ಅವಳೆಂದರೆ
ಒಲವಿನ ಒರತೆ
ಸದಾ ಚಿಮ್ಮುವ
ಕವಿತೆ
ಹೃದಯ
ಆವರಿಸಿಬಿಡುವ
ವನಿತೆ.-
🌹 ಕಳೆದುಕೊಳ್ಳುವ ಭಯ(Fear of Losing)
ನನಗೆ ನಿನ್ನನ್ನು ಕಳೆದುಕೊಳ್ಳುವ ಭಯವಿತ್ತು…
ನೀನು ನನ್ನನ್ನು ಪ್ರೀತಿಸದೆ ಎಂದಲ್ಲ,
ನೀನು ಪ್ರೀತಿಸುತ್ತಿದ್ದೆ –
ಆದರೆ ಎಲ್ಲರಿಗೂ ಪ್ರೀತಿಯ ಬೆಳಕನ್ನು ಹರಡುತ್ತಿದ್ದೆ.
ನಿನ್ನ ನಗು ಪ್ರತಿ ಹೂವಿಗಿಂತ ಸುಂದರ,
ನಿನ್ನ ನೋಟ ಒಂದು ಮೌನದ ಸೂರ್ಯ,
ನಿನ್ನ ಮಾತುಗಳು ಹೃದಯದ ಸ್ಪರ್ಷಿಯಾಗಿ
ಎಲ್ಲರ ನೋವಿಗೂ ಔಷಧಿಯಾಗುತ್ತಿದ್ದೆ
ಎಲ್ಲರ ಮುಖದಲಿ ಹಾಸ್ಯದ ಹೊನಲು ತರಿಸಿ
ಅನೇಕ ಹೃದಯಗಳನು ನೀ ಸಂತೈಸುತ್ತಿದ್ದೆ
ಆಪ್ತರು ನಿನ್ನ ಹಿಂಬಾಲಕರಾದರು
ನಾನು ಮಾತ್ರ –
ನಿನ್ನ ಪ್ರೀತಿಯಲ್ಲಿ ಮೌನವಾಗಿ ಮಳೆತೊಯ್ದ ಗುಲಾಬಿಯ
ಹಸಿರು ಎಲೆಯಂತೆ ನಿನ್ನ ಸಂರಕ್ಷಿಸುತಲಿದ್ದೆ
ನೀನು ನನ್ನನ್ನು ನಂಬಿದ್ದೆ, ನೀನು ನನ್ನಲ್ಲಿ ಬೆಳಕು ಕಂಡಿದ್ದೆ,
ಆದರೆ ನನ್ನ ಅಂತರಾಳದ ಭಯ –
ಒಂದು ದಿನ ಸತ್ಯವಾಯಿತು…
ನೀನು ಹೇಳದೆ ಹೋದೆ,
ನಗುತ ವಿದಾಯ ಕೂಡ ಹೇಳಲಿಲ್ಲ,
ಮೌನದ ಹೊನಲು ಬಿಟ್ಟು ಹೋದೆ.
ಇಂದು ಎಲ್ಲರೂ ಹೇಳುತ್ತಾರೆ –
“ಅವಳನ್ನು ಮರೆಯಲಾಗದು,
ಅವಳ ಪ್ರೇಮ ಹೃದಯದಲ್ಲಿ ಜೀವಿಸುತ್ತದೆ.”
ಆದರೆ ನಾನು ಮಾತ್ರ…
ನಿನ್ನ ನೆನಪನ್ನು ಮುದ್ದಾಗಿ ಎತ್ತಿಕೊಂಡು,
ನಿನ್ನ ಮೌನದಲಿ ನಿದ್ರಿಸುತೆನೆ,
ನಿನ್ನ ಪ್ರೀತಿಯ ನೆರಳಲ್ಲಿ ಬಾಳುತ್ತೇನೆ –
ಇದು ನನ್ನ ಹೃದಯದಲ್ಲಿ ಮುಗಿಯದ ಹಾಡಾಗಿ
ನಿರಂತರ ಗುಣುಗುಣಿಸುತ್ತಲೆ ನನ್ನೊಂದಿಗೆ ಅಂತ್ಯ ಕಾಣುವದು.
#ಚಂದನ
-
“ಶಿಲಾ ರೂಪಗಳ ಮನದಿ ಮಾತು”
ನಗರದ ವೃತ್ತದಿ, ಉದ್ಯಾನದೊಳು ನಿಂತ,
ಬಿಸಿಲು, ಮಳೆ, ಗಾಳಿ ಎಲ್ಲವನು ಸಹಿಸಿ.
ಅಚಲವಾಗಿ ನಿಂತಿಹವು ಶಿಲಾ ರೂಪಗಳು,
ಮೌನದಿ ನಮ್ಮನು ಕಾಯುತ, ನೋಡುತ.
ಬುದ್ಧನ ಶಾಂತಿಯ ಪ್ರೀತಿ, ಗಾಂಧಿಯ ಸತ್ಯ,
ಅಂಬೇಡ್ಕರ್ ಕಂಡ ಸಮತೆಯ ಸುಂದರ ಕನಸು.
ಝಾನ್ಸಿ, ಕಿತ್ತೂರು, ಶಿವಾಜಿ, ಸಂಗೊಳ್ಳಿ
ರಾಯಣ್ಣರ ಕೆಚ್ಚೆದೆಯ ವೀರಗಾಥೆ,ಬಸವನ ವಚನ,
ವಿವೇಕಾನಂದರ ಜ್ಞಾನದೀಪ್ತಿ.ನೆಹರೂವಿನ ದೃಷ್ಟಿ,
ದೂರದ ನಾಡಿನ ಆಶಯ –
ಸ್ವಾತಂತ್ರ್ಯ ಹೋರಾಟಗಾರರ,ನಾಯಕರ
ಕಲ್ಲಿನ ರೂಪಗಳಿವು,ಮೂಕ ಸಾಕ್ಷಿಗಳಿವು,
ನಮ್ಮಾಟ, ನಗುವಿನ ಸದ್ದು, ಕೇಕೆಗಳ ಕೇಳಿ,
ಮೌನದಿ, ದೃಷ್ಟಿ ನೆಟ್ಟು ನೋಡುತ್ತಿವೆ ನಮ್ಮನು.
ಆ ಕಲ್ಲಿನ ತುಟಿಯಂಚಲಿ ನಗುವಿರಲು,
ನಮ್ಮ ಬಾಲಿಶತನಕೆ ಅಣಕವದೋ ಅದು?
ಅಥವಾ ನಮ್ಮ ಸಾಧನೆಗೆ ಮೆಚ್ಚುಗೆಯೋ?
ಅಂತರಂಗದ ಮಾತು ಹೊರ ಬರುವುದೇ ಇಲ್ಲ.
ಈ ಪ್ರತಿಮೆಗಳಿರಬೇಕೆಂದು ನೀವೇ ಬಯಸಿದ್ದಿರಾ?
ಅಥವಾ ನಮ್ಮ ಪ್ರೀತಿಯ ತೋರಿಕೆಯೋ ಇದು?
ಮಳೆಯಲಿ ನೆನೆದು, ಬಿಸಿಲಲಿ ಕಾದರು,
ನಿಂತು ಸಾರುವವು ನಿತ್ಯ ನಮಗೆ ಪಾಠ.
ನೀವು ನಿಂತಿರುವಿರಿ, ಕಾಲವನು ಮೀರಿ,
ಬೆಳಕಾಗಿ, ದಾರಿದೀಪವಾಗಿ, ಸ್ಫೂರ್ತಿಯಾಗಿ.
ಪ್ರತಿ ಪೀಳಿಗೆಗೂ ನಿಮ್ಮ ನೋಟ, ಮೌನದ ಮಾತು,
ನಮ್ಮ ಜೀವನಕ್ಕೊಂದು ನಿತ್ಯ ಸತ್ಯದ ಪಾಠ.
#ಚಂದನ-
ಅಪ್ಪನ ದಿನದಂದು ನೆನಪುಗಳ ಮೂಲಕ ನಮನ👏
ಅಪ್ಪನೆಂದರೆ ಯಜಮಾನ
ಧೈರ್ಯ,ಶಿಸ್ತು,ಗಂಭೀರ ಮನಸಿನವ
ಅಪ್ಪನೆಂದರೆ ಸ್ವಾಭಿಮಾನ,
ಅಪ್ಪನೆಂದರೆ ತಿಳಿದವ,ತಿಳಿಸುವವ
ಜೀವನದ ಬಂಡಿ ನಡೆಸುವ
ಚೈತನ್ಯ ರಥದ ಸಾರಥಿ
ಹೆಗಲ ಮೇಲೆ ಭಾರ ಹೊತ್ತು
ಸೋತರೂ ಮುಖದ ಮೇಲೆ
ಒಂದಿನಿತೂ ಬೇಸರ,ದುಖಃ
ತೋರದೆ ಎಲ್ಲ ನಿಭಾಯಿಸುವ ಧೀರ.
#ಚಂದನ-
೬ ಶಬ್ದಗಳು
ಉಕ್ಕಿನಹಕ್ಕಿ ಹಾರಿದಾಕ್ಷಣದಲ್ಲೆ
ಸೂರ್ಯಾಗ್ನಿ ಪತನವಾಗಿ
ಹಕ್ಕಿ ಭಸ್ಮವಾಯಿತು.-
#ವಿಮಾನ ದುರಂತ #ಶ್ರಧ್ಧಾಂಜಲಿ🙏🙏
ಎಲ್ಲಿದ್ದೆ ನೀನು ದೇವಾ…? ನಿನ್ನ ಕಣ್ಣೆದುರೇ ಹಾರಿದವು ಇವಿಷ್ಟು ನಿರಪರಾಧ ಜೀವಗಳು… ಆ ಗಗನ ಸ್ಪರ್ಶಿಸೋ ಕನಸುಗಳು, ಈಗ ಮಣ್ಣು ಸೇರಿ ಧೂಳಾಗಿವೆ. ಏಳಿಗೆ ಬಯಸಿದವರ ತಪ್ಪೇನು ದೇವಾ? ಎಲ್ಲೋ ದೂರದ ಊರಿನಲ್ಲಿ ಬದುಕು ಕಟ್ಟಬೇಕೆಂಬ ನಂಬಿಕೆಯಲಿ ಹಕ್ಕಿಗಳಂತೆ ಹೊರಟಿದ್ದರು… ತಮ್ಮ ಪತ್ನಿ, ತಾಯಿ, ಅತ್ತೆ, ಮಕ್ಕಳು –
ಎಲ್ಲರ ಕಣ್ತುಂಬಿ ಕಳಕಳಿಯ ವಿದಾಯವಿಟ್ಟು ಇನ್ನೊಂದು ದಡ ಸೇರಿ ಹೊಸ ಬೆಳಕು ಕಾಣ ಹೊರಟವರು, ಭೋರ್ಗರೆದ ಕತ್ತಲಿನ ಕೂಪದಲ್ಲಿ ಪ್ರೀತಿಸೊ ಹೃದಯಗಳು ಇಂದು ದಿಕ್ಕಿಲ್ಲದ ಚಿತೆಗಳಾಗಿದ್ದಾರೆ…
ಹೇ ವಿಧಿಯೇ…? ಇಂಥ ಕ್ರೂರ ಆಟವೇನು? ಹೆಜ್ಜೆಗಳ ಗುರುತು ಇಲ್ಲ,ನೆರಳೂ ಕಾಣುವುದಿಲ್ಲ. ಆಗಸದಷ್ಟು ಭರವಸೆ ತುಂಬಿದ್ದ ಮನೆಯೊಳಗೆ ಇಂದು ಮೌನವೇ ಮೇಘವಾಗಿ ಮಡುಗಟ್ಟಿದೆ… ಅಕ್ರಂದನವೊಂದು ಮುಗಿಲು ಮುಟ್ಟಿದೆ…
ಹೇ ದೇವಾ…? ಕನಸುಗಳನ್ನೇ ಹೊತ್ತಿದವರ ಜೊತೆ, ಇದೆಂಥ ನ್ಯಾಯ? ಅವರ ಉತ್ಸಾಹ, ಹಾಸ್ಯ, ಬದುಕಿನ ಬಣ್ಣ – ಈಗ ಕಪ್ಪು ಮಚ್ಚೆಯಾದಂತಿದೆ… ಸಂತಸ, ಸಂಭ್ರಮಕ್ಕೂ ಇಷ್ಟು ಕ್ಷಣಗಳ ಲೆಕ್ಕವೇ…?
ಮರೆಯಾಗಲಿ ಶೋಕ, ದುರಂತ ಮರಳದಿರಲಿ, ಮರೆಯಾದವರ ಆತ್ಮಕ್ಕೆ ಶಾಂತಿ ಸಿಗಲಿ ಒಂದು ನಿಶ್ಯಬ್ದ ಕಣ್ಣೀರಿನ ಶ್ರದ್ಧಾಂಜಲಿ…
ಓಂ ಶಾಂತಿ. 🙏🙏-
ಮರಗಳು ಮಾನವನಿಂದ ಕಲಿಯಬೇಕಿಲ್ಲ
ಮಾನವನ ಮನಗಳು ಮರಗಳಿಂದ ಕಲಿಯಬೇಕಿದೆ.
ಹಸಿರಾಗಲಿ ವನ ಹರುಷದಾಯಕವಾಗಲಿ ಮನ.🪴-
ವಿಶ್ವ ಪರಿಸರ ದಿನ
ಹಸಿರುಸಿರೇ ನಮ್ಮ ಉಸಿರು,
ಭೂಮಿ ತಾಯಿಯ ಜೀವದ ಸೆಳೆವು.
ಗಿಡ ನೆಟ್ಟು, ನೀರೆರೆದು, ಪೋಷಿಸೋಣ,
ಭವಿಷ್ಯದ ಬಾಳ ಹಸಿರಾಗಿಸೋಣ.
ನೀರು ಉಳಿಸಿ, ಗಾಳಿ ಶುದ್ಧವಾಗಿರಲಿ,
ಪರಿಸರವಿರಲಿ, ನಮ್ಮ ಬದುಕು ಚೆನ್ನಾಗಿರಲಿ.
ಇದೇ ನಮ್ಮೆಲ್ಲರ ಪ್ರಮುಖ ಗುರಿ,
ಸಮೃದ್ಧ ನಾಳೆಗಾಗಿ, ಇಂದೇ ಶಪತಗೈಯೋಣ.
🌲🪴🌾🎋🎍🌿🌴🌵🥀🪷
-