ಅವಿಜ್ಞಾನಿ ಏನೂ ಅರಿಯದವ   (Avigyani)
288 Followers 0 Following

read more
Joined 23 July 2017


read more
Joined 23 July 2017

'ಪ್ರೇಮ,

ಹೃದಯದ
ಪುರಾತನ ಪಳೆಯುಳಿಕೆ .!

-ಅವಿಜ್ಞಾನಿ

-



ದ್ವೇಷಿಸಿ ನನ್ನನ್ನು
ದಯವಿಟ್ಟು
ಪ್ರೀತಿಸಿಕೊಂಡು
ಬುದ್ಧಿ ಕಲಿತಿದ್ದೇನೆ
ಬಹಳಷ್ಟು.!

🙂

-ಅವಿಜ್ಞಾನಿ

-



ಬೆವತಿದ್ದೇನೆ
ಬದುಕ ಧಗೆಗೆ
ಹೊರ ಬಿಸಿಲು
ಸುಟ್ಟ ತಾರೀಖೇ
ನೆನಪಿಲ್ಲ.!

🙂

-ಅವಿಜ್ಞಾನಿ

-



ಈ ಥಂಡಿ
ಶಹರದ ಪುಟ್ಪಾತಿನ
ಹರಕು ಬಟ್ಟೆಗಳು
ಮಂದಿರ ಮಸೀದಿಯ
ಭವ್ಯತೆಯನ್ನು
ಅಣಕಿಸುತ್ತದೆ
ಮತ್ತು ನೀನೋ
ದೇವರನ್ನು ಬೆಚ್ಚಗಿರಿಸುತ್ತೀಯ.!

🙂

-ಅವಿಜ್ಞಾನಿ

-



ಗುರುತಿಟ್ಟು ಕೋ
ಇಂತಿಪ್ಪ ನಾನು
ಬಹುತೇಕರಂತೆ
ಸಾಯುವವನಿದ್ದೇನೆ
ಅದೇ ನೀರಸವಾಗಿ
ಗೌಜಿಯ ಸುದ್ದಿಯಾಗದೇ
ನಿನ್ನ ದಿನಮಾನದಲ್ಲಿ

-ಅವಿಜ್ಞಾನಿ

-



ಬದುಕು ನಿನ್ನಂತೆ
ನನಗೂ ಇತ್ತು
ನೀ ಬದುಕನ್ನು ಮತ್ತು
ನಾ ನಿನ್ನ
ಬದುಕುವುದನ್ನು
ಆಯ್ದುಕೊಂಡೆ

-ಅವಿಜ್ಞಾನಿ

-



ನಾನು ಸತ್ತ ಮೇಲೆ
ಹುಟ್ಟಲಿರುವ ಅನುಕಂಪದ
ಮೇಲೆ ಫರಕಿಲ್ಲ
ಬದುಕಿದ್ದಾಗ ದಕ್ಕದ
ಬಗೆಗೆ ಕುತೂಹಲ.!

🙂

-ಅವಿಜ್ಞಾನಿ

-



ಮತ್ತೀಗ ಅವರು
ಕೇಳುತ್ತಾರೆ
ಪ್ರೇಮವೆಂದರೇನೆಂದು
'ಅವಿ,
ಅವಳ ನಿಖಾಹಿನ
ತಾರೀಖಿಗೂ
ಭರಪೂರ
ಹಾರೈಸುವುದೆಂದು
ಹೇಳಿಬಿಡುತ್ತೇನೆ ಹಾಗೆಲ್ಲ.!

-ಅವಿಜ್ಞಾನಿ

-



ಚಹಾ,ಬೀಡಿ
ಮತ್ತು ನಿನ್ನ ಆತ್ಮಿಯ
ನೆನಪುಗಳು
ನನ್ನ ಹವ್ಯಾಸಗಳ
ಪಟ್ಟಿ.!

🙂
-ಅವಿಜ್ಞಾನಿ

-



ಹಸಿದಾಗ
ಸಿಗುವ ತುತ್ತಿಗಿಂತ
ಸ್ವರ್ಗ
ಮಿಗಿಲಾಗಿ
ಇರಲಾರದು ಬಹುಶಃ.!

🙂

-ಅವಿಜ್ಞಾನಿ

-


Fetching ಅವಿಜ್ಞಾನಿ ಏನೂ ಅರಿಯದವ Quotes