೇ ಇರುತ್ತದೆ.
ಕಷ್ಟಗಳೇ ನಿಮ್ಮ ಏಳಿಗೆಗೆ ಕಾರಣ!
ಸುಖಗಳೆಲ್ಲವೂ ನಿಮ್ಮ ತಟಸ್ಥ ಜೀವನಕ್ಕೆ ಕಾರಣ!-
ನೀನು ಹಿಡಿದ ದಾರಿ ಹಲವರಿಗೆ ಸೂಕ್ತವೆನಿಸಬಹುದು.
ಕೆಲವರಿಗೆ ಮೂರ್ಖತನವೆನಿಸಬಹುದು.
ನೀನು ಆ ದಾರಿಯಲ್ಲಿ ಗೆದ್ದರೆ, ಎಲ್ಲರೂ ಹೊಗಳುತ್ತಾರೆ.
ನೀನು ಆ ದಾರಿಯಲ್ಲಿ ಸೋತರೆ, ಎಲ್ಲರೂ ತೆಗಳುತ್ತಾರೆ.
ಆ ಹೊಗಳಿಕೆ, ತೆಗಳಿಕೆಗಳು ನಿನ್ನ ಕೈಯಲ್ಲಿ ಇಲ್ಲ.
ಆದರೆ ಆ ಸೋಲು ಗೆಲುವು ನಿನ್ನ ಕೈಯಲ್ಲಿಯೇ ಇರೋದು..!-
ನಾವು ತಪ್ಪು ಮಾಡುವಾಗ, ದೇವರು ಏಕೆ ನಮ್ಮನ್ನು ಎಚ್ಚರಿಸುವುದಿಲ್ಲ ಎಂದು ಕೊರಗುತ್ತೇವೆ.
ಆದರೆ ದೇವರ ರೂಪದಲ್ಲಿ ಬರುವ ಹಲವರು, ನಮ್ಮನ್ನು ಆ ತಪ್ಪುಗಳ ಕುರಿತು ಎಚ್ಚರಿಸುವಾಗ, ಅವರ ಮಾತನ್ನು ನಿರ್ಲಕ್ಷಿಸುತ್ತೇವೆ.-